ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಹುಲ್ ಗಾಂಧಿ?

|
Google Oneindia Kannada News

ನವದೆಹಲಿ, ಡಿಸೆಂಬರ್ 19:ಕಳೆದ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಗಾದಿಗೆ ಏರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಶೇ.99.99 ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಅಧ್ಯಕ್ಷರನ್ನಾಗಿ ನೋಡಲು ಇಚ್ಛಿಸುತ್ತಿದ್ದಾರೆ ಎನ್ನುವ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿಕೆ ಬೆನ್ನಲ್ಲೇ ಇಂದು ನಡೆದ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಪರೋಕ್ಷವಾಗಿ ಇದೇ ಮಾತನ್ನಾಡಿದ್ದಾರೆ.

ಕಾಂಗ್ರೆಸ್ ನಾಯಕರು ಬಯಸಿದ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಸಂಬಂಧಿಸಿ ಬಹಿರಂಗ ಬೇಸರದ ಪತ್ರ ಬರೆದಿದ್ದ ಪ್ರಮುಖ ನಾಯಕರೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನಡೆಸಿದ ಸಭೆಯಲ್ಲಿ ರಾಹುಲ್ ಈ ಮಾತನ್ನಾಡಿದ್ದಾರೆ.

Rahul gandhi

ಹೊಸ ವರ್ಷದ ಆರಂಭದಲ್ಲಿ ನೂತನ ಅಧ್ಯಕ್ಷರನ್ನು ನೇಮಿಸುವುದಾಗಿ ಘೋಷಿಸಿರುವ ಕಾಂಗ್ರೆಸ್ ಈ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‌ನ ಬಹುತೇಕ ನಾಯಕರು ರಾಹುಲ್ ಗಾಂಧಿ ನಾಯಕತ್ವ ಬಯಸುತ್ತಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಕ್ಕೂ ಈಗ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರು ಬಯಸಿದ ಜವಾಬ್ದಾರಿವಹಿಸಿಕೊಳ್ಳಲು ಸಿದ್ಧ ಎಂದಿರುವುದಕ್ಕೂ ಪರಸ್ಪರ ಸಂಬಂಧ ಇರುವಂತೆ ಕಾಣಿಸುತ್ತಿದೆ.

ಅದಲ್ಲದೆ ರಾಹುಲ್ ಗಾಂಧಿ ಬಗ್ಗೆ ಯಾರಿಗೂ ವಿರೋಧವಿಲ್ಲ. ಹೊಸ ವರ್ಷದ ಆರಂಭದಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಹಿರಿಯ ನಾಯಕ ಪವನ್ ಬನ್ಸಾಲ್ ಹೇಳಿರುವುದು ಕೂಡ ಇದಕ್ಕೆ ಪೂರಕವಾಗಿದೆ.

ಇದಕ್ಕೆ ಪೂರಕವೆನ್ನುವಂತೆ ಮುಂದಿನ ಹತ್ತು ದಿನಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ವಿವಿಧ ರಾಜ್ಯಗಳ ಪ್ರಮುಖರೊಂದಿಗೆ ಸೋನಿಯಾ ಗಾಂಧಿ ಹಾಗೂ ಇತರರು ಸರಣಿ ಸಭೆ ನಡೆಸುವ ನಿರೀಕ್ಷೆ ಇದೆ.

ಈ ಸಭೆಯಲ್ಲಿನ ಒಟ್ಟಾರೆ ಅಭಿಪ್ರಾಯ ಆಧರಿಸಿ, ರಾಹುಲ್ ಗಾಂಧಿಯನ್ನು ಮತ್ತೆ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಪತ್ರಬರೆದಿರುವ ಹಿರಿಯ ನಾಯಕರು ಅಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ಆಗಬೇಕು ಎನ್ನುವ ತಮ್ಮ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ.

ಹಾಗೂ ಪಕ್ಷದ ನಾಯಕರ ನಡುವೆ ನಿರಂತರ ಮಾತುಕತೆಗಳು ಸಂವಹನ ಇರಬೇಕು. ಜತೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲೇಬೇಕು ಎಂದು ಮತ್ತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚಿದಂಬರಂ, ಆನಂದ್ ಜೋಶಿ, ಗುಲಾಂ ನಬಿ ಆಜಾದ್, ಶಶಿ ತರೂರ್ ಸೇರಿ 23 ನಾಯಕರು ಬಹಿರಂಗ ಪತ್ರ ಬರೆದ ಬಳಿಕ ನಾಯಕರೊಂದಿಗೆ ಸೋನಿಯಾಗಾಂಧಿ ನಡೆಸಿದ ಮೊದ ಸಭೆ ಇದಾಗಿದೆ. ಈ ಸಭೆಗೂ ಸೋನಿಯಾ ಆಸಕ್ತಿ ತೋರಿರಲಿಲ್ಲ ಎನ್ನಲಾಗಿದೆ. ಆದರೆ ಕಮಲ್‌ನಾಥ್ ಒತ್ತಾಯಕ್ಕೆ ಮಣಿದು ಈ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

English summary
Rahul Gandhi said he is "ready to work for the party as all desire" at a meeting today with Congress "dissenters" who had written a letter criticizing the leadership and calling for an overhaul earlier this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X