ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಭಾಷೆ ಭಾರತದ ದೌರ್ಬಲ್ಯವಲ್ಲ: ಹಿಂದಿ ಹೇರಿಕೆ ಬಗ್ಗೆ ರಾಹುಲ್ ಗಾಂಧಿ

|
Google Oneindia Kannada News

Recommended Video

ಹಿಂದಿ ಹೇರಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು ? | Rahul Gandhi

ನವದೆಹಲಿ, ಸೆಪ್ಟೆಂಬರ್ 17: ಬಹುಭಾಷಾ ನೀತಿ ಭಾರತದ ದೌರ್ಬಲ್ಯವಲ್ಲ ಎಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಎಲ್ಲೆಲ್ಲೂ ಅಪಸ್ವರ ಕೇಳಿಬರುತ್ತಿರುವ ಸಂದರ್ಭದಲ್ಲಿ ಭಾರತದ 23 ಭಾಷೆಗಳನ್ನು ನೆನೆದು ಟ್ವೀಟ್ ಮಾಡಿರು ರಾಹುಲ್ ಗಾಂಧಿ, "ಭಾರತದ ವಿವಿಧ ಭಾಷೆಗಳು ಅದರ ದೌರ್ಬಲ್ಯವಲ್ಲ" ಎಂದಿದ್ದಾರೆ. ಈ ಮೂಲಕ ಹಿಂದಿ ಹೇರಿಕೆಯ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ಭಾಷಾ ಹೋರಾಟ ಅತ್ಯಂತ ಉಗ್ರವಾಗಿರುತ್ತದೆ: ಶಾ ಗೆ ಕಮಲ್ ಹಸನ್ ಎಚ್ಚರಿಕೆಭಾಷಾ ಹೋರಾಟ ಅತ್ಯಂತ ಉಗ್ರವಾಗಿರುತ್ತದೆ: ಶಾ ಗೆ ಕಮಲ್ ಹಸನ್ ಎಚ್ಚರಿಕೆ

Rahul Gandhis Tweet on Hindi Imposition

ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಆಚರಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಒಂದು ದೇಶ, ಒಂದೇ ಭಾಷೆ" ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ದಕ್ಷಿಣ ಭಾರತದ ಕೆಲವು ರಾಜ್ಯಗಳು ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದ್ದವು.

ಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪ

ಕರ್ನಾಟಕದಲ್ಲೂ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮೌನವಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಟ್ವೀಟ್ ಮೂಲಕ ತಮ್ಮ ನಿಲುವನ್ನು ತಿಳಿಸಿದ್ದಾರೆ.

"ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ‌ ಯಾವುದೇ ತಾರತಮ್ಯ ಸಲ್ಲದು‌. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ" ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

English summary
India’s many languages are not her weakness: Rahul Gandhi's Tweet on Hindi Imposition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X