ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಪಾರ್ಟಿ: ರಾಹುಲ್ ಹೇಳಿಕೆಗೆ ಉರ್ದು ಪತ್ರಿಕೆ ಸಮಜಾಯಿಷಿ

|
Google Oneindia Kannada News

ನವದೆಹಲಿ, ಜುಲೈ 17: 'ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ' ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ತಾನು ತಿರುಚಿಲ್ಲ. ಅವರು ಹೇಳಿದ್ದನ್ನೇ ನಾವು ಪ್ರಕಟಿಸಿದ್ದೇವೆ ಎಂದು 'ಇನ್ ಕ್ವಿಲಾಬ್' ಎಂಬ ಉರ್ದು ವೃತ್ತ ಪತ್ರಿಕೆ ಸಮಜಾಯಿಷಿ ನೀಡಿದೆ.

ಜು.11 ರಂದು ಮುಸ್ಲಿಂ ಪಂಡಿತರೊಂದಿಗೆ ಸಭೆ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಭೆಯಲ್ಲಿ 'ಕಾಂಗ್ರೆಸ್ ಮುಸ್ಲಿಂ ಪಕ್ಷ' ಎಂದಿದ್ದರು. ಇದನ್ನು ಆ ಸಭೆಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿಯೇ ತಿಳಿಸಿದ್ದಾಗಿ ಪತ್ರಿಕೆ ಬರೆದುಕೊಂಡಿದೆ.

ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? ಬಿಜೆಪಿ ಟೀಕೆ!ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? ಬಿಜೆಪಿ ಟೀಕೆ!

ಈ ಕುರಿತು ಸ್ಪಷ್ಟನೆ ನೀಡಿದ ಇನ್ ಕ್ವಿಲಾಬ್ ಪತ್ರಿಕೆಯ ಪತ್ರಕರ್ತ ಮುಮ್ತಾಜ್ ಅಲಾಮ್ ರಿಜ್ವಿ, ಈ ವರದಿಗೆ ನಾವು ಬದ್ಧರಾಗಿದ್ದೇವೆ. ನಾವು ಎಂದಿಗೂ ಮುಸ್ಲಿಂ ಪಾರ್ಟಿ ಎಂಬ ಪದವನ್ನು ಬಳಸಿಲ್ಲ. ಆದರೆ ಕಾಂಗ್ರೆಸ್ ಒಂದು ಮುಸ್ಲಿಮರಿಗಾಗಿ ಇರುವ ಪಕ್ಷ ಎಂದು ಬರೆದಿದ್ದೇವೆ. ಮಯಸ್ಲಿಮರು ಸಮಾಜದಲ್ಲಿ ದುರ್ಬಲ ವರ್ಗದವರಾಗಿದ್ದಾರೆ, ಅವರು ಈ ದೇಶದ ದಲಿತರ ಇನ್ನೊಂದು ಭಾಗವೆಂಬಂತಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅವರ ಪರವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ರಿಜ್ವಿ ಹೇಳಿದ್ದಾರೆ.

Rahul Gandhis Muslim party remark creates controversy now

ಈ ಹೇಳಿಕೆಯನ್ನು ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡರೇ ಅಲ್ಲಗಳೆದಿದ್ದು, ಪತ್ರಿಕೆ ತಪ್ಪಾಗಿ ಅರ್ಥೈಸಿಕೊಂಡು ಬರೆದಿದೆ ಎಂದು ದೂರಿದ್ದರು. ಆದರೆ ಈ ಕುರಿತು ಸಮಜಾಯಷಿ ನೀಡಿ ಪತ್ರಿಕೆ ಮತ್ತೊಂದು ವರದಿಯನ್ನು ಪ್ರಕಟಿಸಿದೆ.

ರಾಹುಲ್ ಹೇಳಿಕೆಯ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.

ರಾಹುಲ್ ಹೇಳಿಕೆಗೆ ಸಂಬಮಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, 'ರಾಹುಲ್ ಗಾಂಧಿ ಇಂಥ ಹೇಳಿಕೆ ನೀಡಿದ್ದು ಸುಳ್ಳು ಮತ್ತು ಮಾಧ್ಯಮಗಳು ನಾಚಿಕೆಗೇಡಿನ ಕೆಲಸ ಮಾಡಿವೆ. ಬಿಜೆಪಿ ಎಂದಿನಂತೆ ಇದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇದು ದೇಶಕ್ಕೇ ಮಾಡುವ ಅವಮಾನ. ಇದರಿಂದ ನಮ್ಮ ಘನತೆಯೇನೂ ಕಡಿಮೆಯಾಗುವುದಿಲ್ಲ. ನಾವೆಂದಿಗೂ ಭಾರತದ ಪ್ರಜಾಪ್ರಭುತ್ವ ತತ್ವಗಳನ್ನು ಉಳಿಸಲು ಹೋರಾಡುತ್ತೇವೆ' ಎಂದು ಟ್ವೀಟ್ ಮಾಡಿದ್ದರು.

English summary
Congress president Rahul Gandhi's 'Congress is Muslim Party' remark creates a controversy now. A Urdu newspaper published this report and it defends its stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X