• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳು

|

ನವದೆಹಲಿ, ಜುಲೈ 30: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದೆದುರು ಮತ್ತೆ ಮೂರು ಪ್ರಶ್ನೆಗಳನ್ನಿಟ್ಟಿದ್ದಾರೆ.

ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ಜೊತೆಗೆ 59,000 ಕೋಟಿ ರೂ.ಗಳ ರಫೇಲ್ ಒಪ್ಪಂದ ಮಾಡಿಕೊಂಡು ಅದಕ್ಕೆ ಉದ್ಯಮಿ ಅನಿಲ್ ಅಂಬಾನಿಯನ್ನು ಮಧ್ಯವರ್ತಿಯನ್ನಾಗಿ ನೇಮಕ ಮಾಡಿದ ದಿನದಿಂದ, ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಎದುರು ಅನೇಕ ಪ್ರಶ್ನೆಗಳನ್ನು ಮುಂದಿಡುತ್ತಲೇ ಬಂದಿದ್ದಾರೆ.

ರಾಹುಲ್ ಗಾಂಧಿ ಕೇಳಿದ ಮೂರು ಪ್ರಶ್ನೆಗಳು:

1) ಪ್ರತಿ ವಿಮಾನಕ್ಕೆ 526 ಕೋಟಿ ರೂ ಬದಲು 1670 ಕೋಟಿ ರೂ. ವೆಚ್ಚ ಮಾಡಿದ್ದೇಕೆ?

2) 126 ಯುದ್ಧ ವಿಮಾನಗಳ ಬದಲು ಕೇವಲ 36 ವಿಮಾನಗಳನ್ನು ಏಕೆ ಖರೀದಿಸಲಾಗುತ್ತಿದೆ ?

3) 30,000 ಕೋಟಿ ರಫೇಲ್ ಗುತ್ತಿಗೆಯನ್ನು ಹೆಚ್ಎಎಲ್ ಬದಲು ಅನಿಲ್ ಅಂಬಾನಿಗೆ ನೀಡಿದ್ದೇಕೆ ಎನ್ನುವ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಅಂಬಾಲಾ ವಾಯುನೆಲೆಗೆ ಬಂದಿಳಿದ ರಫೇಲ್‌ಗೆ ವಾಟರ್ ಸೆಲ್ಯೂಟ್

ಉದ್ಯಮಿ ಅನಿಲ್ ಅಂಬಾನಿ ಅವರ ಅನನುಭವಿ ರಕ್ಷಣಾ ಕಂಪೆನಿಗೆ ರಫೇಲ್ ಒಪ್ಪಂದವನ್ನು ನೀಡಲು ಅನುಕೂಲವಾಗುವಂತೆ ಪ್ರಧಾನಿ ಮೋದಿ ನೋಡಿಕೊಂಡಿದ್ದಾರೆ. ಅಲ್ಲದೆ, ಅಧಿಕ ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಳೆದ ಹಲವು ವರ್ಷಗಳಿಂದ ರಾಹುಲ್ ಗಾಂಧಿ ಟೀಕೆ ಮಾಡುತ್ತಲೇ ಇದ್ದಾರೆ. ಈ ನಡುವೆ ರಫೇಲ್ ಸಂಬಂಧ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಟ್ವೀಟ್ ಮೂಲಕ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮೂರು ಪ್ರಶ್ನೆಗಳನ್ನು ಮುಂದಿಟ್ಟಿರುವ ರಾಹುಲ್ ಗಾಂಧಿ, ರಫೇಲ್ ಯುದ್ಧ ವಿಮಾನಕ್ಕಾಗಿ ಭಾರತೀಯ ವಾಯುಪಡೆಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್

ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕೂಡ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿದ್ದರು.

English summary
Congress's Rahul Gandhi tweeted a jibe at the Centre hours after the first contingent of Rafale jet fighters made a touchdown Haryana's Ambala this afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X