• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವರಾಜ ರಾಹುಲ್: ಅಚ್ಚರಿ ತಿರುವುಗಳ ಸರಮಾಲೆ

|

ನವದೆಹಲಿ, ಡಿಸೆಂಬರ್ 16 : ರಾಹುಲ್ ಗಾಂಧಿ ಬದುಕು ಹಲವು ಅಚ್ಚರಿಗಳ ಸರಮಾಲೆ. ಹುಟ್ಟಿನಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುವ ತನಕ ಅವರು ಬೆಳೆದು ಬಂದ ದಾರಿ ಸುಲಭವೇನೂ ಆಗಿರಲಿಲ್ಲ. ಕಣ್ಣೆದುರೇ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆಯ ಭೀಕರ ಹತ್ಯೆಯನ್ನು ನೋಡಿಕೊಂಡೇ ಬದುಕು ಕಟ್ಟಿಕೊಡ ರಾಹುಲ್ ಗಾಂಧಿ ಈಗಲೂ ಕುವರ.

ರಾಹುಲ್ ಯುಗಾರಂಭ: ಶುಭಹಾರೈಕೆ ಜೊತೆಯಲ್ಲೇ ಕಾಲೆಳೆತವೂ ಜೋರು!

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 87 ನೇ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ 19 ವರ್ಷಗಳಿಂದ ಪಕ್ಷ ಮುನ್ನಡೆಸಿದ ಅವರ ತಾಯಿ ಸೋನಿಯಾಗಾಂಧಿ ಅವರಿಂದ ಅಧಿಕಾರ ವಹಿಸಿಕೊಂಡರು. ಹತ್ತಾರು ಸವಾಲುಗಳನ್ನು ಮುಂದಿಟ್ಟುಕೊಂಡು ಪಕ್ಷದ ಚುಕ್ಕಾಣಿ ಹಿಡಿದಿರುವ ರಾಹುಲ್, 2019 ರಲ್ಲಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ಬಹುದೊಡ್ಡ ಚಾಲೆಂಜ್ ಬೆನ್ನಿಗಿದೆ.

ಜನರನ್ನು ಬಿಜೆಪಿ ವಿಭಜಿಸುತ್ತದೆ, ಕಾಂಗ್ರೆಸ್ ಪ್ರೀತಿಸುತ್ತದೆ: ರಾಹುಲ್ ಗಾಂಧಿ

ಇತ್ತೀಚೆಗೆ ರಾಹುಲ್ ಗಾಂಧಿ ಜಪಾನಿ ಸಮರಕಲೆ ಐಕಿಡೋ ತಾಲೀಮು ನಡೆಸುತ್ತಿರುವ ಫೋಟೊಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡು ರಾಜಕೀಯಕ್ಕೆ ಹೊರತಾಗಿ ತಮಗಿರುವ ಆಸಕ್ತಿಯ ಬಗ್ಗೆ ಹೇಳಿಕೊಂಡಿದ್ದರು. ಐಕಿಡೋ ಮಾತ್ರವಲ್ಲದೆ ರಾಹುಲ್ ಗಾಂಧಿಗೆ ಫೈರಿಂಗ್, ರೈಫಲ್ ಸೂಟಿಂಗ್, ಸ್ಕೂಬಾ ಡೈವಿಂಗ್, ಸ್ವಿಮ್ಮಿಂಗ್ ನಲ್ಲೂ ಕೂಡ ಆಸಕ್ತಿಯಿದೆ.

ವಿದ್ಯಾಭ್ಯಾಸ ಮುಗಿದ ಮೇಲೆ ಮಾನಿಟರ್ ಗ್ರೂಪ್ ನಲ್ಲಿ ಕೆಲಸ

ವಿದ್ಯಾಭ್ಯಾಸ ಮುಗಿದ ಮೇಲೆ ಮಾನಿಟರ್ ಗ್ರೂಪ್ ನಲ್ಲಿ ಕೆಲಸ

ರಾಹುಲ್ ಗಾಂಧಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದರೂ ವಿದ್ಯಾಭ್ಯಾಸ ಮಿಗಿದ ನಂತರ ಲಂಡನ್ನಿನ ಮಾನಿಟರ್ ಗ್ರೂಪ್ ನಲ್ಲಿ3 ವರ್ಷಗಳ ಕಾಲ ಕೆಲಸ ಮಾಡಿದ್ದರು. ನಂತರ 2002ರಲ್ಲಿ ಭಾರತಕ್ಕೆ ಹಿಂದಿರುಗಿದ ರಾಹುಲ್ ಮುಂಬೈ ಮೂಲದ ಹೊರಗುತ್ತಿಗೆ ಸಂಸ್ಥೆ ಬ್ಯಾಕ್ ಕೋಪ್ಸ್ ಸರ್ವೀಸಸ್ ಪ್ರೈವೇಟ್ ಲಿ. ಎಂಬ ತಂತ್ರಜ್ಞಾನ ಹೊರಗುತ್ತಿಗೆ ಸಂಸ್ಥೆಯ ನಿರ್ದೇಶಕರಾಗಿದ್ದರು.

ರಾಜಕೀಯ ರಾಹುಲ್ ಗೆ ಇಷ್ಟವಿರಲಿಲ್ಲ

ರಾಜಕೀಯ ರಾಹುಲ್ ಗೆ ಇಷ್ಟವಿರಲಿಲ್ಲ

ರಾಹುಲ್ ಗಾಂಧಿ ರಾಜಕೀಯ ಹಿನ್ನೆಲೆಯಿರುವ ಕುಟುಂಬದಿಂದ ಬಂದ ವ್ಯಕ್ತಿಯಾದರೂ ರಾಜಕೀಯ ಅವರ ಇಷ್ಟದ ಕ್ಷೇತ್ರವಲ್ಲ. ಅವರು ರಾಜಕೀಯಕ್ಕೆ ಬಂದಿದ್ದೇ ಒಲ್ಲದ ಮನಸ್ಸಿನಿಂದ, 2004ರಲ್ಲಿ ಖುದ್ದು ತಾಯಿಯ ಒತ್ತಡದಿಂದ ರಾಜಕಾರಣಕ್ಕೆ ಬಂದು, ಮೊದಲ ಸಲ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಅಮೇಥಿಯಲ್ಲಿಸ್ಪರ್ಧಿಸಿ ಗೆದ್ದರು. ಆ ಕ್ಷಣದಲ್ಲಿ ಅವರು ಪೂರ್ಣಾವಧಿ ರಾಜಕಾರಣಿಯಾದಗೆ ಇದ್ದರೂ ರಾಜಕೀಯ ಕ್ಷೇತ್ರ ಅವರನ್ನು ಸೆಳೆದುಕೊಂಡಿತು.

ಹೈಕಮಾಂಡ್ ನ ಪ್ರಮುಖ ಭಾಗವಾದ ರಾಹುಲ್

ಹೈಕಮಾಂಡ್ ನ ಪ್ರಮುಖ ಭಾಗವಾದ ರಾಹುಲ್

ತಾಯಿಯ ನೆರಳಲ್ಲೇ ರಾಜಕೀಯ ಮಾಡಬೇಕಾದ ಅನಿವಾರ್ಯತೆ ರಾಹುಲ್ ದು, ಕಾಂಗ್ರೆಸ್ ನ ಮೊದಲ ಕುಟುಂಬದ ವ್ಯಕ್ತಿ ಎಂಬ ಕಾರಣಕ್ಕೆ ಬೇರೆಲ್ಲ ಕಾಂಗ್ರೆಸಿಗರ ಕಣ್ಣಿಗೆ ಇವರೂ ಹೈಕಮಾಂಡ್ ನ ಪ್ರಮುಖ ಭಾಗವಾದರು. ಆದರೆ, ಆ ಸ್ಥಾನವನ್ನು ನಿಭಾಯಿಸಲು ಬೇಕಾದ ರಾಜಕೀಯ ಚಾಕಚಕ್ಯತೆ ಇರಲಿಲ್ಲ. ಮೇಲಾಗಿ, ರಾಜಕಾರಣದ ಬಗ್ಗೆ ಮಹಾನ್ ಆಸಕ್ತಿಯೂ ಇಲ್ಲದ ಕಾರಣ ಇವರೊಬ್ಬ ಅಪ್ರಬದ್ಧ ರಾಜಕಾರಣಿ ಎಂಬ ಟೀಕೆಗಳು ಬಂದವು.

ರಾಹುಲ್ ಗೆ ಪ್ರಧಾನ ಕಾಯರ್ಯದರ್ಶಿ ಹುದ್ದೆ

ರಾಹುಲ್ ಗೆ ಪ್ರಧಾನ ಕಾಯರ್ಯದರ್ಶಿ ಹುದ್ದೆ

2007 ರಲ್ಲಿ ರಾಹುಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಜತೆಗೆ ಯುವ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಹೊಣೆಗಾರಿಕೆಯನ್ನೂ ವಹಿಸಲಾಯಿತು. ಈ ಅವಧಿಯಲ್ಲೇ ಎರಡೂ ಸಂಘಟನೆಗಳಲ್ಲಿನ ಕಾರ್ಯಕರ್ತರ ಸಂಖ್ಯೆ 2 ಲಕ್ಷದಿಂದ 25 ಲಕ್ಷಕ್ಕೆ ಏರಿಕೆಯಾಯಿತು.

ರಾಹುಲ್ ಜೀವನಗಾಥೆ

ರಾಹುಲ್ ಜೀವನಗಾಥೆ

-ರಾಹುಲ್ ಗಾಂಧಿ ಜೂನ್- 19-1970 ರಲ್ಲಿ ಜನನ

-1975ರಿಂದ 83 ರವರೆಗೆ ದೆಹಲಿಯ ಸೇಂಟ್ ಕೊಲಂಬಸ್ ಮತ್ತು ಡೆಹ್ರಾ ಡೂನ್ ನ ದಿ ಡೂನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ

-1984- ಅಕ್ಟೋಬರ್ 31- ರಾಹುಲ್ ಅಜ್ಜಿ ಇಂದಿರಾ ಗಾಂಧಿ ಹತ್ಯೆ

-1984-89- ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಭದ್ರತಾ ಕಾರಣದಿಂದ ದೆಹಲಿಯ ಮನೆಯಲ್ಲೇ ಶಿಕ್ಷಣ

-1989- ದೆಹಲಿಯ ಸೇಂಟ್ ಸ್ಟ್ರೀಥನ್ ಕಾಲೇಜಿನಲ್ಲಿ ವ್ಯಾಸಂಗ. ಒಂದೇ ವರ್ಷದಲ್ಲಿ ವ್ಯಾಸಂಗ ಮೊಟಕು

-1990 ಅಮೆರಿಕಕ್ಕೆ ತೆರಳಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಆರಂಭ

-1991- ತಂದೆಯ ಹತ್ಯೆಯ ಕಾರಣ ರಾಹುಲ್ ಗೂ ಜೀವ ಬೆದರಿಕೆ. ಅಮೆರಿಕಾದಲ್ಲಿ ರೌಲ್ ವಿನ್ಸಿ ಹೆಸರಿನಲ್ಲಿ ಓದು

-1994- ಬಿಎ ಪದವಿ ಪೂರ್ಣ

-1995- ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ ರಾಹುಲ್ ಗಾಂಧಿಗೆ ಎಂಫಿಲ್ ಪದವಿ

-2004- ರಾಜಕೀಯಕ್ಕೆ ಪ್ರವೇಶ- ಉತ್ತರ ಪ್ರದೇಶದ ಅಮೇಠಿಯಿಂದ ಲೋಕಸಭೆಗೆ ಆಯ್ಕೆ

-2009- ಅಮೇಥಿ ಕ್ಷೇತ್ರದಿಂದ ಪುನರಾಯ್ಕೆ: ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ 21 ಸ್ಥಾನ ಬಂದಿದ್ದರ ಹಿಂದೆ ಮಹತ್ವದ ಪಾತ್ರ

-2011- ಉತ್ತರ ಪ್ರದೇಶದಲ್ಲಿ ಹೆದ್ದಾರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರ ಪರ ಹೋರಾಟ, ಬಂಧನ

-2013- ಜೈಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಆಯ್ಕೆ

-2014- ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಲೋಕಸಭೆಗೆ 3ನೇ ಬಾರಿ ಆಯ್ಕೆ

-2017- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rahul Gandhi, All India Congress Committee new president is only hope of the century old national party. He has been taken the charge as party chief when the party is struggling for existence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more