• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಮೂರು ರಾಜ್ಯಗಳಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ

|
Google Oneindia Kannada News

ದೆಹಲಿ, ಜೂನ್ 2: ದೇಶದ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕರಾ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತಮ ಲೀಡರ್ ಎಂಬ ಚರ್ಚೆ ಹಲವು ವರ್ಷದಿಂದ ನಡೆಯುತ್ತಿದೆ. ಇಡೀ ದೇಶಾದ್ಯಂತ ಮೋದಿ ವರ್ಚಸ್ಸು ಹೆಚ್ಚು ಜನಪ್ರಿಯವಾಗಿದೆ. ಹಾಗಾಗಿಯೇ ಕೇಂದ್ರದಲ್ಲಿ ಎರಡನೇ ಬಾರಿ ಮೋದಿ ಆಡಳಿತ ಬಂದಿದೆ. ಆದರೆ, ಈ ಮೂರು ರಾಜ್ಯದಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚು ಪ್ರಭಾವಿಯಾಗಿದ್ದಾರೆ.

ಪ್ರಸ್ತುತ ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ. ಈ ನಡುವೆ ಸಿ-ವೋಟರ್ 'ಸ್ಟೇಟ್ ಆಫ್ ದಿ ನೇಷನ್-2020' ಎಂಬ ಹೆಸರಿನಲ್ಲಿ ಸಮೀಕ್ಷೆ ನಡೆಸಿದೆ. ಕೇಂದ್ರದಲ್ಲಿ ಮೋದಿ ಆಡಳಿತ ವೈಖರಿ ಹೇಗಿದೆ? ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು ಹಾಗೂ ಯಾವ ರಾಜ್ಯ ಸಿಎಂ ಹೆಚ್ಚು ಪರಿಣಾಮಕಾರಿ ಎಂಬ ಹಲವು ಪ್ರಶ್ನೆಗಳಿಗೆ ಸಮೀಕ್ಷೆ ನಡೆಸಲಾಗಿದೆ.

ನರೇಂದ್ರ ಮೋದಿ ಆಡಳಿತಕ್ಕೆ ಜನತೆ ಕೊಟ್ಟ ಮಾರ್ಕ್ಸ್ ಎಷ್ಟು?ನರೇಂದ್ರ ಮೋದಿ ಆಡಳಿತಕ್ಕೆ ಜನತೆ ಕೊಟ್ಟ ಮಾರ್ಕ್ಸ್ ಎಷ್ಟು?

ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ತಲಾ 3000 ಸಾವಿರ ಜನರನ್ನು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೋದಿ ಆಡಳಿತವನ್ನು ಶೇಕಡಾ 58.36ರಷ್ಟು ಜನರು ಮೆಚ್ಚಿಕೊಂಡಿದ್ದರೆ, ಶೇಕಡಾ 16.71ರಷ್ಟು ಜನರಿಗೆ ಮೋದಿ ಆಡಳಿತ ಬಗ್ಗೆ ಅಸಮಾಧಾನ ಇದೆ. ಇನ್ನು 24.04ರಷ್ಟು ಕೆಲವು ವಿಚಾರದಲ್ಲಿ ಮಾತ್ರ ಮೋದಿಗೆ ಮೆಚ್ಚುಗೆ ನೀಡಿದ್ದಾರೆ. ಮುಂದೆ ಓದಿ...

ಆ ಮೂರು ರಾಜ್ಯದಲ್ಲಿ ಮೋದಿಗಿಂತ ರಾಹುಲ್ ಪ್ರಭಾವಿ?

ಆ ಮೂರು ರಾಜ್ಯದಲ್ಲಿ ಮೋದಿಗಿಂತ ರಾಹುಲ್ ಪ್ರಭಾವಿ?

ಸಿ-ವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡಾ 66.2ರಷ್ಟು ಜನರು ನರೇಂದ್ರ ಮೋದಿ ಆಡಳಿತ ಅತ್ಯುತ್ತಮ ಎಂದಿದ್ದಾರೆ. ಶೇಕಡಾ 23.21ರಷ್ಟು ಜನರು ರಾಹುಲ್ ಗಾಂಧಿ ಉತ್ತಮ ನಾಯಕ ಎಂದಿದ್ದಾರೆ. ಆದರೆ, ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚು ಪ್ರಭಾವಿ ಎಂದಿದ್ದಾರೆ. ಕೇರಳ, ಗೋವಾ, ತಮಿಳುನಾಡಿನಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ.

ಮೋದಿಗಿಂತ ಹೆಚ್ಚು ಫಾಲೋವರ್ಸ್

ಮೋದಿಗಿಂತ ಹೆಚ್ಚು ಫಾಲೋವರ್ಸ್

ಕೇರಳ, ತಮಿಳುನಾಡು ಹಾಗೂ ಗೋವಾದಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಪರಿಣಾಮಕಾರಿ ನಾಯಕ ಎನಿಸಿಕೊಂಡಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿಗೆ 46.87 ರಷ್ಟು ಮತ ಸಿಕ್ಕಿದ್ರೆ, ಮೋದಿಗೆ 36.4ರಷ್ಟು ವೋಟ್ ಸಿಕ್ಕಿದೆ. ಗೋವಾದಲ್ಲಿ ರಾಹುಲ್‌ಗೆ ಶೇಕಡಾ 52.4 ರಷ್ಟು ಜನಪ್ರಿಯತೆ ಇದ್ದರೆ ಮೋದಿಗೆ 41.3ರಷ್ಟು ಮೆಚ್ಚುಗೆ ಸಿಕ್ಕಿದೆ. ತಮಿಳುನಾಡಿನಲ್ಲಿ ರಾಹುಲ್‌ಗೆ 42.76ರಷ್ಟು ಮತ ಸಿಕ್ಕಿದ್ರೆ ಮೋದಿಗೆ 37.64ರಷ್ಟು ಜನ ಮಾತ್ರ ಪರವಾಗಿದ್ದಾರೆ.

ತಮಿಳುನಾಡು, ಕೇರಳ ಓಕೆ ಗೋವಾ ಅಚ್ಚರಿ

ತಮಿಳುನಾಡು, ಕೇರಳ ಓಕೆ ಗೋವಾ ಅಚ್ಚರಿ

ರಾಹುಲ್ ಗಾಂಧಿ ಹೆಚ್ಚು ಜನಪ್ರಿಯತೆ ಹೊಂದಿರುವ ರಾಜ್ಯಗಳ ಪೈಕಿ ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿದೆ. ಕೇರಳದಿಂದಲೇ ರಾಹುಲ್ ಗಾಂಧಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಗೋವಾದಲ್ಲಿ ಪ್ರಸ್ತುತ ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದೆ. ಹಾಗಿದ್ದರೂ ರಾಜ್ಯದಲ್ಲಿ ರಾಹುಲ್ ಗಾಂಧಿಗೆ ಹೆಚ್ಚು ಮತ ಸಿಕ್ಕಿರುವುದು ಅಚ್ಚರಿ ತಂದಿದೆ.

ದಕ್ಷಿಣ ರಾಜ್ಯಗಳಲ್ಲಿ ಮೋದಿ ವರ್ಚಸ್ಸು ಕಡಿಮೆ

ದಕ್ಷಿಣ ರಾಜ್ಯಗಳಲ್ಲಿ ಮೋದಿ ವರ್ಚಸ್ಸು ಕಡಿಮೆ

ಹಾಗ್ನೋಡಿದ್ರೆ, ದಕ್ಷಿಣ ಭಾರತದಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಕಡಿಮೆ ಎನ್ನಬಹುದು. ಕರ್ನಾಟಕ ಬಿಟ್ಟರೆ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಮೋದಿ ಖ್ಯಾತಿ ದೊಡ್ಡಮಟ್ಟದಲ್ಲಿಲ್ಲ. ಜೊತೆಗೆ ಜಮ್ಮು ಕಾಶ್ಮೀರ, ಉತ್ತರಾಖಂಡ, ದೆಹಲಿ, ಹರ್ಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲೂ ಬಿಜೆಪಿ ಆಡಳಿತ ಬಗ್ಗೆ ತೃಪ್ತಿದಾಯಕ ಹೊಂದಿಲ್ಲ.

English summary
C-Voter Survey: Congress leader Rahul gandhi more then popular than prime minister narendra modi in Kerala, tamilnadu, goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X