ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿಯ 3 ಪ್ರಮುಖ ಸೋಲು': ಕೇಂದ್ರದ ವಿರುದ್ಧ ರಾಹುಲ್ ಮತ್ತೆ ಟೀಕೆ

|
Google Oneindia Kannada News

ದೆಹಲಿ, ಜುಲೈ 6: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಟೀಕೆ ಮುಂದುವರಿಸಿದ್ದಾರೆ.

ಈಗಾಗಲೇ ಎರಡು ಪ್ರಮುಖ ವಿಷಯದಲ್ಲಿ ಅತಿ ದೊಡ್ಡ ಸೋಲು ಕಂಡಿರುವ ಸರ್ಕಾರ ಈಗ ಮೂರನೇ ಸೋಲು ಅನುಭವಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‌ಟಿ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವೈಫಲ್ಯದ ಜೊತೆಗೆ ಕೊರೊನಾ ವೈರಸ್ ನಿಯಂತ್ರಣದಲ್ಲಿ ಸರ್ಕಾರದ ವಿಫಲತೆ ಬಗ್ಗೆ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಚೀನಾ ವಶದಲ್ಲಿದೆಯೇ ಲಡಾಖ್? ಮೋದಿ ವಿರುದ್ಧ ರಾಹುಲ್ 'ವಿಡಿಯೋ' ಅಸ್ತ್ರಚೀನಾ ವಶದಲ್ಲಿದೆಯೇ ಲಡಾಖ್? ಮೋದಿ ವಿರುದ್ಧ ರಾಹುಲ್ 'ವಿಡಿಯೋ' ಅಸ್ತ್ರ

ಈ ಟ್ವೀಟ್ ಜೊತೆಗೆ ಪ್ರಧಾನಿ ಮೋದಿ ಅವರ ಭಾಷಣದ ತುಣುಕು, ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಕೇಸ್‌ಗಳ ಸಂಖ್ಯೆಯ ಗ್ರಾಫ್ ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಸ್ಥಾನಕ್ಕೆ ತಲುಪಿದೆ ಎಂದು ತೋರಿಸುವ ವಿಡಿಯೋ ಹಂಚಿಕೊಂಡಿದ್ದಾರೆ.

ದೇಶದಲ್ಲಿ ಕೊರೊನಾ ಬಿಕ್ಕಟ್ಟು ಎದುರಾದ ಸಂದರ್ಭದಿಂದಲೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವೂ ಕೇಂದ್ರ ಸರ್ಕಾರದ ವಿರುದ್ಧ ಮಾತಿನ ದಾಳಿ ನಡೆಸುತ್ತಲೇ ಇದೆ. ಬೇರೆ ದೇಶಗಳಲ್ಲಿ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೆಲಸ ಆಗ್ತಿದೆ, ಆದರೆ, ಭಾರತದಲ್ಲಿ ಅಧಿಕಾರ ಉಳಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು.

Rahul Gandhi Mentioned Three Failures Of Modi Govt

ಲಾಕ್‌ಡೌನ್‌ನಿಂದ ದೇಶದ ಬಡಜನರು ಹಾಗೂ ವಲಸೆ ಕಾರ್ಮಿಕರಿಗೆ ಹೆಚ್ಚು ತೊಂದರೆಯಾಗಿದೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಈ ಹಿಂದೆ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ಆದಾಗ ''ಮೋದಿ ಸರ್ಕಾರ ಕೊರೊನಾ ಹೋರಾಟದಲ್ಲಿ ಹಿಂದೆ ಸರಿಯುತ್ತಿದೆ'' ಎಂದಿದ್ದರು.

ದೇಶದಲ್ಲಿ ಸೋಮವಾರದ ವರದಿ ಪ್ರಕಾರ ದೇಶದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 6,97,413ಕ್ಕೆ ಏರಿಕೆ. ಈವರೆಗೂ 19,693 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
Congress Rahul Gandhi tweeted about PM Narendra modi govt's three major failures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X