ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಈ ಬಾರಿಯೂ ಪ್ರಧಾನಿ ಯೋಗವಿಲ್ಲ! ಯಾಕಂತೀರಾ?

|
Google Oneindia Kannada News

Recommended Video

2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗೋದು ಅನುಮಾನ | Oneindia Kannada

ನವದೆಹಲಿ, ಅಕ್ಟೋಬರ್ 05: ಕಾಂಗ್ರೆಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಬಲ್ಲ ಸಮರ್ಥ ಅಭ್ಯರ್ಥಿ ಯಾರು? ರಾಹುಲ್ ಗಾಂಧಿ? ಉಹ್ಞೂಂ, ಅಲ್ಲವೇ ಅಲ್ಲ ಅಂತಿದ್ದಾರೆ ಸ್ವತಃ ಕಾಂಗ್ರೆಸ್ ನಾಯಕರು!

ದೀಪಾವಳಿ ವಿಶೇಷ ಪುರವಣಿ

ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು ಇತ್ತೀಚೆಗಷ್ಟೇ, ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಲ್ಲ ಎಂದಿದ್ದರು. ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ಮುಖಂಡ ಶಶಿ ತರೂರ್, ಅದೇ ಅಭಿಪ್ರಾಯ ಹೊರಹಾಕಿದ್ದಾರೆ.

'ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದಕ್ಕೆ ಕಾಂಗ್ರೆಸ್ ಹೋಗುವುದಿಲ್ಲ. ಅವರು 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿಯಲ್ಲ' ಎಂದು ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಲ್ಲ ಎಂಬುದು ಸರಿ, ಹಾಗಾದರೆ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಯಾರು?

ಮೈತ್ರಿಕೂಟದ ತೀರ್ಮಾನವೇ ಅಂತಿಮ?

ಮೈತ್ರಿಕೂಟದ ತೀರ್ಮಾನವೇ ಅಂತಿಮ?

ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನ ಹಲವು ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಆದ್ದರಿಂದ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯನ್ನೇ ಆಯ್ಕೆ ಮಾಡುವುದು ಅನಿವಾರ್ಯ. 2019 ರ ಲೋಕಸಭಾ ಚುಚನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಕಾಂಗ್ರೆಸ್ಸಿಗೇ ನಷ್ಟ ಎಂಬುದು ಕಾಂಗ್ರೆಸ್ ಹಿರಿಯ ನಾಯಕರಿಗೂ ಅರ್ಥವಾದ ವಿಷಯ.

ಮೋದಿಯನ್ನು ಚೇಳು ಎಂದಿದ್ದ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ಮೋದಿಯನ್ನು ಚೇಳು ಎಂದಿದ್ದ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಣಬ್ ಮುಖರ್ಜಿ ಪ್ರಧಾನಿ ಅಭ್ಯರ್ಥಿ?

ಪ್ರಣಬ್ ಮುಖರ್ಜಿ ಪ್ರಧಾನಿ ಅಭ್ಯರ್ಥಿ?

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನೂ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತದೆಯಾ? ಪ್ರಣಬ್ ಮುಖರ್ಜಿ ಹಿರಿಯ ನಾಯಕರು, ಸಾಕಷ್ಟು ರಾಜಕೀಯ ಅನುಭವ ಹೊಂದಿರುವವರು. ಎಲ್ಲ ಪಕ್ಷದ ನಾಯಕರೊಂದಿಗೂ ವಿಶ್ವಾಸ ಗಳಿಸಿರುವವರು. ಮಾತ್ರವಲ್ಲ, ಆರ್ಥಿಕ ತಜ್ಞರೂ ಹೌದು. ಆದ್ದರಿಂದ ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗುವ ಅರ್ಹ ವ್ಯಕ್ತಿ ಎಂದು ತರೂರ್ ಹೇಳಿದ್ದಾರೆ.

ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ

ಚಿದಂಬರಂ ಪ್ರಧಾನಿಯಾಗ್ತಾರಾ?

ಚಿದಂಬರಂ ಪ್ರಧಾನಿಯಾಗ್ತಾರಾ?

ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರೂ ಪ್ರಧಾನಿ ಅಭ್ಯರ್ಥಿಯಾಗಬಲ್ಲ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ತರೂರ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ಸಿನ ಪ್ರಶ್ನಾತೀತ ನಾಯಕ. ಅವರ ಕಾರ್ಯಕರ್ತರಿಗೆ ಅವರೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಆಸೆಯಿದೆ ಎಂದು ಸಹ ತರೂರ್ ಹೇಳಿದರು.

ಅಧಿಕೃತವಾಗಿ ಘೋಷಣೆಯಾಗಿಲ್ಲ

ಅಧಿಕೃತವಾಗಿ ಘೋಷಣೆಯಾಗಿಲ್ಲ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಒಂದಿಬ್ಬರು ಅನಧಿಕೃತವಾಗಿ ಹೇಳಿದ್ದಾರಷ್ಟೆ. ಆದರೆ ಈ ಕುರಿತು ಎಲ್ಲೂ ಚರ್ಚಿಸದಂತೆ ಎಐಸಿಸಿ ಈಗಾಗಲೇ ಮುಖಂಡರಿಗೆ ತಾಕೀತು ಮಾಡಿದೆ. ನಮ್ಮದು ಯುಪಿಎ ಮೈತ್ರಿಕೂಟವಾಗಿರುವುದರಿಂದ ಎಲ್ಲಾ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ತರೂರ್ ಹೇಳಿದ್ದಾರೆ.

English summary
Senior Congress leader Shashi Tharoor has suggested that the All India Congress Committee (AICC) president Rahul Gandhi “may not be” the prime ministerial candidate in the 2019 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X