ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಬಂಗಲೆ' ಕಿತ್ತುಕೊಳ್ಳಲಿರುವ ಕೇಂದ್ರ ಸರ್ಕಾರ

|
Google Oneindia Kannada News

Recommended Video

ದೆಹಲಿ ಬಂಗಲೆ ಕಳೆದುಕೊಳ್ಳಲಿದ್ದಾರೆ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಜೂನ್ 11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 2004ರಿಂದ ದೆಹಲಿಯಲ್ಲಿ ನೆಲೆಸಿದ್ದ ಬಂಗಲೆಯನ್ನು ಕಳೆದುಕೊಳ್ಳಲಿದ್ದಾರೆ. ಯಾರು ಯಾರು ಬಂಗಲೆಯನ್ನು ಖಾಲಿ ಮಾಡಬೇಕು ಎಂಬುದರ ಬಗ್ಗೆ ಪಟ್ಟಿ ತಯಾರಿಸಿ ಲೋಕಸಭೆ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ. ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಹಂಚಿಕೆಯಾಗಿದ್ದ ಬಂಗಲೆಯೂ ಇದೆ.

ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸ ನಂ. 12, ತುಘಲಕ್ ಲೇನ್ ಬಂಗಲೆ ಸೇರಿದಂತೆ 12 ಸಂಸದರ ಬಂಗಲೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ. 2004ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಬಳಿಕ ಈ ಬಂಗಲೆಯನ್ನು ಅಧಿಕೃತ ನಿವಾಸ ಮಾಡಿಕೊಂಡಿದ್ದರು. Type 8 ಕೆಟಗೆರಿಗೆ ಸೇರಿರುವ ಈ ಬಂಗಲೆ ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಿರುತ್ತದೆ.

ವಾಜಪೇಯಿ ನೆಲೆಸಿದ್ದ ನಿವಾಸ 'ಗೃಹ' ಸಚಿವ ಅಮಿತ್ ಪಾಲುವಾಜಪೇಯಿ ನೆಲೆಸಿದ್ದ ನಿವಾಸ 'ಗೃಹ' ಸಚಿವ ಅಮಿತ್ ಪಾಲು

ಈಗ ನೀಡಿರುವ ಅಧಿಸೂಚನಂತೆ ವಿವಿಧ ಶ್ರೇಣಿಯ ಬಂಗಲೆಗಳ ತೆರವಿಗೆ ಸೂಚಿಸಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸೋಲು ಕಂಡಿದ್ದು, ಕೇರಳದ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಅಮಿತ್ ಶಾ ರಾಜ್ಯಭಾರ 3 ರಾಜ್ಯಗಳ ಚುನಾವಣೆ ಮುಗಿಯುವ ತನಕ?ಅಮಿತ್ ಶಾ ರಾಜ್ಯಭಾರ 3 ರಾಜ್ಯಗಳ ಚುನಾವಣೆ ಮುಗಿಯುವ ತನಕ?

12 ಬಂಗಲೆಗಳನ್ನು ಖಾಲಿ ಮಾಡಲು ಸೂಚನೆ ನೀಡಿರುವುದಲ್ಲದೆ, 517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡಲು ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಬಂಗಲೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಹುಲ್ ಗಾಂಧಿ ಅವರ ಬಂಗಲೆ ಹೊಸಬರಿಗೆ ಹಂಚಿಕೆಯಾಗಲು ಲಭ್ಯವಿದೆ ಎಂದು ಅಧಿಸೂಚನೆಯಲ್ಲಿದೆ. ಈ ಬಗ್ಗೆ ರಾಹುಲ್ ಗಾಂಧಿ ಅವರ ಕಚೇರಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

Rahul Gandhi likely to lose Tughlaq lane Bunglow
English summary
Rahul Gandhi likely to lose Tughlaq lane Bunglow.The Lok Sabha Secretariat has already circulated a list of vacant bungalows for 12 MPs that interestingly includes 12, Tughlaq Lane, the official residence of Congress president Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X