• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿ ಕಾಡುತ್ತಿದೆ: ರಾಹುಲ್

|

ನವದೆಹಲಿ, ಸೆಪ್ಟೆಂಬರ್ 26: ಭಾರತದಲ್ಲಿ ಡಾ. ಮನಮೋಹನ್ ಸಿಂಗ್ ಅವರಂತಹ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು 88ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಭಹಾರೈಸಿದ ರಾಹುಲ್ ಗಾಂಧಿ, ಈ ಅನಿಸಿಕೆ ಹಂಚಿಕೊಂಡಿದ್ದಾರೆ. ಡಾ.ಸಿಂಗ್ ಅವರು ಯುಪಿಎ ಆಡಳಿತದ ಎರಡು ಅವಧಿ (2004-2014)ಗೆ ಪ್ರಧಾನಿಯಾಗಿ ಕೆಲಸ ಮಾಡಿದ್ದರು.

ಕಾಂಗ್ರೆಸ್ ನೆರೆರಾಷ್ಟ್ರಗಳ ಜತೆ ಬೆಳೆಸಿದ ಸಖ್ಯವನ್ನು ಮೋದಿ ಹಾಳು ಮಾಡುತ್ತಿದ್ದಾರೆ: ರಾಹುಲ್

ಅವರ ಸಭ್ಯತೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಯ ಭಾವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಮ್ಮ ದೇಶದ ಕುರಿತ ಡಾ.ಸಿಂಗ್ ಅವರ ದೃಷ್ಟಿಕೋನದಲ್ಲಿ ರಾಜೀ ವಿಚಾರವೇ ಇಲ್ಲ. ಏಳು ಮತ್ತು ಬೀಳುಗಳ ನಡುವೆ ಭಾರತವನ್ನು ಮುನ್ನಡೆಸಿದ ಈ ಶ್ರೇಷ್ಠ ಪುತ್ರನಿಗೆ ದೇಶ ಎಂದಿಗೂ ಋಣಿಯಾಗಿರುತ್ತದೆ.

   China - Pakistan ಒಟ್ಟಿಗೆ ಬಂದ್ರು ನಾವ್ Ready to Fight | Oneindia Kannada

   ಇದೇ ರೀತಿ ಕಾಂಗ್ರೆಸ್ ಪಕ್ಷದ ಟ್ವಿಟರ್ ಹ್ಯಾಂಡಲ್​ನಲ್ಲಿ 2.47 ನಿಮಿಷದ ವಿಡಿಯೋವನ್ನೂ ಅಪ್ಲೋಡ್ ಮಾಡಲಾಗಿದ್ದು, ಡಾ.ಸಿಂಗ್ ಅವರ ಜೀವನ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

   ಮೂರು ಸಾಲಿನ ವಿವರಣೆಯೂ ಜತೆಗಿದೆ. ಅದು ಹೀಗಿದೆ- ಉನ್ನತಿಯೆಡಗಿನ ಅವರ ಪ್ರಯಾಣದಲ್ಲಿ ಕೋಟ್ಯಂತರ ಜನರನ್ನೂ ಅವರು ಜತೆಗೆ ಕೊಂಡೊಯ್ದರು. ಜಗತ್ತಿನ ಅತ್ಯಂತ ಸಮರ್ಥ ನಾಯಕರಲ್ಲಿ ಮನಮೋಹನ್ ಜಿ ಕೂಡ ಒಬ್ಬರು ಎಂದಿದ್ದಾರೆ.

   English summary
   Congress leader Rahul Gandhi has extended best wishes to former Prime Minister Manmohan Singh on his 88th birthday. In an apparent dig at PM Modi, Rahul asserted that the country feels the absence of Prime Minister with the depth of Dr.Singh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X