ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್‌: ಸಂಸತ್‌ನಲ್ಲಿ ಮೋದಿ ವಿರುದ್ಧ ಬೆಂಕಿ ಉಗುಳಿದ ರಾಹುಲ್‌

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಸಂಸತ್‌ ಚಳಿಗಾಲದ ಅಧಿವೇಶನದ ಕೊನೆ ದಿನ ಕಾಂಗ್ರೆಸ್ ಪಕ್ಷವು ರಫೆಲ್‌ ಡೀಲ್‌ ವಿಷಯದಲ್ಲಿ ಆಡಳಿತ ಪಕ್ಷದ ಮೇಲೆ ಭಾರಿ ಟೀಕಾ ಪ್ರಹಾರ ನಡೆಸಿತು. ರಾಹುಲ್ ಗಾಂಧಿ ಅವರಂತೂ ಮೋದಿ ವಿರುದ್ಧ ಬೆಂಕಿ ಉಂಡು ಉಗುಳಿದರು.

ರಫೇಲ್‌ ಡೀಲ್‌ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತಿದ್ದಂತೆ, ರಾಹುಲ್ ಗಾಂಧಿ ಅವರು ಮಾತು ಆರಂಭಿಸಿ 'ರಫೆಲ್‌ ಒಪ್ಪಂದದಲ್ಲಿ ಹಗರಣವಾಗಿಲ್ಲ, ಈ ಒಪ್ಪಂದವೇ ಹಗರಣ' ಎಂದು ಹೇಳಿದರು.

ಎಚ್‌ಎಎಲ್‌ನಿಂದ ರಫೆಲ್‌ ಒಪ್ಪಂದವನ್ನು ಕಿತ್ತುಕೊಂಡಿದ್ದು ಏಕೆ, ಒಂದೂ ವಿಮಾನ ತಯಾರಿಸದ ಅನಿಲ್ ಅಂಬಾನಿಗೆ ಒಪ್ಪಂದ ನೀಡಿದ್ದು ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

Rahul Gandhi lambasted on Narendra Modi about rafale deal

ತಮ್ಮ ಬಳಿ ಇರುವ ಗೋವಾದ ಮಂತ್ರಿ ಅವರು ಮನೋಹರ ಪರಿಕ್ಕರ್ ಹಾಗೂ ರಫೆಲ್‌ ಕಡತಗಳ ಬಗ್ಗೆ ಮಾತನಾಡಿರುವ ಆಡಿಯೋ ಫೈಲ್‌ ಒಂದನ್ನು ಬಿಡುಗಡೆ ಮಾಡಲು ಅವರು ಅನುಮತಿ ಕೋರಿದ್ದರು. ಆದರೆ ಸಭಾಧ್ಯಕ್ಷರು ಅದಕ್ಕೆ ಅನುಮತಿ ನೀಡಲಿಲ್ಲ.

ಮೋದಿ ಅವರ ಮೇಲೆ ದೇಶದ ಜನ ನಂಬಿಕೆ ಇಟ್ಟರು ಆದರೆ ಅವರು, ತಮ್ಮ ಗೆಳೆಯ ಎಎ (ಅನಿಲ್ ಅಂಬಾನಿ) ಜೇಬು ತುಂಬಿಸಲು ಭಾರತದ ಅವಕಾಶಗಳನ್ನು ಕಿತ್ತುಕೊಂಡರು.

ಮೋದಿ ಅವರು ಸಂಸತ್‌ಗೆ ಬರುವ ಧೈರ್ಯವೇ ಇಲ್ಲ. ಅವರು ಐದು ನಿಮಿಷ ಸಹ ರಫೆಲ್‌ ಬಗ್ಗೆ ಮಾತನಾಡಲಾರರು. ಬಿಜೆಪಿ ಮಂತ್ರಿಗಳು ಎಐಡಿಎಂಕೆ ಸದಸ್ಯರ ಹಿಂದೆ ಅಡಗಿಕೊಂಡಿದ್ದರೆ, ಮೋದಿ ಅವರು ತಮ್ಮ ಕೊಠಡಿಯಲ್ಲಿ ಅಡಗಿಕೊಂಡಿದ್ದಾರೆ ಎಂದು ರಾಹುಲ್ ಕುಹುಕವಾಡಿದರು.

English summary
Rahul Gandhi talked about rafale deal in parliament today and lambasted on Narendra Modi. He said the whole rafale deal in corrupt. Modi took Indians tax money and gave it to Anil Ambani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X