ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜತೆ ಚರ್ಚೆಗೆ ರಾಹುಲ್ ಗಾಂಧಿ ಯೋಗ್ಯರಲ್ಲ: ಬಿಜೆಪಿ

|
Google Oneindia Kannada News

ನವದೆಹಲಿ, ಆಗಸ್ಟ್ 14: ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪದ ವಿರುದ್ಧ ಪ್ರತಿವಾಗ್ದಾಳಿ ನಡೆಸಿರುವ ಬಿಜೆಪಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸುವಷ್ಟು ಅರ್ಹತೆಯನ್ನು ರಾಹುಲ್ ಗಾಂಧಿ ಪಡೆದುಕೊಂಡಿಲ್ಲ ಎಂದು ಟೀಕಿಸಿದೆ.

ರಾಹುಲ್ ಮತ್ತು ಸೋನಿಯಾ ಗಾಂಧಿ ಒಡೆತನದ ಯಂಗ್ ಇಂಡಿಯಾ ಸಂಸ್ಥೆ ಹಾಗೂ 5 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡ ಪ್ರಕರಣವನ್ನು ಬಿಜೆಪಿ ಪ್ರಸ್ತಾಪಿಸಿದೆ.

ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!

ಕೇವಲ 50 ಲಕ್ಷ ಹೂಡಿಕೆ ಮಾಡಿ ಆಸ್ತಿಯನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ಸೋನಿಯಾ ಮತ್ತು ರಾಹುಲ್ ಅವರು ನೀಡುತ್ತಿರುವ ಹೇಳಿಕೆಗಳನ್ನು ಆದಾಯ ತೆರಿಗೆ ಇಲಾಖೆ ತಿರಸ್ಕರಿಸಿದೆ. ಈ ಒತ್ತಡವನ್ನು ಎದುರಿಸಿ ದಾಳಿ ನಡೆಸಲು ರಫೇಲ್ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದರು.

Rahul Gandhi is not worthy to debate with Modi

ರಫೇಲ್ ಒಪ್ಪಂದ ಕುರಿತು ಚರ್ಚೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದರು. ಇದಕ್ಕೆ, 'ರಾಹುಲ್ ಗಾಂಧಿ ಅವರು ಪ್ರಧಾನಿ ಜತೆ ಚರ್ಚೆ ಮಾಡುವಷ್ಟು ಯೋಗ್ಯರಲ್ಲ' ಎಂದು ರವಿಶಂಕರ್ ಪ್ರಸಾದ್ ಲೇವಡಿ ಮಾಡಿದರು.

ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ರಫೇಲ್ ಒಪ್ಪಂದ ನಡೆಸಿದೆ ಎಂದು ಅವರು ಪುನರುಚ್ಚರಿಸಿದರು.

ರಫೇಲ್‌ ಬಗ್ಗೆ ಮೋದಿ ನನ್ನೊಂದಿಗೆ ಚರ್ಚೆಗೆ ಕೂರಲಿ: ರಾಹುಲ್ ಚಾಲೆಂಜ್ರಫೇಲ್‌ ಬಗ್ಗೆ ಮೋದಿ ನನ್ನೊಂದಿಗೆ ಚರ್ಚೆಗೆ ಕೂರಲಿ: ರಾಹುಲ್ ಚಾಲೆಂಜ್

ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುವ ಮೋದಿ ಅವರು ಧೈರ್ಯವಿದ್ದರೆ ತಮ್ಮ ಮುಂದೆ ನಿಂತು ರಫೇಲ್ ಒಪ್ಪಂದದ ಬಗ್ಗೆ ಚರ್ಚೆ ಮಾಡಲಿ ಎಂದು ರಾಹುಲ್ ಗಾಂಧಿ ಬೀದರ್‌ನಲ್ಲಿ ಸೋಮವಾರ ಸವಾಲು ಹಾಕಿದ್ದರು.

English summary
Union Law Minister Ravi shankar Prasad said that, Rahul Gandhi is not worthy to have a debate with the Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X