• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮೀಕ್ಷೆ: ಪ್ರಧಾನಿ ಸ್ಥಾನಕ್ಕೆ ಮೋದಿಗಿಂತ ರಾಹುಲ್ ಗಾಂಧಿ ಬೆಸ್ಟ್ ಎಂದ 2 ರಾಜ್ಯಗಳು!

|

ನವದೆಹಲಿ, ಫೆಬ್ರವರಿ.28: ಭಾರತದ ಪ್ರಧಾನಮಂತ್ರಿ ಸ್ಥಾನಕ್ಕೆ ನೇರವಾಗಿ ಆಯ್ಕೆ ಮಾಡುವುದಾದರೆ ಯಾರನ್ನು ಆರಿಸುತ್ತೀರಿ. ಈ ಪ್ರಶ್ನೆಗೆ ತಮಿಳುನಾಡು ಮತ್ತು ಕೇರಳದಲ್ಲಿ ಜನರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೆಸರನ್ನು ಉತ್ತರವಾಗಿ ಹೇಳುತ್ತಿದ್ದಾರೆ.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಿಂತಲೂ ರಾಹುಲ್ ಗಾಂಧಿಯವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಐಎಎನ್ಎಸ್ ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಜನರು ರಾಹುಲ್ ಗಾಂಧಿಯವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಗೊತ್ತಾಗಿದೆ. "ಒಂದು ವೇಳೆ ಪ್ರಧಾನಮಂತ್ರಿ ಸ್ಥಾನಕ್ಕೆ ನೇರವಾಗಿ ಆಯ್ಕೆ ಮಾಡುವ ಅವಕಾಶ ನೀಡಿದರೆ ನೀವು ಯಾರನ್ನು ಚುನಾಯಿಸುವುದಕ್ಕೆ ಬಯಸುತ್ತೀರಾ. ನರೇಂದ್ರ ಮೋದಿಯವರೋ ಅಥವಾ ರಾಹುಲ್ ಗಾಂಧಿಯವರೋ" ಎಂಬ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು.

ತಮಿಳುನಾಡು ಮತ್ತು ಕೇರಳದಲ್ಲಿ ಫಲಿತಾಂಶ:

ಕೇರಳದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಶೇ.57.92ರಷ್ಟು ಜನರು ರಾಹುಲ್ ಗಾಂಧಿ ಹೆಸರನ್ನು ಆಯ್ಕೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಅದೇ ಪ್ರಶ್ನೆಗೆ ಶೇ.43.46ರಷ್ಟು ಜನರು ರಾಹುಲ್ ಗಾಂಧಿಯವರಿಗೆ ಬೆಂಬಲ ಸೂಚಿಸಿದ್ದಾರೆ. ಕೇರಳದಲ್ಲಿ ನರೇಂದ್ರ ಮೋದಿಯವರಿಗೆ ಶೇ.36.19 ಮತ್ತು ತಮಿಳುನಾಡಿನಲ್ಲಿ ಶೇ.28.16ರಷ್ಟು ಜನರು ಬೆಂಬಲಿಸಿದ್ದಾರೆ.

ಸಮೀಕ್ಷೆ: ಚುನಾವಣಾ ನಿರತ ಮುಂದಿನ ಸಿಎಂ ಯಾರಾಗಬೇಕು?

ಅಸ್ಸಾಂ, ಬಂಗಾಳ, ಪುದುಚೇರಿಯಲ್ಲಿ ಮೋದಿಗೆ ಬೆಂಬಲ:

ಪ್ರಸ್ತುತ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲೂ ಕೂಡಾ ಅದೇ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಎರಡು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನರೇಂದ್ರ ಮೋದಿಯವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ.54.13, ಅಸ್ಸಾಂನಲ್ಲಿ ಶೇ.47.80 ಮತ್ತು ಪುದುಚೇರಿಯಲ್ಲಿ ಶೇ.45.54ರಷ್ಟು ಜನರು ನರೇಂದ್ರ ಮೋದಿಯವರನ್ನೇ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗಿಂತ ರಾಹುಲ್ ಗಾಂಧಿಯವರು ಕೇರಳದಲ್ಲಿ ಶೇ.21.73ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ.15.30ರಷ್ಟು ಹೆಚ್ಚಿನ ಬೆಂಬಲವನ್ನು ಪಡೆದಿದ್ದಾರೆ. ಅದೇ ರೀತಿ ಅಸ್ಸಾಂನಲ್ಲಿ 24.63ರಷ್ಟು ಪಶ್ಚಿಮ ಬಂಗಾಳದಲ್ಲಿ 22.93 ಮತ್ತು ಪುದುಚೇರಿಯಲ್ಲಿ ಶೇ.12.72ರಷ್ಟು ಮಂದಿ ರಾಹುಲ್ ಗಾಂಧಿಯವರಿಗಿಂತ ಪ್ರಧಾನಿ ಮೋದಿಯವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ.

English summary
Rahul Gandhi Got Support More Than Modi As Prime Minister In Kerala And Tamil Nadu: C-Voter Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X