ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರ ಅರ್ಧಕ್ಕೇ ಬಿಟ್ಟು ಬಂಡಾಯ ಶಮನಕ್ಕೆ ತುರ್ತಾಗಿ ದೆಹಲಿಗೆ ತೆರಳಿದ ರಾಹುಲ್

|
Google Oneindia Kannada News

Recommended Video

Loksaba election 2018 : ಪ್ರಚಾರ ಅರ್ಧಕ್ಕೇ ಬಿಟ್ಟು ಬಂಡಾಯ ಶಮನಕ್ಕೆ ತುರ್ತಾಗಿ ದೆಹಲಿಗೆ ತೆರಳಿದ ರಾಹುಲ್..!

ನವದೆಹಲಿ, ನವೆಂಬರ್ 17: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಚಾರವನ್ನು ಅರ್ಧಕ್ಕೇ ಬಿಟ್ಟು ದೆಹಲಿಯತ್ತ ದೌಡಾಯಿಸಿದ್ದಾರೆ.ನ.15 ರಂದು ಕಾಂಗ್ರೆಸ್ ತನ್ನ 152 ಅಭ್ಯರ್ಥಿಗಳ ಮೊಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

Rahul Gandhi goes back to Delhi to resolve party crisis in Rajasthan

ಈ ಸಂದರ್ಭದಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ನಿಂದ ವಂಚಿತರಾಗಿದ್ದರು. ಇದರಿಂದಾಗಿ ಹಲವು ಅತೃಪ್ತರು ಬಂಡಾಯವೆದ್ದಿದ್ದರು. ಬಂಡಾಯವನ್ನು ಶಮನ ಮಾಡುವ ಉದ್ದೇಶದಿಂದ ಮಧ್ಯಪ್ರದೇಶದಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಚಾರವನ್ನು ಅರ್ಧದಲ್ಲೇ ಬಿಟ್ಟು ದೆಹಲಿಗೆ ಹಾರಿದರು.

ಶುಕ್ರವಾರ ಸಂಜೆ ತುರ್ತು ಸಭೆಯನ್ನೂ ಕರೆಯಲಾಗಗಿತ್ತು. ಈ ಸಭೆಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ಸ್ಕ್ರೀನಿಂಗ್ ಕಮಿಟಿ ಚೇರ್ ಮನ್ ಕುಮಾರಿ ಶೈಲಜಾ, ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

English summary
Congress president Rahul Gandhi hurried back to Delhi on Friday, leaving his ongoing Madhya Pradesh election campaigning midway, to resolve a crisis in the party's Rajasthan unit regarding seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X