ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪ್ರತ್ಯೇಕವಾದದ ಬೆಂಕಿ ಹೊತ್ತಿಸುತ್ತಿದ್ದಾರೆ: ಸ್ಮೃತಿ ಇರಾನಿ

|
Google Oneindia Kannada News

Recommended Video

ರಾಹುಲ್ ನಂತಹ ನಾಯಕರು ನಮ್ಮ ದೇಶದಲ್ಲಿರುವುದೇ ವಿಪರ್ಯಾಸ..? | Oneindia Kannada

ನವದೆಹಲಿ, ಆಗಸ್ಟ್ 29: ರಾಹುಲ್ ಗಾಂಧಿ ಪ್ರತ್ಯೇಕವಾದದ ಬೆಂಕಿ ಹೊತ್ತಿಸುತ್ತಿದ್ದಾರೆ, ಅವರ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಅನುಕೂಲವಾಗುತ್ತಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ನಿಮ್ಮಿಂದ ಬೆಂಬಲ ಪಡೆಯುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರ ವಿವಾದ: ರಾಹುಲ್ ಗಾಂಧಿ ಯಡವಟ್ಟಿನಿಂದ ಲಾಭ ಆಗಿದ್ದು ಪಾಕಿಸ್ತಾನಕ್ಕೆಕಾಶ್ಮೀರ ವಿವಾದ: ರಾಹುಲ್ ಗಾಂಧಿ ಯಡವಟ್ಟಿನಿಂದ ಲಾಭ ಆಗಿದ್ದು ಪಾಕಿಸ್ತಾನಕ್ಕೆ

ಕೇಂದ್ರ ಗೃಹ ಸಚಿವರು ದೇಶಕ್ಕೊಂದೇ ಧ್ವಜ ಎಂದು ಮಾತನಾಡುವಾಗ ಇಡೀ ದೇಶಕ್ಕೆ ಒಂದು ಸಂವಿಧಾನ, ಎಂದು ಹೇಳುವಾಗ ರಾಹುಲ್ ಗಾಂಧಿಯವರ ಹೇಳಿಕೆ ದೇಶವನ್ನು ವಿಭಜಿಸುವತ್ತ ಒಲವು ತೋರುತ್ತಿದೆ ಎನ್ನುವುದು ಎದ್ದು ಕಾಣುತ್ತದೆ.

ಪಾಕಿಸ್ತಾನ ರಾಹುಲ್ ಬೆಂಬಲ ಪಡೆಯುತ್ತಿರುವುದು ಮೊದಲಲ್ಲ

ಪಾಕಿಸ್ತಾನ ರಾಹುಲ್ ಬೆಂಬಲ ಪಡೆಯುತ್ತಿರುವುದು ಮೊದಲಲ್ಲ

ಪಾಕಿಸ್ತಾನವು ರಾಹುಲ್ ಗಾಂಧಿಯವರ ಬೆಂಬಲವನ್ನು ಪಡೆಯುತ್ತಿರುವುದು ಇದೇ ಮೊದಲಲ್ಲ. ನಿಮಗೆ ನೆನಪಿರುವಂತೆ ಈ ಮೊದಲು ಕೂಡ ಅವರ ಅಭಿಪ್ರಾಯ, ಹೇಳಿಕೆಯನ್ನು ಪಾಕಿಸ್ತಾನ ಇಷ್ಟಪಟ್ಟಿತ್ತು. ರಾಹುಲ್ ಗಾಂಧಿ ಪ್ರತ್ಯೇಕತಾವಾದದ ಬೆಂಕಿ ಹಚ್ಚುವುದು ನಿಲ್ಲಿಸಿದರೆ ಮಾತ್ರ ದೇಶದಕ್ಕೆ ಒಳಿತು ಎಂದು ಹೇಳಿದರು.

ತ್ರಿವರ್ಣ ಧ್ವಜ ದುರ್ಬಲಗೊಳಿಸುವ ಕೆಲಸ

ತ್ರಿವರ್ಣ ಧ್ವಜ ದುರ್ಬಲಗೊಳಿಸುವ ಕೆಲಸ

ತ್ರಿವರ್ಣದ ಬಗ್ಗೆ ಹೆಚ್ಚು ಯೋಚಿಸದ, ತ್ರಿವರ್ಣ ಧ್ವಜವನ್ನು ದುರ್ಬಲಗೊಳಿಸುವ ಮತ್ತು ಶತ್ರು ದೇಶ ಪ್ರೀತಿ ಮಾಡುವ ಒಬ್ಬ ನಾಯಕ ಇಂದು ದೇಶದಲ್ಲಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು.

ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್

ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿ ನೋಡಲು ಬಯಸುತ್ತಾರೆ

ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿ ನೋಡಲು ಬಯಸುತ್ತಾರೆ

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ದೇಶದ ಅವಿಭಾಜ್ಯ ಅಂಗಗಳಾಗಿವೆ ಎಂದು ನಾನು ಕಾಂಗ್ರೆಸ್‌ಗೆ ಮನವಿ ಮಾಡುತ್ತೇನೆ. ಅಲ್ಲಿ ವಾಸಿಸುವವರು ಪಿಎಂ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯನ್ನು ನೋಡಲು ಬಯಸುತ್ತಾರೆ, '' ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಪಾಕಿಸ್ತಾನದ ಸ್ವರದಲ್ಲಿ ಮಾತನಾಡುತ್ತಾರೆ

ರಾಹುಲ್ ಗಾಂಧಿ ಪಾಕಿಸ್ತಾನದ ಸ್ವರದಲ್ಲಿ ಮಾತನಾಡುತ್ತಾರೆ

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷರನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಪಾಕಿಸ್ತಾನದ ಸ್ವರದಲ್ಲಿ ಮಾತನಾಡುತ್ತಿದ್ದಾರೆ. ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ ನಂತರ, ಪಾಕಿಸ್ತಾನವು ಪರಮಾಣು ದೇಶ ಎಂದು ಹೆಮ್ಮೆಪಡುತ್ತಿದೆ" ಎಂದು ಅವರು ಹೇಳಿದರು.

ಅಮೇಥಿಯ ಹಿಂದಿನ ಸಂಸತ್ ಸದಸ್ಯ ಬಡವರ ಬಗ್ಗೆ ಮಾತನಾಡುತ್ತಿದ್ದರು ಆದರೆ ಪ್ರಸ್ತುತ ಸಂಸತ್ತಿನ ಸದಸ್ಯರು ಅವರಿಗಾಗಿ ಕೆಲಸ ಮಾಡುತ್ತಾರೆ ಎಂದು ಮೌರ್ಯ ಹೇಳಿದ್ದಾರೆ.

English summary
Rahul Gandhi Fire Of Separatism Smriti Slams,When the Union Home Minister is talking about one flag, one constitution for the entire country, the Congress, following the hints and directions from Rahul Gandhi, is echoing the views which tend to divide the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X