ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾನೂನಿಗೆ ವಿರೋಧ: ಸಂಸತ್ತಿಗೆ ಟ್ರ್ಯಾಕ್ಟರ್‌ ಚಲಾಯಿಸಿ ಬಂದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜು.26: ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್ ಗಾಂಧಿ ಇಂದು ಟ್ರ್ಯಾಕ್ಟರ್‌ ಸವಾರಿ ಮಾಡಿ ಸಂಸತ್ತಿಗೆ ಬಂದಿದ್ದು, ಮೂರು ವಿವಾದಾದ್ಮಕ ಕೃಷಿ ಕಾಯ್ದೆಯ ಜಾರಿಯ ವಿರುದ್ದ ಪ್ರತಿಭಟನೆ ನಡೆಸಿದರು.

ಕೆಂಪು ಟ್ಯಾಕ್ಟರ್‌ನಲ್ಲಿ ಬಂದ ರಾಹುಲ್‌ ಗಾಂಧಿ ಕೋವಿಡ್‌ನ ಈ ಸಂದರ್ಭವಾದ ಕಾರಣ ಮಾಸ್ಕ್‌ ಧರಿಸಿದ್ದು, ಆತ್ಮವಿಶ್ವಾಸದಿಂದ ಟ್ಯಾಕ್ಟರ್‌ ಚಲಾಯಿಸಿದರು. ಹಾಗೆಯೇ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಮಾಡಲೇ ಬೇಕು ಎಂದು ಆಗ್ರಹಿಸಿದರು.

'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್‌

"ನಾನು ರೈತರ ಸಂದೇಶವನ್ನು ಸಂಸತ್ತಿಗೆ ತಂದಿದ್ದೇನೆ. ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸುತ್ತಿದೆ. ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ. ಸರ್ಕಾರ ಈ ಕಪ್ಪು ಕಾನೂನುಗಳನ್ನು ರದ್ದುಗೊಳಿಸಬೇಕಾಗುತ್ತದೆ. ಈ ಕಾನೂನುಗಳು 2-3 ದೊಡ್ಡ ಉದ್ಯಮಿಗಳ ಪರವಾಗಿರುತ್ತವೆ ಎಂದು ಇಡೀ ದೇಶಕ್ಕೆ ತಿಳಿದಿದೆ," ಎಂದು 51 ವರ್ಷದ ಕಾಂಗ್ರೆಸ್‌ ನಾಯಕ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

Rahul Gandhi drives tractor to Parliament, Warns Government Over Farm laws

"ಸರ್ಕಾರದ ಪ್ರಕಾರ, ರೈತರು ತುಂಬಾ ಸಂತೋಷವಾಗಿದ್ದಾರೆ. ಹೊರಗೆ ಕುಳಿತವರು (ಪ್ರತಿಭಟಿಸುವ ರೈತರು) ಭಯೋತ್ಪಾದಕರು. ಆದರೆ ವಾಸ್ತವದಲ್ಲಿ, ರೈತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ," ಎದು ಆರೋಪಿಸಿದ ರಾಹುಲ್‌, "ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಲು ಒತ್ತಾಯಿಸಿದರೆ ಸಂಸತ್ತಿನಲ್ಲಿ ಟ್ರಾಕ್ಟರುಗಳು ಓಡುತ್ತವೆ," ಎಂದು ಎಚ್ಚರಿಕೆ ನೀಡಿದರು.

ಆದರೆ ಬಿಜೆಪಿಯು ರೈತರನ್ನು ರಾಜಕೀಯ ಸಾಧನವಾಗಿ ಪ್ರತಿಪಕ್ಷಗಳು ಬಳಸುತ್ತಿವೆ ಎಂದು ಹೇಳಿಕೊಂಡಿದೆ. "ರಾಹುಲ್ ಗಾಂಧಿ ರಾಜಕೀಯ ಆಡುತ್ತಿದ್ದಾರೆ. ರೈತರನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ. ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಪುನಃ ತಿದ್ದುಪಡಿ ಮಾಡಲು ಸಿದ್ಧವಾಗಿದೆ ಎಂದು ಕೇಂದ್ರ ಹೇಳಿದೆ. ಕೇಂದ್ರ ಮಾತುಕತೆಗೆ ಸಿದ್ಧವಾಗಿದೆ," ಎಂದು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಹೇಳಿದರು.

ರಾಹುಲ್‌ ಆಕ್ಸಿಜನ್‌ ಟ್ವೀಟ್‌ಗೆ ಇಟಾಲಿಯನ್‌ನಲ್ಲಿ ತಿರುಗೇಟು ನೀಡಿದ ಸಚಿವ ಗಿರಿರಾಜ್ರಾಹುಲ್‌ ಆಕ್ಸಿಜನ್‌ ಟ್ವೀಟ್‌ಗೆ ಇಟಾಲಿಯನ್‌ನಲ್ಲಿ ತಿರುಗೇಟು ನೀಡಿದ ಸಚಿವ ಗಿರಿರಾಜ್

ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿ ಖಾತರಿಪಡಿಸುವ ಹೊಸ ಕಾನೂನನ್ನು ಕೋರಿ ದೆಹಲಿಯ ಮೂರು ಗಡಿ ಕೇಂದ್ರಗಳಲ್ಲಿ ನವೆಂಬರ್‌ನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ವಾರ ಮಾನ್ಸೂನ್ ಅಧಿವೇಶನ ಪ್ರಾರಂಭವಾದಾಗಿನಿಂದ, ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆದು ಸಂಸತ್ತನ್ನು ಹಲವಾರು ಬಾರಿ ಮುಂದೂಡಲಾಗಿದೆ. ಕೆಲವು ಕಾಂಗ್ರೆಸ್ ಸಂಸದರು ಈ ವಿಷಯ ಬಗೆಹರಿಯುವವರೆಗೂ ಚರ್ಚೆ ಮುಂದುವರಿಸಲು ಬಿಡಲಾರೆವು ಎಂದು ಪಟ್ಟುಹಿಡಿದರು. ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ಶಿರೋಮಣಿ ಅಕಾಲಿ ದಳವೂ ಚರ್ಚೆಗೆ ಯತ್ನಿಸಿತು.

(ಒನ್‌ಇಂಡಿಯಾ ಸುದ್ದಿ)

English summary
Congress leader Rahul Gandhi drives tractor to Parliament, Warns Government Over Farm laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X