ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಭಾರತ ಗಡಿ ವಿವಾದ: ಸರ್ಕಾರದ ಮೌನ ಗೊಂದಲಕ್ಕೆ ಕಾರಣ-ರಾಹುಲ್ ಗಾಂಧಿ

|
Google Oneindia Kannada News

ದೆಹಲಿ, ಮೇ 29: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ ಎಂಬ ಭೀತಿ ಉಂಟಾಗಿದೆ. ಈ ವಿಷಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಏನಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ದೇಶದ ಜನರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿ, ಇಲ್ಲವಾದಲ್ಲಿ ಗೊಂದಲ ಉಂಟಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

Recommended Video

IPLನಲ್ಲಿ ಈವರೆಗೂ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಯಾರು ? | Oneindia Kannada

''ಚೀನಾ ಜೊತೆಯಲ್ಲಿ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿಯಲ್ಲಿ ಸರ್ಕಾರವೂ ಮೌನವಾಗಿರುವುದರಿಂದ ಗೊಂದಲಗಳಿಗೆ, ಉಹಾಪೋಹಾಗಳಿಗೆ ಕಾರಣವಾಗುತ್ತೆ. ಭಾರತ ಸರ್ಕಾರವೂ ಈ ಕುರಿತು ಸ್ಪಷ್ಟವಾಗಿ ಮತ್ತು ನಿಖರವಾಗಿ ಹೇಳಬೇಕು'' ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆ

ಲಡಾಕ್ ಗಡಿ ಭಾಗದಲ್ಲಿ ಚೀನಾ ಮತ್ತು ಭಾರತ ಸರ್ಕಾರಗಳು ಸೈನ್ಯದ ಸಂಖ್ಯೆಯನ್ನು ಹೆಚ್ಚಿಸಿದೆ. ಲಡಾಖ್‌ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭಾರತ ವೇಗ ನೀಡಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

Rahul Gandhi demand that Indian Govt must tell what’s happening in china border

ಮತ್ತೊಂದೆಡೆ ಭಾರತ ಮತ್ತು ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವು ಮಧ್ಯಸ್ಥಿಕೆ ವಹಿಸುತ್ತೇವೆ ಎಂದು ಹೇಳಿದ್ದರು. ಅಮೆರಿಕ ಹೇಳಿಕೆಗೆ ಚೀನಾ ಪ್ರತ್ಯುತ್ತರ ನೀಡಿದ್ದು, ಮೂರನೇ ದೇಶದ ಮಧ್ಯಪ್ರವೇಶ ನಮಗೆ ಬೇಕಿಲ್ಲ ಎಂದಿದೆ.

ಭಾರತ ಮತ್ತು ಚೀನಾದ ನಡುವೆ ಒಟ್ಟು 3,488 ಕಿ.ಮೀ ಗಡಿ ಇದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶಗಳು ಚೀನಾದ ಜೊತೆ ಗಡಿಯನ್ನು ಹಂಚಿಕೊಂಡಿವೆ.

English summary
Congress Leader Rahul Gandhi demand that Indian Government must come clean and tell India exactly what’s happening in china border dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X