ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ದರ ಏರಿಕೆ: ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜೂನ್ 7: ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ತೆರಿಗೆ ಸಂಗ್ರಹ ಎಂಬ ಸಾಂಕ್ರಾಮಿಕದ ಅಲೆಗಳು ಮತ್ತೆ ಮತ್ತೆ ಅಪ್ಪಳಿಸುತ್ತಿದೆ ಎಂದು ಟೀಕಿಸಿದ್ದಾರೆ.

"ಹೆಚ್ಚಿನ ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆಗಳು ಆರಂಭವಾಗಿದೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಬಿಲ್ ಪಾವತಿಸುವಾಗ ಮೋದಿ ಸರ್ಕಾರದಿಂದ ಉಂಟಾದ ಹಣದುಬ್ಬರದ ಹೆಚ್ಚಳವನ್ನು ನೀವು ಕಾಣಲಿದ್ದೀರಿ. ತೆರಿಗೆ ಸಂಗ್ರಹದ ಸಾಂಕ್ರಾಮಿಕ ಅಲೆಗಳು ಸತತವಾಗಿ ಬರುತ್ತಿದೆ" ಎಂದು ರಾಹುಲ್ ಗಾಂಧಿ ಟ್ವೀಟ್‌ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 ದೇಶದಲ್ಲಿ ಇಂಧನ ಬೆಲೆ ಏರಿಕೆ; ಕಚ್ಚಾ ತೈಲ ಬೆಲೆಯತ್ತ ಬೊಟ್ಟು ಮಾಡಿದ ಸಚಿವರು ದೇಶದಲ್ಲಿ ಇಂಧನ ಬೆಲೆ ಏರಿಕೆ; ಕಚ್ಚಾ ತೈಲ ಬೆಲೆಯತ್ತ ಬೊಟ್ಟು ಮಾಡಿದ ಸಚಿವರು

ಇನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಮುಖ್ಯ ವಕ್ತಾರ ಸಂದೀಪ್ ಸರ್ಜೇವಾಲ ಕೂಡ ಪೆಟ್ರೋಲ್ ಬೆಲೆ ಏರಿಕೆಗೆ ಖಂಡಿಸಿದ್ದಾರೆ. ಸರ್ಜೇವಾಲ 'ಸಾರ್ವಜನಿಕರ ವಿಪರೀತ ಲೂಟಿ' ಎಂದು ಪೆಟ್ರೋಲ್ ಬೆಲೆ ಏರಿಕೆಯನ್ನು ಟೀಕಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಹೇಳಿದ್ದಾರೆ.

Rahul Gandhi critises Modi government for rise in fuel prices

"ಸಾರ್ವಜನಿಕರಿಂದ ವಿಪರೀತ ಲೂಟಿ ನಡೆಯುತ್ತಿದೆ. ಕಳೆದ 13 ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 25.72 ರೂಪಾಯಿ ಮತ್ತು 23.93 ರೂಪಾಯಿಯಷ್ಟು ಪ್ರತಿ ಲೀಟರ್‌ಗೆ ಏರಿಕೆಯಾಗಿದೆ. ಕೆಲ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿದೆ. ಇದಕ್ಕೆ ಮೋದಿ ಸರ್ಕಾರ ವಿಧಿಸುತ್ತಿರುವ ಹೆಚ್ಚಿನ ತೆರಿಗೆ ಕಾರಣವಾಗಿದ್ದು ಕಚ್ಚಾತೈಲ ಬೆಲೆ ಏರಿಕೆ ಕಾರಣವಲ್ಲ" ಎಂದು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಾರೆ.

ಪೆಟ್ರೋಲ್ ಬೆಲೆ ತೀವ್ರವಾಗಿ ಏರಿಕೆ ಕಾಣುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ಎನ್‌ಡಿಎ ಸರ್ಕಾರದ ವಿರುದ್ಧ ಸತತ ವಾಗ್ದಾಳಿಯನ್ನು ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ತೈಲಗಳನ್ನು ಕೂಡ ಜಿಎಸ್‌ಟಿ ಕೆಳಗೆ ತರಬೇಕೆಂದು ವಿಪಕ್ಷಗಳು ಒತ್ತಾಯವನ್ನು ಮಾಡುತ್ತಿದೆ.

English summary
Rahul Gandhi criticises Prime Minister Narendra Modi for raising petrol prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X