ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೇನು ದೇವರಾ? ಮೋಹನ್ ಭಾಗವತ್ ಅವರಿಗೆ ರಾಹುಲ್ ಪ್ರಶ್ನೆ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: "ನೀವೇನು ದೇವರಾ? ದೇಶವನ್ನು ಸಂಘಟಿಸುತ್ತೇನೆ ಎಂದು ಹೇಳುವುದಕ್ಕೆ?" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ(ಸರಸಂಘಚಾಲಕ್) ಮೋಹನ್ ಭಾಗವತ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧ ಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧ

"ಮೋಹನ್ ಭಾಗವತ್ ಅವರು ಒಮ್ಮೆ ಮಾತನಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. 'ಈ ದೇಶವನ್ನು ಸಂಘಟಿಸಲು ನಾವು ಹೊರಟಿದ್ದೇವೆ' ಎಂದು ಅವರು ಹೇಳುತ್ತಿದ್ದರು. ಈ ದೇಶವನ್ನು ಸಂಘಟಿಸಲು ನೀವ್ಯಾರು ಮಿ.ಮೋಹನ್ ಭಾಗವತ್ ಅವರೇ? ನೀವೇನು ದೇವರೇ? ದೇಶ ತನ್ನಷ್ಟಕ್ಕೆ ತಾನೇ ಸಂಘಟಿಸುತ್ತದೆ ಬಿಡಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧ

"ಈ ದೇಶದ ಜನರು ಇದೀಗ ಒತ್ತಡ, ಆತಂಕದಲ್ಲಿ ಬದುಕುತ್ತಿದ್ದಾರೆ. ಅವರ ಮೇಲೆ ಒಂದು ಸಿದ್ಧಾಂತವನ್ನು ತುರುಕಲು ಪ್ರಯತ್ನಿಸಲಾಗುತ್ತಿದೆ. ಆದರೆ ನೂರು ಕೋಟಿ ಜನರಿರುವ ಒಂದು ದೇಶದಲ್ಲಿ ಒಂದೇ ಸಿದ್ಧಾಂತವನ್ನು ನಂಬಿ ಬದುಕುವುದು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದರು.

Rahul Gandhi attacks RSS chief Mohan Bhagwat on his speech

"ಭಾರತೀಯ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂಬುದು ಅವರ(ಆರೆಸ್ಸೆಸ್) ವಾದ. ಆದರೆ ಪ್ರತಿಯೊಬ್ಬರೂ ತಮ್ಮ ಧ್ವನಿಯನ್ನು, ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವನ್ನು ಈ ಶಿಕ್ಷಣ ನೀಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

English summary
Rahul Gandhi by his speech attacks RSS chief Moha Bhagwat. 'Are you God? Nation will organise itself' Rahul says over Bhagwat's 'organising the whole nation' remark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X