ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್-ಬಿಜೆಪಿ ನಂಟು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

|
Google Oneindia Kannada News

ನವದೆಹಲಿ, ಆಗಸ್ಟ್ 29: ಫೇಸ್‌ಬುಕ್ ಮತ್ತು ಬಿಜೆಪಿ ನಡುವಿನ ಹೊಂದಾಣಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ದ್ವೇಷಪೂರಿತ ಹೇಳಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಗ್ಗೆ ಮತ್ತು ಫೇಸ್‌ಬುಕ್ ಹಾಗೂ ಬಿಜೆಪಿ ನಡುವಿನ ನಂಟಿನ ಕುರಿತು ಪ್ರಕಟವಾಗಿರುವ ವರದಿಯೊಂದನ್ನು ಉಲ್ಲೇಖಿಸಿ ಅವರು ಶನಿವಾರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

 ಸಾಮಾಜಿಕ ಜಾಲತಾಣ ದುರುಪಯೋಗ ಆರೋಪ: ಫೇಸ್‌ಬುಕ್‌ಗೆ ಸಮನ್ಸ್‌ ನೀಡಿದ ಸಂಸದೀಯ ಸ್ಥಾಯಿ ಸಮಿತಿ ಸಾಮಾಜಿಕ ಜಾಲತಾಣ ದುರುಪಯೋಗ ಆರೋಪ: ಫೇಸ್‌ಬುಕ್‌ಗೆ ಸಮನ್ಸ್‌ ನೀಡಿದ ಸಂಸದೀಯ ಸ್ಥಾಯಿ ಸಮಿತಿ

'ಅಮೆರಿಕದ ಟೈಮ್ ಮ್ಯಾಗಜೀನ್ ವಾಟ್ಸಾಪ್-ಬಿಜೆಪಿ ನಂಟನ್ನು ಬೆತ್ತಲಾಗಿಸಿದೆ. 40 ಕೋಟಿ ಭಾರತೀಯರು ಬಳಸುತ್ತಿರುವ ವಾಟ್ಸಾಪ್, ಪೇಮೆಂಟ್‌ಗಳನ್ನು ತನ್ನ ಮೂಲಕ ಮಾಡುವ ಸೌಲಭ್ಯ ನೀಡಲು ಬಯಸಿದೆ. ಇದಕ್ಕೆ ಮೋದಿ ಸರ್ಕಾರದ ಅನುಮತಿ ಅಗತ್ಯವಿದೆ. ಹೀಗೆ ಬಿಜೆಪಿಯು ವಾಟ್ಸಾಪ್ ಮೇಲೆ ನಿಯಂತ್ರಣ ಸಾಧಿಸಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Rahul Gandhi Attacks Modi Govt Again On Whatsapp-BJP Links

ಬಿಜೆಪಿಯ ಕೆಲವು ನಾಯಕರು ದ್ವೇಷ ಭಾಷಣ ವಿರುದ್ಧದ ನಿಯಮಗಳನ್ನು ಉಲ್ಲಂಘಿಸಿರುವುದು ಸೇರಿದಂತೆ ದ್ವೇಷ ಪೂರಿತ ಹೇಳಿಕೆಗಳನ್ನು ಪರಿಶೀಲಿಸುವಲ್ಲಿ ಫೇಸ್‌ಬುಕ್ ಹೇಗೆ ವಿಫಲವಾಗಿದೆ ಎಂಬುದರ ಬಗ್ಗೆ ಟೈಮ್ ಮ್ಯಾಗಜೀನ್ ಲೇಖನ ಪ್ರಕಟಿಸಿದೆ.

 ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ

ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಪತ್ರ ಬರೆದಿದ್ದ ಕಾಂಗ್ರೆಸ್, ದೇಶದ ಚುನಾಯಿತ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಜಾಲತಾಣದ ದಿಗ್ಗಜ ಸಂಸ್ಥೆಯ ಭಾರತೀಯ ನಾಯಕರು ಹೇಗೆ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿತ್ತು.

English summary
Congress leader Rahul Gandhi again attacks Modi government citing a report on Facebook and BJP's links.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X