ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿ ವಿಚಾರ: ಪ್ರಧಾನಿ ದೇಶದ ದಾರಿ ತಪ್ಪಿಸಿದ್ದಾರೆ ಎಂದ ರಾಹುಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಭಾರತ-ಚೀನಾ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.

Rahul Gandhi Asks When Will You Take Back Indian Land From China

ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ

ಭಾರತ ಎಂದಿಗೂ ದೇಶದ ಸೈನಿಕರ ಪರವಾಗಿಯೇ ನಿಂತಿದೆ. ಆದರೆ ಮೋದಿ ಯಾವತ್ತು ಚೀನಾದ ವಿರುದ್ಧ ನಿಲ್ಲುತ್ತಾರೆ. ಚೀನಾದಿಂದ ನಮ್ಮ ಭೂಭಾಗವನ್ನು ಯಾವಾಗ ವಾಪಸ್ ಪಡೆಯುತ್ತಾರೆ. ಚೀನಾದ ಹೆಸರು ಉಲ್ಲೇಖಿಸಲು ಭಯಪಡಬೇಡಿ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ನಿತ್ಯ ಒಂದಲ್ಲಾ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಉದ್ಯೋಗ ಕಳೆದುಕೊಂಡಿರುವ ವಲಸೆ ಕಾರ್ಮಿಕರು ಹಾಗೂ ಮೃತಪಟ್ಟಿರುವ ಕಾರ್ಮಿಕರ ಕುರಿತು ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿರುವ ಸಚಿವ ಮಾತಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮ್ಮ ಬಳಿ ಲೆಕ್ಕವಿಲ್ಲವೆಂದರೆ ಯಾರೂ ಸತ್ತಿಲ್ಲವೆಂದು ಅರ್ಥವೇ ಎಂದು ಪ್ರಶ್ನಿಸಿದ್ದರು.

English summary
Shortly after Defence Minister Rajnath Singh on Tuesday made a statement in the Lok Sabha on the border standoff with China, Congress leader Rahul Gandhi accused Prime Minister Narendra Modi of misleading the country on LAC violations by the People's Liberation Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X