ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೆಲ್ ಹಗರಣದ : ರಾಹುಲ್ ಮಾತಿಗೆ ಸದನದಲ್ಲಿ ಕೋಲಾಹಲ

By Manjunatha
|
Google Oneindia Kannada News

ನವದೆಹಲಿ, ಜುಲೈ 20: 'ನಾನು ಮಾತನಾಡಿದರೆ ಸದನದಲ್ಲಿ ಭೂಕಂಪನವಾಗುತ್ತದೆ' ಎನ್ನುತ್ತಿದ್ದ ರಾಹುಲ್ ಗಾಂಧಿ ಅವರು ತಮ್ಮ ಮಾತಿನಿಂದ ಭೂಕಂಪನ ತರಿಸಲಿಲ್ಲವಾದರೂ ಕೋಲಾಹಲವನ್ನಂತೂ ಉಂಟು ಮಾಡಿದರು.

ರಫೆಲ್ ಹಗರಣದ ಬಗ್ಗೆ ಏರಿದ ಧನಿಯಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರು, ಸಾಕ್ಷ ಸಮೇತ ಟೀಕೆ ಮಾಡಿದ್ದು ವಿಶೇಷವಾಗಿತ್ತು.

ಪ್ರಧಾನಿ ಮೋದಿ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿ

ರಫೆಲ್ ಯುದ್ಧ ವಿಮಾನಗಳ ದರವನ್ನು ಬಹಿರಂಗಗೊಳಿಸುವುದಾಗಿ ಇದೇ ಸದನದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು ಆದರೆ ಆ ನಂತರ ಅವರು ಫ್ರಾನ್ಸ್ ಮತ್ತು ನಮ್ಮ ನಡುವೆ ಗುಪ್ತ ಒಪ್ಪಂದ ಆಗಿದೆ ನಾವು ಬಹಿರಂಗ ಪಡಿಸುವುದಿಲ್ಲ ಎಂದು ಸುಳ್ಳು ಹೇಳಿದರು ಎಂದು ರಾಹುಲ್ ಕಟು ಆರೋಪ ಮಾಡಿದರು.

Rahul Gandhi asks question to Modi about Rafale deal

'ನಾನು ಸ್ವತಃ ಫ್ರಾನ್ಸ್‌ನ ರಾಷ್ಟ್ರಪತಿಗಳೊಂದಿಗೆ ಮಾತನಾಡಿದೆ, ಅವರೇ ಖುದ್ದಾಗಿ ಹೀಗೊಂದು ಗುಪ್ತ ಒಪ್ಪಂದವೇ ನಮ್ಮ ನಡುವೆ ಆಗಿಲ್ಲವೆಂದು ಹೇಳಿದರು, ಹಾಗಾದರೆ ಸರ್ಕಾರ ಯಾರ ರಕ್ಷಣೆಗಾಗಿ ವಿಮಾನಗಳ ಬೆಲೆ ಹೇಳುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ಮೋದಿ ಅವರು ಫ್ರಾನ್ಸ್‌ಗೆ ಹೋಗಿ ಬಂದ ನಂತರ ಹಠಾತ್ತನೆ ವಿಮಾನಗಳ ಬೆಲೆಯಲ್ಲಿ ಏರುಪೇರಾಯಿತು. ಮೋದಿ ಅವರು ತಮ್ಮ ಬ್ಯುಸಿನೆಸ್‌ಮನ್ ಗೆಳೆಯರ ಅನುಕೂಲಕ್ಕಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ನೇರ ಆರೋಪ ಮಾಡಿದರು. ಇದರಿಂದ ಕೆಲ ಕಾಲ ಗದ್ದಲದ ವಾತಾವರಣ ಸೃಷ್ಠಿಯಾಯಿತು.

ಎಚ್‌ಎಎಲ್‌ನಿಂದ ರಫೆಲ್ ಒಪ್ಪಂದವನ್ನು ಏಕೆ ಹಿಂಪಡೆಯಲಾಯಿತು, ಜೀವಮಾನದಲ್ಲಿ ಒಂದೂ ವಿಮಾನ ನಿರ್ಮಿಸದ ಒಬ್ಬ ಅನನಭವಿ ಉದ್ಯಮಿಗೆ ಏಕೆ ನೀಡಲಾಯಿತು ಎಂದು ಮೋದಿ ಉತ್ತರ ಹೇಳಲೇ ಬೇಕು ಎಂದು ಅವರು ಒತ್ತಾಯ ಮಾಡಿದರು.

ರಾಹುಲ್ ಅವರ ಮಾತಿಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮೇಜುಕುಟ್ಟಿ ಧನಿಗೂಡಿಸಿದವು. ಆದರೆ ವಿರೋಧ ಪಕ್ಷದ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಗದ್ದಲ ಕೊನೆಯಾಗದಾಗ ಸ್ಪೀಕರ್ ಅವರು ಸದನವನ್ನು 15 ನಿಮಿಷ ಮುಂದೂಡಿದರು.

English summary
AICC president Rahul Gandhi asks questions to Prime minister Narendra Modi and defence minister Nirmala Sitaraman about Rafale deal. He ask Modi and defence minister to tell price of Rafale flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X