ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ಪ್ಲಸ್ ಪತ್ತೆಗೆ ದೊಡ್ಡ ಮಟ್ಟದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲವೇಕೆ?: ರಾಹುಲ್

|
Google Oneindia Kannada News

ನವದೆಹಲಿ, ಜೂನ್ 25: ಕೊರೊನಾ ರೂಪಾಂತರಿ ''ಡೆಲ್ಟಾ ಪ್ಲಸ್'' ಪತ್ತೆಗೆ ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಡೆಲ್ಟಾ ಪ್ಲಸ್ ರೂಪಾಂತರವನ್ನು ಅತ್ಯಂತ ಕಾಳಜಿಯ ಮತ್ತು ಕಳವಳಕಾರಿ ರೂಪಾಂತರ ಎಂದು ಘೋಷಣೆ ಮಾಡಿದ್ದು, ಹೀಗಿದ್ದೂ ದೇಶದಲ್ಲಿ ಈ ರೂಪಾಂತರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇಕೆ ದೊಡ್ಡ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಾನಹಾನಿ ಪ್ರಕರಣ: ಸೂರತ್ ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರುಮಾನಹಾನಿ ಪ್ರಕರಣ: ಸೂರತ್ ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರು

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕ್ರೂರ ಎರಡನೇ ಅಲೆಯಿಂದ ಭಾರತವು ತೀವ್ರವಾಗಿ ತತ್ತರಿಸಿತು, ಪ್ರತಿದಿನ ಭಾರಿ ಸಂಖ್ಯೆಯ ಜೀವಗಳನ್ನು ಸೋಂಕು ಬಲಿ ತೆಗೆದುಕೊಂಡಿತ್ತು. ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯು ತೀವ್ರ ಆತಂಕ ಸೃಷ್ಟಿ ಮಾಡಿತ್ತು.

Rahul Gandhi Asked Govt Why No Large-Scale Testing To Prevent Spread Of Delta Plus Variant

ಇದೀಗ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯು ಕೆಳಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು ಸಕಾರಾತ್ಮಕ ಪ್ರಮಾಣವು ಕಳೆದ ಹಲವಾರು ದಿನಗಳಿಂದ ಕುಸಿಯುತ್ತಿದೆ. ದಿನನಿತ್ಯದ ಸೋಂಕು ಪ್ರಕರಣಗಳ ಪ್ರಮಾಣ 4 ಲಕ್ಷಕ್ಕೂ ದಿಂದ ಇದೀಗ ಸರಾಸರಿ 50 ಸಾವಿರಕ್ಕೆ ಕುಸಿದಿದೆ.

*ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರವನ್ನು ಪರೀಕ್ಷಿಸಲು ಮತ್ತು ತಡೆಗಟ್ಟಲು ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ಸರ್ಕಾರ ಏಕೆ ಮಾಡಲಾಗುತ್ತಿಲ್ಲ ಮತ್ತು ಈ ರೂಪಾಂತರಗಳ ವಿರುದ್ಧ ಹಾಲಿ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

*ಡೆಲ್ಟಾ ಪ್ಲಸ್ ರೂಪಾಂತರ ಪರೀಕ್ಷಿಸಲು ಮತ್ತು ತಡೆಗಟ್ಟಲು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಯನ್ನು ಏಕೆ ಮಾಡಲಾಗುತ್ತಿಲ್ಲ?

*ಇದರ ವಿರುದ್ಧ ಲಸಿಕೆಗಳು ಎಷ್ಟು ಪರಿಣಾಮಕಾರಿ ಮತ್ತು ಸಂಪೂರ್ಣ ಮಾಹಿತಿ ಯಾವಾಗ ಲಭ್ಯವಾಗುತ್ತದೆ?

*ವೈರಸ್ ನ ಮೂರನೇ ಅಲೆಯನ್ನು ನಿಯಂತ್ರಿಸುವ ಯೋಜನೆ ಏನು..? ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

English summary
Congress leader Rahul Gandhi on Friday asked the Centre why large-scale testing is not being done to check and prevent the spread of the Delta plus variant of COVID-19 and sought to know the effectiveness of vaccines against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X