• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನಾವು ಅವರೊಂದಿಗಿದ್ದೇವೆ': ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ರಾಹುಲ್‌, ಕೇಜ್ರಿವಾಲ್‌

|
Google Oneindia Kannada News

ನವದೆಹಲಿ, ಆ.04: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಅತ್ಯಾಚಾರ, ಸಜೀವ ದಹನಕ್ಕೆ ಒಳಗಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬವನ್ನು ಭೇಟಿಯಾದರು.

ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, "ನಾನು ಕುಟುಂಬದೊಂದಿಗೆ ಮಾತನಾಡಿದೆ. ಅವರಿಗೆ ನ್ಯಾಯ ಬೇಕು ಮತ್ತು ಬೇರೇನೂ ಇಲ್ಲ. ನಮಗೆ ನ್ಯಾಯ ದೊರಕುತ್ತಿಲ್ಲ. ನಮಗೆ ಸಹಾಯ ಮಾಡಬೇಕು ಎಂದು ಕುಟುಂಬಸ್ಥರು ಹೇಳುತ್ತಾರೆ. ನಾವು ಅದನ್ನು ಮಾಡುತ್ತೇವೆ. ನಾನು ನಿಮ್ಮೊಂದಿಗೆ ನಿಂತಿದ್ದೇನೆ. ನ್ಯಾಯ ಸಿಗುವವರೆಗೂ ರಾಹುಲ್ ಗಾಂಧಿ ಅವರ ಜೊತೆಯಲ್ಲಿಯೇ ಇರುತ್ತಾನೆ," ಎಂದು ಹೇಳಿದ್ದಾರೆ.

 'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ 'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ

"ಆಕೆಯ ಹೆತ್ತವರ ಕಣ್ಣೀರು ಒಂದೇ ಒಂದು ಮಾತನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು ಮತ್ತು ಈ ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ, ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಒಲಿಂಪಿಕ್‌ ನಡೆಯುತ್ತಿರುವ ಈ ಸಂದರ್ಭದಲ್ಲಿ ಪದಕಗಳನ್ನು ಗೆದ್ದ ಭಾರತದ ಮಹಿಳಾ ಒಲಿಂಪಿಯನ್‌ಗಳನ್ನು ''ದೇಶದ ಮಗಳು'' ಎಂದು ಕರೆಯಲಾಗುತ್ತಿದೆ. ಆದರೆ ರಾಹುಲ್‌ ಗಾಂಧಿಯವರು ಮಂಗಳವಾರ ಅತ್ಯಾಚಾರ, ಕೊಲೆ ಪ್ರಕರಣದ ಈ ಬಾಲಕಿಯನ್ನು "ದೇಶದ ಮಗಳು" ಎಂದು ಕರೆದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಬಾಲಕಿಯ ಕುಟುಂಬವನ್ನು ಭೇಟಿಯಾಗಿ, ಬಾಲಕಿಯ ಕುಟುಂಬಕ್ಕೆ 10 ಲಕ್ಷ ಆರ್ಥಿಕ ಪರಿಹಾರ ಘೋಷಿಸಿದ್ದಾರೆ. ಹಾಗೆಯೇ ಸಣ್ಣ ಅಪಘಾತಕ್ಕೆ ಒಳಗಾದರು. ಬಾಲಕಿಯ ಕುಟುಂಬವನ್ನು ಭೇಟಿಯಾದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವ ವೇಳೆ, ನಿಂತಿದ್ದ ವೇದಿಕೆಯಿಂದ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ ಯಾವುದೇ ಗಾಯವಾಗಿಲ್ಲ.

"ನಾನು ಬಾಲಕಿಯ ಹೆತ್ತವರನ್ನು ಭೇಟಿಯಾದೆ. ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಆದರೆ ದೆಹಲಿ ಸರ್ಕಾರವು 10 ಲಕ್ಷ ಪರಿಹಾರವನ್ನು ನೀಡುತ್ತದೆ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸುತ್ತದೆ. ನಾವು ಉನ್ನತ ವಕೀಲರನ್ನು ನೇಮಿಸುತ್ತೇವೆ ಹಾಗಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು," ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.

ನಿನ್ನೆ ನಗರದ ಕಾನೂನು ಸುವ್ಯವಸ್ಥೆಯ ಸುಧಾರಣೆಗೆ ಕರೆ ನೀಡಿದ್ದ ಕೇಜ್ರಿವಾಲ್, ಹುಡುಗಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. "ದೆಹಲಿಯಲ್ಲಿ ಒಂಬತ್ತು ವರ್ಷದ ಮುಗ್ಧೆಯನ್ನು ಹತ್ಯೆಗೈದಿದ್ದು, ಇದು ನಾಚಿಕೆಗೇಡು. ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವ ಅವಶ್ಯಕತೆಯಿದೆ. ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು," ಎಂದರು.

 ಚುನಾವಣಾ ಚಾಣಕ್ಯನ ಪಕ್ಷ 'ಪುನರುಜ್ಜೀವನ ಯೋಜನೆ' ಬಗ್ಗೆ ಕಾಂಗ್ರೆಸ್‌ ಸಭೆ ಚುನಾವಣಾ ಚಾಣಕ್ಯನ ಪಕ್ಷ 'ಪುನರುಜ್ಜೀವನ ಯೋಜನೆ' ಬಗ್ಗೆ ಕಾಂಗ್ರೆಸ್‌ ಸಭೆ

ಏತನ್ಮಧ್ಯೆ, ಮರಣೋತ್ತರ ಪರೀಕ್ಷೆ ಅನಿಶ್ಚಿತವಾಗಿದೆ. ನಾಲ್ವರು ಆರೋಪಿಗಳ ಡ್ರಗ್‌ ಟೆಸ್ಟ್‌ ನಡೆಸಲಾಗುವುದು ಎಂದು ಇಂಗಿತ್ ಪ್ರತಾಪ್ ಸಿಂಗ್, ಉಪ ಪೊಲೀಸ್ ಆಯುಕ್ತರು (ಆಗ್ನೇಯ ದೆಹಲಿ) ಹೇಳಿದರು. ಹಾಗೆಯೇ ವಾಟರ್ ಕೂಲರ್ ಅನ್ನು ಪರೀಕ್ಷಿಸಿದಾಗ ವಿದ್ಯುತ್ ಪ್ರವಾಹ ಇತ್ತು ಎಂದು ಕಂಡುಬಂದಿದೆ. ಇದು ಆರೋಪಿಗಳ ವಾದ ಬೆಂಬಲಿಸುವಂತೆ ಕಾಣುತ್ತದೆ ಎಂದು ಹೇಳಿದ್ದಾರೆ. ಆ ಬಾಲಕಿಯು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದಳು ಎಂದು ಆರೋಪಿತರು ವಾದಿಸಿದ್ದಾರೆ.

"ವಾಟರ್ ಕೂಲರ್‌ನ ವಿಧಿವಿಜ್ಞಾನ ಪರೀಕ್ಷೆಯಲ್ಲಿ ವಿದ್ಯುತ್ ಪ್ರವಾಹ ಕಂಡುಬಂದಿದೆ. ಆರಂಭದಲ್ಲಿ, ವಿದ್ಯುತ್ ಪ್ರವಾಹದಿಂದ ಸಾವು ಸಂಭವಿಸಿದೆ ಎಂದು ಬಾಲಕಿಯ ಕುಟುಂಬ ಹೇಳಿತ್ತು. ವಿದ್ಯುತ್ ಪ್ರವಾಹದಿಂದ ಸಾವು ಸಂಭವಿಸಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ," ಎಂದು ಹಿರಿಯ ಪೋಲಿಸರು, ಆರೋಪಿಯ ಬಟ್ಟೆಯನ್ನು ಪರೀಕ್ಷಿಸಲಾಗುವುದು ಎಂದಿದ್ದಾರೆ. "ನಾವು ಶೀಘ್ರದಲ್ಲೇ ಚಾರ್ಜ್ ಶೀಟ್ ಅನ್ನು ಪ್ರಸ್ತುತಪಡಿಸುತ್ತೇವೆ. ಪ್ರಸ್ತುತಪಡಿಸಲು 60 ದಿನಗಳಿವೆ," ಹೇಳಿದರು.

 'ಚಾಯ್ ಪೆ ಚರ್ಚಾ': ಸೋನಿಯಾರನ್ನು ಭೇಟಿಯಾದ ಮಮತಾ, ರಾಹುಲ್‌ ಉಪಸ್ಥಿತಿ 'ಚಾಯ್ ಪೆ ಚರ್ಚಾ': ಸೋನಿಯಾರನ್ನು ಭೇಟಿಯಾದ ಮಮತಾ, ರಾಹುಲ್‌ ಉಪಸ್ಥಿತಿ

ಭಾನುವಾರ ದಲಿತ ಬಾಲಕಿಯೋರ್ವಳು ಕೂಲರ್‌ನಿಂದ ಕುಡಿಯುವ ನೀರನ್ನು ತರಲು ಶ್ಮಶಾನಕ್ಕೆ ಹೋಗಿದ್ದು ಆದರೆ ವಾಪಾಸ್‌ ಬಂದಿಲ್ಲ. ಸಂಜೆ 6 ಗಂಟೆ ಸುಮಾರಿಗೆ, ಶವದಹನ ಮಾಡುವ ರಾಧೇಶ್ಯಾಮ್ ಬಾಲಕಿಯ ಶವವನ್ನು ನೋಡಿ, ಆಕೆಯ ತಾಯಿಯನ್ನು ಶ್ಮಶಾನಕ್ಕೆ ಕರೆದು ಶವವನ್ನು ತೋರಿಸಿದರು. ಆಕಸ್ಮಿಕವಾಗಿ ಆಕೆಗೆ ವಿದ್ಯುತ್ ಸ್ಪರ್ಶವಾಗಿದೆ ಎಂದು ಹೇಳಿಕೊಂಡರು. ಮಣಿಕಟ್ಟು ಮತ್ತು ಮೊಣಕೈಯಲ್ಲಿ ಸುಟ್ಟ ಗುರುತುಗಳಿವೆ. ತುಟಿಗಳು ನೀಲಿ ಬಣ್ಣದ್ದಾಗಿವೆ ಎಂದು ಆಕೆಯ ತಾಯಿ ಹೇಳಿದ್ದರು. ನಂತರ ಪೂಜಾರಿ ಮತ್ತು ಆತನ ಸಹಚರರು ಪೊಲೀಸರಿಗೆ ಮಾಹಿತಿ ನೀಡದಂತೆ ತಾಯಿಗೆ ಹೇಳಿದರು. ಆದಾಗ್ಯೂ, ನಂತರ, ಪೋಷಕರು ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಭಯಾನಕ ಘಟನೆಯ ಮೇಲೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತು. ದೇಶದಲ್ಲಿ ಭಯ ಹುಟ್ಟಿಸುವಂತಹ ಲೈಂಗಿಕ ದೌರ್ಜನ್ಯ ಘಟನೆಯ ರೂಪ ಇದು ತಳೆದಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಟೀಕಿಸಿದ್ದಾರೆ. ಈ ಅಪರಾಧವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಹೋಲಿಕೆ ಮಾಡಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ರಾತ್ರೋರಾತ್ರಿ ಸಂತ್ರಸ್ತೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದು, ಈ ವಿಚಾರದ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪೊಲೀಸರ ಅಮಾನತು ಕೂಡಾ ನಡೆದಿತ್ತು. ಹಾಗೆಯೇ ಸಂತ್ರಸ್ತೆಯ ಕುಟುಂಬಸ್ಥರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿತ್ತು.

(ಒನ್‌ಇಂಡಿಯಾ ಸುದ್ದಿ)

English summary
Congress MP Rahul Gandhi and Delhi Chief Minister Arvind Kejriwal met the family of the nine-year-old Dalit girl who was allegedly raped and murdered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X