• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?

|

ನವದೆಹಲಿ, ಆಗಸ್ಟ್ 31: ಎನ್ ಡಿಎ ಸರ್ಕಾರವನ್ನು ಈ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಸುಲಭಕ್ಕೆ ಬಿಡುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಂತೂ ಮುಂಬರುವ ಲೋಕಸಭಾ ಚುನಾವಣೆವರೆಗೂ ಈ ರಫೇಲ್ ಡೀಲ್ ವಿಚಾರವನ್ನು ತಣ್ಣಗಾಗುವುದಕ್ಕೆ ಬಿಡುವುದಿಲ್ಲ. ಆದ್ದರಿಂದಲೇ ಅವರು ದಿನೇ ದಿನೇ ರಫೇಲ್ ಡೀಲ್ ಕುರಿತು ಒಂದಿಲ್ಲೊಂದು ಟ್ವೀಟ್ ಮಾಡುತ್ತಲೇ ಇದ್ದಾರೆ.

ಫ್ರಾನ್ಸ್ ದೇಶದಿಂದ ಯುದ್ಧ ವಿಮಾನ ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ಹಲವು ದಿನಗಳಿಂದ ಕಾಂಗ್ರೆಸ್ ಎನ್ ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ಜಂಟಿ ಸಂಸದೀಯ ಸಮೀತಿ ರಚಿಸಲೂ ಬೇಡಿಕೆ ಇಟ್ಟಿದೆ.

ರಫೆಲ್ ಡೀಲ್: ಕಾಂಗ್ರೆಸ್ಸಿಗೆ ರಿಲಯನ್ಸ್ ನಿಂದ ಖಡಕ್ ವಾರ್ನಿಂಗ್

ಆದರೆ ರಫೆಲ್ ಡೀಲ್ ಗೂ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗೂ ಮತ್ತು ಫ್ರೆಂಚ್ ಅಧ್ಯಕ್ಷರ ಪಾರ್ಟ್ನರ್ ವೊಬ್ಬರು ನಿರ್ಮಿಸಿದ ಸಿನೆಮಾಕ್ಕೂ ಸಂಬಂಧವಿದೆ ಎಂಬ ಸುದ್ದಿಯನ್ನು ಪತ್ರಿಕೆಯೊಂದು ವರದಿ ಮಾಡಿದೆ.

ರಫೆಲ್ ಒಪ್ಪಂದ ರದ್ದಿನಿಂದ ಎಚ್‌ಎಎಲ್‌ಗೆ ದೊಡ್ಡ ನಷ್ಟ : ಜೈಪಾಲ್ ರೆಡ್ಡಿ

ರಾಹುಲ್ ರಫೆಲ್ ದಾಳಿ !

'ರಫೇಲ್ ಯುದ್ಧ ವಿಮಾನ ಖರೀದಿ ಜಾಗತಿಕ ಭ್ರಷ್ಟಾಚಾರ. ಅಷ್ಟೇ ಅಲ್ಲ ಇನ್ನು ಎರಡು ವಾರಗಳಲ್ಲಿ ಈ ಕುರಿತ ಇನ್ನೆಷ್ಟೋ ಸ್ಫೋಟಕ ಸುದ್ದಿಗಳು ಹೊರಬರಲಿವೆ. ಮೋದಿಜೀ, ಅನಿಲ್ ಅಂಬಾನಿ ಅವರಿಗೆ ಹೇಳಿ, ಫ್ರಾನ್ಸಿನಲ್ಲಿ ಬಹಳ ದೊಡ್ಡ ಸಮಸ್ಯೆಯಿದೆ ಎಂದು' ಎಂಬ ಟ್ವೀಟ್ ಜೊತೆಯಲ್ಲಿ 'ಇಂಡಿಯನ್ ಎಕ್ಸ್ ಪ್ರೆಸ್' ನಲ್ಲಿ ಪ್ರಕಟವಾದ ಲೇಖನದ ಪ್ರತಿಯನ್ನೂ ತಮ್ಮ ಟ್ವೀಟ್ ಜೊತೆ ಲಗತ್ತಿಸಿದ್ದಾರೆ.

ರಫೇಲ್ ಡೀಲ್: ಮೋದಿಗೆ 10 ಪ್ರಶ್ನೆ ಕೇಳಿದ ಯಶವಂತ್ ಸಿನ್ಹಾ

ರಾಹುಲ್ ಲಗತ್ತಿಸಿದ ಲೇಖನದಲ್ಲೇನಿದೆ?

ರಾಹುಲ್ ಲಗತ್ತಿಸಿದ ಲೇಖನದಲ್ಲೇನಿದೆ?

ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಪೋಸ್ಟ್ ನೊಂದಿಗೆ ಲಗತ್ತಿಸಿರುವ ಲೇಖನಲ್ಲಿ ರಫೇಲ್ ಡೀಲ್ ಕುರಿತ ಸಂಪೂರ್ಣ ವಿವರವಿದೆ. '2016 ರ ಜನವರಿ 26 ರಂದು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಎರಡು ದೇಶಗಳ ನಡುವಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕುವವರಿದ್ದರು. ಅದಕ್ಕೂ ಎರಡು ದಿನ ಮೊದಲು ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್ಟೇನ್ ಮೆಂಟ್ ಹೊಲಾಂಡ್ ಅವರ ಪಾರ್ಟ್ನರ್ ಮತ್ತು ನಟಿ ಜ್ಯೂಲಿ ಗಯೆಟ್ ಅವರೊಂದಿಗೆ ಚಿತ್ರವೊಂದನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿತ್ತು...' ಹೀಗೆ ಸಾಗುತ್ತದೆ ಆ ಲೇಖನ.

ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ಮೊಕದ್ದಮೆ

ಒಂದಕ್ಕೊಂದು ಸಂಬಂಧವಿದ್ದೇ ಇದೆ!

ಒಂದಕ್ಕೊಂದು ಸಂಬಂಧವಿದ್ದೇ ಇದೆ!

'24, ಜನವರಿ 2016 ರಂದು ಫ್ರೆಂಚ್ ಸಿನಿಮಾವೊಂದನ್ನು ನಿರ್ಮಿಸಲು ರಿಲಯನ್ಸ್ ಮುಂದಾಗುತ್ತದೆ. 24, ಜನವರಿ 2016 ರಂದು ಫ್ರೆಂಚ್ ನೊಂದಿಗೆ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಳ್ಳುತ್ತದೆ. ಇದಾಗಿ ಎಂಟು ವಾರಗಳ ನಂತರ ನಾಗ್ಪುರದಲ್ಲಿ ಡಿಆರ್ ಎಎಲ್ (ಡಸ್ಸಾಲ್ಟ್-ರಿಲಯನ್ಸ್ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ) ಗೆ ಫ್ರಾನ್ಸ್ ರಕ್ಷಣಾ ಸಚಿವ ಫ್ಲೊರೆನ್ಸ್ ಪಾರ್ಲಿ, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಡಿಪಾಯ ಹಾಕುತ್ತಾರೆ...!' ಎಂದು ಈ ಲೇಖನದಲ್ಲಿ ಬರೆಯಲಾಗಿದೆ.

ರಫೆಲ್ ಡೀಲ್ ಕುರಿತು ರಾಹುಲ್ ಗಾಂಧಿಗೆ ಅನಿಲ್ ಅಂಬಾನಿ ಪತ್ರ

ಟೌಟ್ ಲಾ-ಹೌಟ್

ಟೌಟ್ ಲಾ-ಹೌಟ್

ಟೌಟ್ ಲಾ-ಹೌಟ್ ಹೆಸರಿನ ಈ 98 ನಿಮಿಷಗಳ ಚಿತ್ರ ಜಗತ್ತಿನ ಎಂಟಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಯಿತಾದರೂ ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಅನಿಲ್ ಅಂಬಾನಿ ಅವರಿಗೆ ಅನುಕೂಲವಾಗಬೇಕೆಂಬ ಕಾರಣಕ್ಕೇ ಭಾರತ ರಫೆಲ್ ಫೈಟರ್ ಜೆಟ್ ಗೆ ಬಿಡಿಭಾಗಗಳ ಉತ್ಪಾದನೆಯ ಹೊಣೆಯನ್ನು ರಿಲಯನ್ಸ್ ಗೆ ನೀಡಿದೆ ಎಂಬ ಆರೋಪವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮಾಡಿದ್ದವು. ಆದರೆ ಈ ಮಾತನ್ನು ತಳ್ಳಿ ಹಾಕಿರುವ ಅನಿಲ್ ಅಂಬಾನಿ ಒಂದೇ ಒಂದು ರೂಪಾಯಿ ಮೌಲ್ಯದ ಬಿಡಿಭಾಗವನ್ನೂ ರಿಲಯನ್ಸ್ ಉತ್ಪಾದಿಸಿಲ್ಲ ಎಂದು ಪತ್ರವನ್ನು ಸಹ ರಾಹುಲ್ ಗಾಂಧಿ ಅವರಿಗೆ ಬರೆದಿದ್ದರು.

English summary
Rahul Gandhi again blames NDA government for Rafale deal and mentions a press report in which it quotes all details of Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X