ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟುಹಬ್ಬಕ್ಕೆ ರಾಹುಲ್ ವಿದೇಶಕ್ಕೆ, ಅಭಿಮಾನಿಗಳು ಇಲ್ಲೇ

By Srinath
|
Google Oneindia Kannada News

ನವದೆಹಲಿ, ಜೂನ್ 19- ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. 44 ವರ್ಷದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅವರ ಅಭಿಮಾನಿಗಳು ಉತ್ಸುಕತೆಯಿಂದ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಕೇವಲ 44 ಸ್ಥಾನಗಳನ್ನು ಗಳಿಸಿದ್ದರಿಂದ ನಿರಾಶೆಗೊಂಡಿರುವ ರಾಹುಲ್, ಚುನಾವಣೆ ಓಡಾಟದ ನಂತರ ರಿಲ್ಯಾಕ್ಸ್ ಆಗಲು ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಅವರು ಯಾವ ದೇಶದಲ್ಲಿದ್ದಾರೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿಲ್ಲ.

rahul-gandhi-abroad-on-his-44-th-birthday-party-headquarters-deserted
ರಾಹುಲ್ ಗಾಂಧಿ ತಮ್ಮ 34ನೇ ವಯಸ್ಸಿನಲ್ಲಿದ್ದಾಗ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷ ಹತ್ತು ವರ್ಷಗಳ ಅಂತರದಲ್ಲಿ 44 ಸ್ಥಾನಗಳೊಂದಿಗೆ ಅಧಿಕಾರದಿಂದ ಕೆಳಗಿಳಿದಿದೆ. ಈ 10 ವರ್ಷಗಳಲ್ಲಿ ರಾಹುಲ್ ಹುಟ್ಟುಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಯಲ್ಲಿ ರಾಹುಲ್ ಸಹ ಇಲ್ಲದೆಯೇ ಪಕ್ಷದ ಕಚೇರಿಯಲ್ಲಿ ನೀರವ ಮೌನ ಆವರಿಸಿದೆ.

ಆದಾಗ್ಯೂ ರಾಹುಲ್ ಅಭಿಮಾನಿಗಳು ಸೋನಿಯಾ ನಿವಾಸದೆದುರು 44 ಕೆಜಿ ಕೇಕ್ ಕತ್ತರಿಸಿ, ರಾಹುಲ್ ಜನ್ಮದಿನ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಫ್ಲೆಕ್ಸ್, ಪೋಸ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿಲ್ಲ.

English summary
AICC VP Rahul Gandhi abroad on his 44th birthday - Congress Party headquarters virtually deserted. It is not the best of the days for the young Gandhi. When he celebrated his 34th birthday, his party had swept to power and since then, he was the cynosure of all eyes for a good decade with UPA at the helm. This birthday is the first in a decade that is being spent in the dispiriting gloom of defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X