ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ದಲ್ಲಾಳಿಗಳ ಕುಟುಂಬದಿಂದ ಬಂದವರು: ಪಾತ್ರಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್! ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್!

ರಾಹುಲ್ ಗಾಂಧಿ ಅವರು ಒಂದು ದಲ್ಲಾಳಿಗಳ ಕುಟುಂಬದಿಂದ ಬಂದಿದ್ದಾರೆ. ಅವರ ತಂದೆ ಮತ್ತು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ರಕ್ಷಣಾ ಒಪ್ಪಂದಗಳಲ್ಲಿ ದಲ್ಲಾಳಿಯಾಗಿದ್ದರು ಎಂದು ಪಾತ್ರಾ ಹೇಳಿದ್ದಾರೆ.

ಅ. 13ಕ್ಕೆ ರಾಹುಲ್ ಬೆಂಗಳೂರಿಗೆ, ಎಚ್‌ಎಎಲ್‌ ಸಿಬ್ಬಂದಿ ಜೊತೆ ಸಂವಾದಅ. 13ಕ್ಕೆ ರಾಹುಲ್ ಬೆಂಗಳೂರಿಗೆ, ಎಚ್‌ಎಎಲ್‌ ಸಿಬ್ಬಂದಿ ಜೊತೆ ಸಂವಾದ

2014 ರವರೆಗೂ ಈ ಕುಟುಂಬ ಎಲ್ಲಾ ರಕ್ಷಣಾ ಒಪ್ಪಂದಗಳಲ್ಲೂ ಹಣ ಮಾಡಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಇದೇ ಮನಸ್ಥಿತಿಯಿಂದ ನೋಡುತ್ತಿದೆ ಎಂದು ಪಾತ್ರಾ ಆರೋಪಿಸಿದರು.

Rahul Ganadhi comes from a family of middleman: Sambit Patra

ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಗುರುವಾರ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಪ್ರತಿಯಾಗಿ ತಾವೂ ಪತ್ರಿಕಾಗೋಷ್ಠಿ ನಡೆಸಿದ ಸಂಬಿತ್ ಪಾತ್ರ, ರಾಹುಲ್ ಅವರ ಮೆಲೆ ಹರಿಹಾಯ್ದರು.

ಯುವಕರಿಗೆ ಗೊತ್ತಿರಲಿ, ಈ ದೇಶದ ಪ್ರಧಾನಿ ಭ್ರಷ್ಟ: ರಾಹುಲ್ ಗಾಂಧಿಯುವಕರಿಗೆ ಗೊತ್ತಿರಲಿ, ಈ ದೇಶದ ಪ್ರಧಾನಿ ಭ್ರಷ್ಟ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ದೇಶದ ಭದ್ರತೆಯ ವಿಷಯದಲ್ಲಿ ವೃಥಾ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪತ್ರಿಕಾಗೋಷ್ಠಿಯ ತುಂಬ ಸುಳ್ಳೇ ತುಂಬಿದ್ದು ಎಂದು ಪಾತ್ರಾ ಹೇಳಿದ್ದಾರೆ.

ರಫೇಲ್ ಡೀಲ್ ನಲ್ಲಿ ಬಹುಕೋಟಿ ಭ್ರಷ್ಟಾಚಾರವಾಗಿದೆ ಮತ್ತು ಈ ದೇಶದ ಪ್ರಧಾನಿ ಒಬ್ಬ ಭ್ರಷ್ಟ ಎಂದು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು.

ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಬಹುಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯುತ್ತಿವೆ.

English summary
Rejecting Rahul Gandhi's allegation of corruption against Prime Minister Narendra Modi in the Rafale deal, the BJP on Thursday accused the Congress chief of lying shamelessly. And BJP also said, Rahul Ganadhi comes from a family of middleman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X