ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಾಯುಪ್ರದೇಶಕ್ಕೆ ಎಂಟ್ರಿ ಕೊಟ್ಟ ರಫೇಲ್: ಶೀಘ್ರದಲ್ಲೇ ಅಂಬಾಲಾ ವಾಯುನೆಲೆಯಲ್ಲಿ ಲ್ಯಾಂಡಿಂಗ್

|
Google Oneindia Kannada News

ನವದೆಹಲಿ, ಜುಲೈ 29: ಬಹುನಿರೀಕ್ಷಿತ ಯುದ್ಧ ವಿಮಾನ ರಫೇಲ್‌ ಭಾರತದ ವಾಯು ಪ್ರದೇಶವನ್ನು ಪ್ರವೇಶಿಸಿದ್ದು, ಶೀಘ್ರದಲ್ಲೇ ಅಂಬಾಲಾ ವಾಯುನೆಲೆಗೆ ತಲುಪಲಿವೆ.

ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಯುದ್ಧ ವಿಮಾನಗಳು ಸೋಮವಾರ ಫ್ರಾನ್ಸ್‌ನ ಮೆರಿಗ್ನಾಕ್‌ನಿಂದ ಹೊರಟಿದ್ದು, 7364 ಕಿ.ಮೀ ದೂರವನ್ನು ಕ್ರಮಿಸಿದ ಬಳಿಕ ಭಾರತದ ವಾಯುನೆಲೆಯನ್ನು ತಲುಪಲಿವೆ.

Rafales Entered Indian space. It Will land shortly at Ambala Airbase

ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್

ರಫೇಲ್ ಯುದ್ಧ ವಿಮಾನಗಳು ಭಾರತದ ವಾಯು ಪ್ರದೇಶವನ್ನು ಪ್ರವೇಶಿಸಿದ ಬಳಿಕ ಐಎನ್‌ಎಸ್ ಕೊಲ್ಕತ್ತಾ ರಫೇಲ್ ಯುದ್ಧವಿಮಾನಗಳನ್ನು ಸ್ವಾಗತಿಸಿದೆ. ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೋಲ್ಕತ್ತಾದೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದೆ.

ಚೀನಾದೊಂದಿಗಿನ ಗಡಿ ವಿವಾದವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವಾರ ಈ ಐದು ವಿಮಾನಗಳ ನಿಯೋಜನೆಯನ್ನು ಮಾಡಲಾಗುವುದು ಎಂದು ಹೇಳಲಾಗಿದೆ. ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳು. ಈ ಒಪ್ಪಂದದ ಪ್ರಕಾರ, ಪ್ರತಿ ವರ್ಷ 12 ವಿಮಾನಗಳನ್ನು ತಲುಪಿಸಬೇಕಿದೆ.

English summary
Most awaited Rafale fighter jets entered india's air space, it It Will land shortly at Ambala Airbase
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X