ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ದಾಖಲೆ ಕಳುವಾಗಿಲ್ಲ, ಫೋಟೋಕಾಪಿ ಮಾಡಲಾಗಿದೆ!

|
Google Oneindia Kannada News

Recommended Video

ರಫೇಲ್ ದಾಖಲೆ ಕಳುವಾಗಿಲ್ಲ, ಹೋಗಿದ್ದೆಲ್ಲಿಗೆ? | Oneindia Kannada

ನವದೆಹಲಿ, ಮಾರ್ಚ್ 09 : ರಫೇಲ್ ಡೀಲ್ ದಾಖಲೆಗಳನ್ನು ರಕ್ಷಣಾ ಸಚಿವಾಲಯದಿಂದ ಕದಿಯಲಾಗಿದೆ ಎಂದು ದೂರು ಬಂದ ಎರಡು ದಿನಗಳ ನಂತರ, ಆ ರಹಸ್ಯ ದಾಖಲೆಗಳನ್ನು ಕದಿಯಲಾಗಿಲ್ಲ, ಆದರೆ ಅವುಗಳ ಫೋಟೋಕಾಪಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.

ಅಡ್ವೊಕೇಟ್ ಜನರಲ್ ಕೆಕೆ ವೇಣುಗೋಪಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದೇನೆಂದರೆ, ರಕ್ಷಣಾ ಸಚಿವಾಲಯದಲ್ಲಿದ್ದ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಕದಿಯಲಾಗಿಲ್ಲ, ಆದರೆ ಅಕ್ರಮವಾಗಿ ಅವುಗಳ ಫೋಟೋಕಾಪಿ ತೆಗೆದುಕೊಳ್ಳಲಾಗಿದೆ.

ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್

ರಫೇಲ್ ರಹಸ್ಯ ದಾಖಲೆಗಳು ಕಳುವಾಗಿವೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ, ಆಕಾಶ ಭೂಮಿ ಒಂದು ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಬೇಕು, ಈ ಹಗರಣದ ತನಿಖೆಯಾಗಬೇಕು. ಇದನ್ನು ಹೇಳುತ್ತಾರೆ 'ಅಂಧೇರಿ ನಗರಿ, ಚೌಪಟ್ ರಾಜಾ' ಎಂದು ಅಣಕವಾಡಿದ್ದರು.

Rafale secret documents have not been stolen, photocopied

ಇದಾದ ನಂತರ ಪ್ರತಿಕ್ರಿಯಿಸಿರುವ ವೇಣುಗೋಪಾಲ್ ಅವರು, ರಫೇಲ್ ರಹಸ್ಯ ದಾಖಲೆಗಳು ಕಳುವಾಗಿವೆ ಎಂದು ನಾವು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದೇವೆ ಎಂದು ವಿರೋಧ ಪಕ್ಷದವರು ಹುಯಿಲೆಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದು ಪಿಟಿಐಗೆ ತಿಳಿಸಿದ್ದಾರೆ.

ರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಆದರೆ ಫೋಟೋಕಾಪಿ ಮಾಡಲಾಗಿದ್ದನ್ನು 'ಕಳುವಾಗಿದೆ' ಎನ್ನುವರ ರೀತಿಯಲ್ಲಿ ಕೆಕೆ ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್ ಗೆ ಹೇಳಿದ್ದು ಸರಿಯಲ್ಲ ಎಂಬುದು ತಜ್ಞರ ವಾದವಾಗಿದೆ. ಈ ಹೇಳಿಕೆ ಸಾಕಷ್ಟು ಗೊಂದಲಗಳಿಗೆ, ಅನುಮಾನಗಳಿಗೆ ಎಡೆಮಾಡಿ ಕೊಟ್ಟಿರುವುದೂ ನಿಜ.

English summary
Rafale secret documents have not been stolen, photocopied by someone, Advocate General has clarified to Supreme Court of India. Earlier it was told that they were stolen and handed over to one media company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X