ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ತೀರ್ಪು : ಸಿಎಜಿ ವರದಿ ಪ್ರಸ್ತಾಪದ ತಿದ್ದುಪಡಿಗೆ ಕೇಂದ್ರ ಅರ್ಜಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15 : ರಫೇಲ್ ಫೈಟರ್ ಜೆಟ್ ಡೀಲ್ ಗೆ ಸಂಬಂಧಿಸಿದಂತೆ ಶುಕ್ರವಾರ ನೀಡಿರುವ ತೀರ್ಪಿನಲ್ಲಿ, ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿ ಮತ್ತು ಪಾರ್ಲಿಮೆಂಟ್ ಪಬ್ಲಿಕ್ ಅಫೇರ್ಸ್ ಕಮಿಟಿ (ಪಿಎಸಿ) ಬಗ್ಗೆ ಪ್ರಸ್ತಾಪಿಸಲಾಗಿರುವ ಪ್ಯಾರಾದಲ್ಲಿ ತಿದ್ದುಪಡಿ ತರಲು ಕೇಂದ್ರ ಸುಪ್ರೀಂ ಕೋರ್ಟಿನಲ್ಲಿ ಶನಿವಾರ ಅರ್ಜಿ ಸಲ್ಲಿಸಿದೆ.

ರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರು ನೀಡಿರುವ ತೀರ್ಪಿನ 25ನೇ ಪ್ಯಾರಾದಲ್ಲಿ ಏನು ಪ್ರಸ್ತಾಪಿಸಲಾಗಿತ್ತೆಂದರೆ, ಜೆಟ್ ವಿಮಾನದ ಬೆಲೆಯ ಬಗ್ಗೆ ಸಿಎಜಿಗೆ ವಿವರ ನೀಡಲಾಗಿದ್ದು, ಸಿಎಜಿ ಸಲ್ಲಿಸಿರುವ ಆ ವರದಿಯನ್ನು ಪಿಎಸಿ ಪರಿಶೀಲಿಸಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಬರೆದಿದ್ದಾರೆ.

ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು! ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು!

ಆದರೆ ವಸ್ತುಸ್ಥಿತಿಯೇನೆಂದರೆ, 59 ಸಾವಿರ ಕೋಟಿ ರುಪಾಯಿಯ 36 ರಫೇಲ್ ಫೈಟರ್ ಜೆಟ್ ವಿಮಾನದ ಬಗ್ಗೆ ವರದಿಯನ್ನು ಸಿಎಜಿ ಇನ್ನೂ ಸಲ್ಲಿಸಿಯೇ ಇಲ್ಲ ಮತ್ತು ಪಿಎಜಿ ಆ ವರದಿಯನ್ನು ಪರಿಶೀಲಿಸುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ, ಪಿಎಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಅವರು ವರದಿ ಬಂದೇ ಇಲ್ಲ ಎಂದು ಹೇಳಿದ್ದಾರೆ.

Rafale judgement : Govt files application for correction

ಈ ತಿದ್ದುಪಡಿಯ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ರಫೇಲ್ ಡೀಲ್ ಬಗ್ಗೆ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದ ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಜನವರಿ ಅಂತ್ಯದೊಳಗೆ ಸಿಎಜಿಯಿಂದ ರಫೇಲ್ ಡೀಲ್ ಬಗ್ಗೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ

ಒಂದು ಬಾರಿ ಸಿಎಜಿ ವರದಿ ಕೇಂದ್ರಕ್ಕೆ ಸಲ್ಲಿಕೆಯಾದರೆ, ಕೇಂದ್ರ ಸರಕಾರ ಅದನ್ನು ಸಂಸತ್ತಿನಲ್ಲಿ ಮಂಡಿಸುವ ದಿನಾಂಕ ನಿಗದಿಪಡಿಸುತ್ತದೆ. ಇದನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಪಿಎಸಿಗೆ ಅದನ್ನು ಕಳುಹಿಸಲಾಗುತ್ತದೆ. ಪಿಎಸಿಗೆ ವಿರೋಧ ಪಕ್ಷದ ನಾಯಕರು ಅಧ್ಯಕ್ಷರಾಗಿರುತ್ತಾರೆ. ಅವರು ಆ ವರದಿಯ ಮೌಲ್ಯ ಮಾಪನ ಮಾಡಿ ವರದಿಯನ್ನು ನೀಡುತ್ತಾರೆ.

ರಫೇಲ್ ಡೀಲ್ ಬಗ್ಗೆ ಸಿಎಜಿ ಕಳೆದ ಒಂದು ವರ್ಷದಿಂದ ಆಡಿಟ್ ಮಾಡುತ್ತಲೇ ಇದೆ. ಅದು ಜೆಟ್ ಫೈಟರ್ ವಿಮಾನದ ಬೆಲೆ, ಇತರ ಸ್ಪರ್ಧಿಗಳಿಂದ ಬಂದ ಹರಾಜಿನ ವಿವರ, ಮತ್ತು ಜಾಗತಿಕವಾಗಿ ಲಭ್ಯವಿರುವ ಇಂಥ ಫೈಟರ್ ಜೆಟ್ ಗಳ ಬೆಲೆಯ ತುಲನೆ ಮಾಡಿ ವರದಿಯನ್ನು ರೂಪಿಸುತ್ತದೆ. ನಂತರವೇ ಅದು ಪಾರ್ಲಿಮೆಂಟ್ ಪಬ್ಲಿಕ್ ಅಫೇರ್ಸ್ ಕಮಿಟಿ ಬಳಿಗೆ ಬರುತ್ತದೆ.

English summary
Rafale judgement : Govt files application for correction where there is reference about CAG report and PAC evaluation. Govt says that part was misinterpreted as CAG report has not been submitted yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X