ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!

|
Google Oneindia Kannada News

Recommended Video

ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ ನಡುವೆ ಶುರುವಾಯ್ತು ರಫೇಲ್ ಡೀಲ್ ಜಟಾಪಟಿ | Oneindia Kannada

ನವದೆಹಲಿ, ಫೆಬ್ರವರಿ 12 : ರಫೇಲ್ ವಿವಾದ ಅಷ್ಟು ಸುಲಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಟ್ಟು ಬಿಡುವಂತೆ ಕಾಣುತ್ತಿಲ್ಲ. ಮಂಗಳವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಮೇಲೆ ಮತ್ತೊಮ್ಮೆ ರಫೇಲ್ ದಾಳಿ ನಡೆಸಿದರು.

ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಮಾಡುವುದಾಗಿ ಪ್ರಕಟಿಸಿದ ಎರಡು ವಾರ ಮುಂಚೆಯಷ್ಟೇ ಉದ್ಯಮಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.

ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ

ರಫೇಲ್ ಒಪ್ಪಂದವಾಗುವ ಹತ್ತು ದಿನ ಮೊದಲು ಅನಿಲ್ ಅಂಬಾನಿ ಅವರು ಫ್ರಾನ್ಸ್ ನ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಈ ಡೀಲ್ ಅನ್ನು ನಾವೇ ಪಡೆಯುತ್ತೇವೆ ಎಂದಿದ್ದರು ಎಂದು ಏರ್ ಬಸ್ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದು, ಭಾರೀ ವಿವಾದ ಸೃಷ್ಟಿಸಿದೆ.

ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ರಫೇಲ್ ಡೀಲ್ ಗೆ ಸಂಬಂಧಿಸಿದ ಕರಡು ಮಾಹಿತಿ ಬೇರೆಲ್ಲರಿಗಿಂತ ಮೊದಲು ಒಬ್ಬ ಉದ್ಯಮಿಗೆ ತಿಳಿದಿತ್ತು ಎಂದರೆ ಅಚ್ಚರಿಯಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಅನಿಲ್ ಅಂಬಾನಿ ಅವರಿಗೆ ಮಿಡ್ಲ್ ಮ್ಯಾನ್ ಆಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

ಪ್ರಧಾನಿಯವರೇ ಉತ್ತರ ನೀಡಿ...

ಪ್ರಧಾನಿಯವರೇ ಉತ್ತರ ನೀಡಿ...

ಈಗ ಪ್ರಧಾನಿ ಮೋದಿ ಅವರೇ ಉತ್ತ ನೀಡಲಿ. ರಫೇಲ್ ಡೀಲ್ ಆಗುವ ಹತ್ತು ದಿನ ಮೊದಲೇ ಈ ವಿಷಯ ಅನಿಲ್ ಅಂಬಾನಿಯವರಿಗೆ ಹೇಗೆ ಗೊತ್ತಿತ್ತು? ರಕ್ಷಣಾ ಸಚಿವ, ಎಚ್ ಎಎಲ್ ಕಾರ್ಯದರ್ಶಿಗೆ ತಿಳಿಯದೆ ಇದ್ದಿದ್ದು ಒಬ್ಬ ಉದ್ಯಮಿಗೆ ಹೇಗೆ ತಿಳಿಯಿತು? ಅಕಸ್ಮಾತ್ ಇದು ಸತ್ಯವೇ ಆದರೆ ಪ್ರಧಾನಿಯು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯತೆಯ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ. ಅದಕ್ಕಾಗಿ ಕ್ರಮ ಕೈಗೊಳ್ಳಬೇಕು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ರಾಷ್ಟ್ರದ ಭದ್ರತೆ ಜೊತೆ ರಾಜಿ

ರಾಷ್ಟ್ರದ ಭದ್ರತೆ ಜೊತೆ ರಾಜಿ

ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಭಾರತ ಸರ್ಕಾರ ಫ್ರಾನ್ಸ್ ನೊಂದಿಗೆ ಮಾಡಿಕೊಳ್ಳಲಿರುವ ಈ ರಕ್ಷಣಾ ಒಪ್ಪಂದ ಬೇರೆಲ್ಲರಿಗಿಂತ ಮೊದಲು ಉದ್ಯಮಿಯೊಬ್ಬರಿಗೆ ತಿಳಿದಿತ್ತು ಎಂದರೆ ಅದರ ಅರ್ಥವೇನು? ಗೂಢಾಚಾರಿಗಳು ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿ

ಕಳ್ಳತನಕ್ಕೆ ನೆರವು ನೀಡಿದ ಮೋದಿ!

ಕಳ್ಳತನಕ್ಕೆ ನೆರವು ನೀಡಿದ ಮೋದಿ!

ಭಾರತದ ಪ್ರೀತಿಯ ವಿದ್ಯಾರ್ಥಿ ಮತ್ತು ಯುವಕರೇ, ಪ್ರತಿ ದಿನವೂ ರಫೇಲ್ ಡಿಲ್ ಗೆ ಸಂಬಂಧಿಸಿದಂತೆ ಹೊಸ ಹೊಸ ಹೊಳಹುಗಳು ಹೊರಬರುತ್ತಿರುವುದನ್ನು ನೋದಿದರೆ ಅರ್ಥವಾಗುತ್ತದೆ, ಪ್ರಧಾನಿ ತಮ್ಮ ಸ್ನೇಹಿತ ಅನಿಲ್ ಅಂಬಾನಿಯರಿಗೆ 30000 ಕೋಟಿ ರೂ.ಗಳನ್ನು ಕದಿಯಲು ನೆರವು ನೀಡಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಸಿಎಜಿ ಅಂದ್ರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್

ಸಿಎಜಿ ಅಂದ್ರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್

ಸಿಎಜಿ ವರದಿಯಲ್ಲಿ ಹುರುಳಿಲ್ಲ. ಸಿಎಜಿ ಎಂದರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್ ಎಂದು! ಅದು ನರೇಂದ್ರ ಮೋದಿ ಅವರ ವರದಿ. ಚೌಕಿದಾರನಿಂದ, ಚೌಕಿದಾರನಿಗಾಗಿ, ಚೌಕಿದಾರನೇ ಸಿದ್ಧಪಡಿಸಿದ ವರದಿ ಅದು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ರಫೇಲ್ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆ ತಗ್ಗಿಸಿದೆ: ಅರುಣ್ ಶೌರಿರಫೇಲ್ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆ ತಗ್ಗಿಸಿದೆ: ಅರುಣ್ ಶೌರಿ

English summary
Congress President Rahul Gandhi again attacks PM Narendra Modi over Rafale deal issue at Delhi. Rahul alleged that prime minister acts like middleman of industrialist Anil Ambani, who allegedly visited France and met French Defence Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X