ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಒಬ್ಬ 'ಸರಣಿ ಸುಳ್ಳುಗಾರ': ಸಚಿವ ಪಿಯೂಷ್ ಗೋಯಲ್

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪೀಯೂಷ್ ಗೋಯಲ್, ರಾಹುಲ್ ಒಬ್ಬ 'ಸರಣಿ ಸುಳ್ಳುಗಾರ' ಎಂದು ಲೇವಡಿ ಮಾಡಿದ್ದಾರೆ.

ಡಸಾಲ್ಟ್ ಏಷಿಯೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಟ್ರಾಪ್ಪೀರ್ ರಫೇಲ್ ತನ್ನ ಆಫ್‌ಸೆಟ್ ಪಾಲುದಾರನನ್ನು ಸ್ವತಃ ಆಯ್ಕೆ ಮಾಡಿಕೊಂಡಿತ್ತು ಎಂದು ಹೇಳಿರುವುದನ್ನು ಗೋಯಲ್ ಉಲ್ಲೇಖಿಸಿದ್ದಾರೆ.

ರಫೇಲ್ ಡೀಲ್: ರಿಲಯನ್ಸ್ ಜತೆ ನಡೆದಿರುವುದು ಸಣ್ಣ ಒಪ್ಪಂದವಷ್ಟೇರಫೇಲ್ ಡೀಲ್: ರಿಲಯನ್ಸ್ ಜತೆ ನಡೆದಿರುವುದು ಸಣ್ಣ ಒಪ್ಪಂದವಷ್ಟೇ

ಯುಪಿಎ ಸರ್ಕಾರದ ಅವಧಿಯಲ್ಲಿ ರಚಿಸಲಾದ ನಿಯಮಾವಳಿಗಳ ಅಡಿಯಲ್ಲಿಯೇ ತಮ್ಮ ಆಫ್‌ಸೆಟ್ ಪಾಲುದಾರನನ್ನು ಆಯ್ಕೆ ಮಾಡಿಕೊಂಡಿದ್ದು ಎಂಬುದನ್ನು ಡಸಾಲ್ಟ್ ಸಿಇಒ ಖಚಿತಪಡಿಸಿದ್ದಾರೆ. ಈ ಒಪ್ಪಂದ ಮತ್ತು ಚರ್ಚೆಗಳು 2012ರಿಂದಲೂ ಅಸ್ತಿತ್ವದಲ್ಲಿದೆ ಎಂದು ಗೋಯಲ್ ಹೇಳಿದ್ದಾರೆ.

rafale deal piyush goyal called Rahul gandhi a serial liar

ರಾಹುಲ್ ಗಾಂಧಿ ಫ್ರೆಂಚ್ ಅಧ್ಯಕ್ಷರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ರಫೇಲ್ ಒಪ್ಪಂದದ ರಹಸ್ಯದ ಬಗ್ಗೆ ಅವರಲ್ಲಿ ಕೇಳಿದ್ದಾಗಿ ಸಂಸತ್‌ನಲ್ಲಿಯೂ ಕಾಂಗ್ರೆಸ್ ಸುಳ್ಳು ಹೇಳಿತ್ತು. ಇದು ಅವರ ಜ್ಞಾನದ ಜೊಳ್ಳುತನವನ್ನು ಸೂಚಿಸುತ್ತದೆಯಷ್ಟೇ. ಏಕೆಂದರೆ ರಹಸ್ಯ ಒಪ್ಪಂದವು 2008ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೂಲಕವೇ ನಡೆದಿತ್ತು ಎಂದು ತಿಳಿಸಿದ್ದಾರೆ.

ರಫೇಲ್ ಡೀಲ್: ಫ್ರಾನ್ಸ್ ಭೇಟಿಯ ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್ರಫೇಲ್ ಡೀಲ್: ಫ್ರಾನ್ಸ್ ಭೇಟಿಯ ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್

ಬಿಜೆಪಿ ನೇತೃತ್ವದ ಸರ್ಕಾರವು ಮಾಡಿರುವ ವ್ಯವಹಾರ ನಿಯಮಾವಳಿಗಳು ಯುಪಿಎ 2007 ಮತ್ತು 2012ರಲ್ಲಿ ಸಿದ್ಧಪಡಿಸಿದ ನಿಯಮಗಳಿಗಿಂತ ಉತ್ತಮವಾಗಿವೆ ಎಂದು ಗೋಯಲ್ ಹೇಳಿದ್ದಾರೆ.

English summary
Union Minister Piyush Goyal called Congress President Rahul Gandhi a Serial liar. He lied on rafale deal in even Parliament, Goyal accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X