ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ತೀರ್ಪು: ಮೇಲ್ಮನವಿ ಸಲ್ಲಿಸಲಿರುವ ಅರುಣ್ ಶೌರಿ, ಯಶವಂತ್ ಸಿನ್ಹಾ

|
Google Oneindia Kannada News

ನವದೆಹಲಿ, ಜನವರಿ 2: ರಫೇಲ್‌ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ.

ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?

ಡಿಸೆಂಬರ್ 14ರಂದು ಸುಪ್ರೀಂಕೋರ್ಟ್ ನೀಡಿದ ರಫೇಲ್ ಡೀಲ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಲಿದ್ದಾರೆ.

ರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗ

ಅವರೊಂದಿಗೆ ಇನ್ನಿಬ್ಬರು ಅರ್ಜಿದಾರರಾದ ಶೌರಿ ಮತ್ತು ಸಿನ್ಹಾ ಅವರು ತೀರ್ಪನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಮರುಪರಿಶೀಲನಾ ಅರ್ಜಿಯನ್ನು ತೆರೆಯ ಕೋರ್ಟ್‌ನಲ್ಲಿ ಮೌಖಿಕ ವಿಚಾರಣೆಗೆ ಒಳಪಡಿಸುವಂತೆಯೂ ಕೋರಿದ್ದಾರೆ.

rafale deal judgement arun shourie yashwant sinha prashant bhushan supreme court

ತೀರ್ಪಿನಲ್ಲಿ ಹಲವು ದೋಷಗಳಿವೆ. ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಹಿ ಹಾಕದೆ ನೀಡಿದ ತಪ್ಪಾದ ವಿವರಣೆಗಳನ್ನು ಆಧಾರವಾಗಿಟ್ಟುಕೊಂಡು ತೀರ್ಪು ನೀಡಲಾಗಿದ್ದು, ಇದು ಸ್ವಾಭಾವಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ ಚಿದಂಬರಂ ಕೇಳಿದ 7 ಪ್ರಶ್ನೆಗಳು! ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ ಚಿದಂಬರಂ ಕೇಳಿದ 7 ಪ್ರಶ್ನೆಗಳು!

ತೀರ್ಪು ನೀಡಿದ ಬಳಿಕ ಅನೇಕ ಹೊಸ ಸಂಗತಿಗಳು ಬಹಿರಂಗವಾಗಿವೆ. ಇವುಗಳ ಬಗ್ಗೆಯೂ ವಿಚಾರಣೆ ನಡೆಯುವ ಅಗತ್ಯವಿದೆ ಎಂದಿದ್ದಾರೆ.

English summary
Former Union Ministers Arun Shourie and Yashwant Sinha along with advocate Prashant Bhushan will move to the Supreme Court for review of Rafale judgement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X