ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ : ಸಿಎಜಿ ವರದಿ ಮಂಡನೆ, ಕಾಂಗ್ರೆಸ್ಸಿಗೆ ಭಾರೀ ಮುಖಭಂಗ

|
Google Oneindia Kannada News

ನವದೆಹಲಿ, ಫೆಬ್ರವರಿ 13 : ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯನ್ನು ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಗಿದ್ದು, ಭಾರೀ ವಿವಾದದ ಕಿಡಿಯೆಬ್ಬಿಸಿದ್ದ ಈ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.

ಆ ವರದಿ ಏನು ಹೇಳುತ್ತದೆಂದರೆ, ಹಿಂದೆ ಡಸಾಲ್ಟ್ ಕಂಪನಿಯ ಜೊತೆ ಯುಪಿಎ ಸರಕಾರ ಮಾಡಿಕೊಂಡಿದ್ದ 126 ಯುದ್ಧ ವಿಮಾನಗಳ ಖರೀದಿಗೆ ಹೋಲಿಸಿದರೆ, ಸಂಪೂರ್ಣ ಪ್ಯಾಕೇಜ್ ಇರುವಂಥ 36 ರಫೇಲ್ ಯುದ್ಧ ವಿಮಾನಗಳ ಖರೀದಿಯಿಂದ ಭಾರತ ಶೇ.17.08ರಷ್ಟು ಹಣವನ್ನು ಉಳಿತಾಯ ಮಾಡಿದೆ.

ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!

ಐವತ್ತೆಂಡು ಸಾವಿರ ಕೋಟಿ ರುಪಾಯಿ ರಫೇಲ್ ಡೀಲ್ ನಲ್ಲಿ ಎನ್ಡಿಎ ಸರಕಾರ ಭಾರೀ ಅಕ್ರಮವೆಸಗಿದ್ದು, ಕಡಿಮೆ ಬೆಲೆಗೆ ಸಿಗುತ್ತಿದ್ದ ಯುದ್ಧ ವಿಮಾನವನ್ನು ಹೆಚ್ಚು ಬೆಲೆಗೆ ಕೊಂಡಿದ್ದಲ್ಲದೆ, ಅನಿಲ್ ಅಂಬಾನಿಗೆ ಸೇರಿದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಆಫ್ ಸೆಟ್ ಪಾರ್ಟನರ್ ಶಿಪ್ ಕೊಡಿಸಿ ಭಾರತದ ಕಣ್ಣಿಗೆ ಮಣ್ಣೆರಚಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸುತ್ತಲೇ ಇದ್ದಾರೆ.

 Rafale deal : CAG report tabled before Rajya Sabha

ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ

ಹದಿನಾರನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಬುಧವಾರದಂದು ಕಾಂಗ್ರೆಸ್ ರಫೇಲ್ ಡೀಲ್ ವಿರುದ್ಧ ಮಹಾತ್ಮಾ ಗಾಂಧಿ ಪ್ರತಿಮೆಯೆದಿರು ಭಾರೀ ಪ್ರತಿಭಟನೆಯನ್ನು ನಡೆಸುತ್ತಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು 'ಚೌಕಿದಾರ್ ಚೋರ್ ಹೈ' ಎಂಬ ಬ್ಯಾನರ್ ಹಿಡಿದುಕೊಂಡು, ಸಬ್ ಕೋ ಪತಾ ಹೈ, ಚೌಕಿದಾರ್ ಚೋರ್ ಹೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಅರುಣ್ ಜೇಟ್ಲಿ ಪ್ರತಿಕ್ರಿಯೆ : ಸಿಎಜಿ ವರದಿಯಿಂದ ರಫೇಲ್ ಬಗ್ಗೆ 'ಮಹಾಘಟಬಂಧನ್'ನ ಸುಳ್ಳುಗಳು ಮತ್ತೆ ಬಯಲಾಗಿವೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಸತತವಾಗಿ ದೇಶಕ್ಕೆ ಸುಳ್ಳುಗಳನ್ನು ಹೇಳುತ್ತಲೇ ಬರುತ್ತಿದ್ದ ಇಂಥವರನ್ನು ಪ್ರಜಾಪ್ರಭುತ್ವ ಹೇಗೆ ಶಿಕ್ಷಿಸಬೇಕು? ಎಂದಿರುವ ಅವರು, ಸುಪ್ರೀಂ ತೀರ್ಪು ಸುಳ್ಳು, ಸಿಎಜಿ ವರದಿ ಸುಳ್ಳು ಎಂದಿರುವ ಆ 'ಕುಟುಂಬ' ಹೇಳಿದ್ದು ಮಾತ್ರ ನಿಜವೆ? ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಸಿಎಜಿ ವರದಿಯ ಮುಖ್ಯಾಂಶಗಳು

* ಭಾರತೀಯ ವಾಯು ಸೇನೆ ಗುಣಮಟ್ಟದ ಅಗತ್ಯತೆಯ ಬಗ್ಗೆ ಸರಿಯಾದ ವಿವರಗಳನ್ನು ನೀಡಿರಲಿಲ್ಲ. ಈ ಕಾರಣದಿಂದಾಗಿ ಯುದ್ಧವಿಮಾನಗಳ ಯಾವುದೇ ಮಾರಾಟಗಾರ ಆ ಗುಣಮಟ್ಟವನ್ನು ಮುಟ್ಟಲಾಗಲಿಲ್ಲ. ಖರೀದಿಯ ಪ್ರಕ್ರಿಯೆಯ ಸಂದರ್ಭದಲ್ಲಿ ಗುಣಮಟ್ಟದ ಮಾನದಂಡವನ್ನು ಹಲವಾರು ಬರಲಿಸಲಾಯಿತು.

* ಈ ಕಾರಣದಿಂದಾಗಿ ತಾಂತ್ರಿಕತೆ ಮತ್ತು ಮೌಲ್ಯ ಮಾಪನ ಮಾಡುವಾಗ ಸಾಕಷ್ಟು ಸಂಕಷ್ಟಗಳು ಎದುರಾದವು ಮತ್ತು ಸ್ಪರ್ಧಾತ್ಮಕ ಟೆಂಡರಿಂಗ್ ಗೆ ಚ್ಯುತಿಯಾಯಿತು. ಇದರಿಂದಾಗಿ ಖರೀದಿ ಪ್ರಕ್ರಿಯೆ ತಡವಾಯಿತು.

* ಡಸ್ಸಾಲ್ಟ್ ಏವಿಯೇಶನ್ ಮಾಡಿದ್ದ ಹರಾಜು ಮೊತ್ತ ಜಾಸ್ತಿಯಿದ್ದರಿಂದ ಮತ್ತು ಯುರೋಪಿಯನ್ ಏರೋನಾಟಿಕ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪನಿ ಟೆಂಡರ್ ಅಗತ್ಯಗಳನ್ನು ಪೂರೈಸದಿದ್ದರಿಂದ 2015ರ ಮಾರ್ಚ್ ನಲ್ಲಿಯೇ 126 ರಫೇಲ್ ಯುದ್ಧ ವಿಮಾನ ಖರೀದಿಯನ್ನು ರದ್ದುಗೊಳಿಸಬೇಕೆಂದು ರಕ್ಷಣಾ ಮಂತ್ರಾಲಯದ ತಂಡ ಶಿಫಾರಸು ಮಾಡಿತ್ತು.

English summary
Rafale deal : CAG report, tabled before Rajya Sabha today, says compared to the 126 aircraft deal, India managed to save 17.08% money for the India Specific Enhancements in the 36 Rafale contract.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X