ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಉದ್ಯೋಗ ಬೇಕಾ, Facebook Account ಬೇಕಾ; ಹೈಕೋರ್ಟ್ ಪ್ರೆಶ್ನೆ!

|
Google Oneindia Kannada News

ನವದೆಹಲಿ, ಜುಲೈ.15: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮಗೆ ಫೇಸ್ ಬುಕ್ ಮತ್ತು ಇನ್ ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳು ತುಂಬಾ ಅಗತ್ಯವಾಗಿದ್ದಲ್ಲಿ ಸೇನೆಗೆ ರಾಜೀನಾಮೆ ನೀಡಿ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

Recommended Video

Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

ಭಾರತೀಯ ಸೇನೆಯ ಕಮಾಂಡರ್ ಒಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ರಾಜೀವ್ ಶಾಹೈ ಎಂಡ್ಲಾ ಮತ್ತು ಆಶಾ ಮೆನನ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಫೇಸ್ ಬುಕ್ ಮತ್ತು ಇನ್ ಸ್ಟ್ರಾಗ್ರಾಮ್ ಆ್ಯಪ್ ಗಳನ್ನು ಡಿಲೀಟ್ ಮಾಡುವಂತೆ ಕಟ್ಟುನಿಟ್ಟಿದ ಸೂಚನೆ ನೀಡಿದೆ.

ಚೀನಾಗೆ ತಿರುಗೇಟು ನೀಡಲು ಭಾರತದ ಕೈಗೆ ಅಮೆರಿಕಾದ 'ಅಸ್ತ್ರ'!ಚೀನಾಗೆ ತಿರುಗೇಟು ನೀಡಲು ಭಾರತದ ಕೈಗೆ ಅಮೆರಿಕಾದ 'ಅಸ್ತ್ರ'!

ಭಾರತೀಯ ಸೇನೆ ನಿಯಮಗಳಿಗೆ ಮಧ್ಯಂತರ ತಡೆ ನೀಡುವುದಕ್ಕೆ ಸಾಧ್ಯವಿಲ್ಲ. ದೇಶದ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ಮಧ್ಯಪ್ರವೇಶ ಸಾಧ್ಯವಿಲ್ಲ. ಒಂದು ವ್ಯವಸ್ಥೆಯಲ್ಲಿ ಇರುವಾಗ ಅಲ್ಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಮುಂದೆ ಸಾಮಾಜಿಕ ಜಾಲತಾಣ ಬಳಕೆಗೆ ಅವಕಾಶವಿದೆ

ಮುಂದೆ ಸಾಮಾಜಿಕ ಜಾಲತಾಣ ಬಳಕೆಗೆ ಅವಕಾಶವಿದೆ

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಯಾವುದೇ ರೀತಿ ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿರಬೇಕು. ಸಾಮಾಜಿಕ ಜಾಲತಾಣಗಳನ್ನು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಳಸಿಕೊಳ್ಳುವುದಕ್ಕೆ ಅವಕಾಶ ಇದ್ದೇ ಇರುತ್ತದೆ ಎಂದು ಕೋರ್ಟ್ ತಿಳಿಸಿದೆ.

ಸ್ನೇಹಿತರ ಸಂಪರ್ಕ ಮತ್ತು ದತ್ತಾಂಶಕ್ಕೆ ಹೊಡೆತ ಎಂದು ವಾದ

ಸ್ನೇಹಿತರ ಸಂಪರ್ಕ ಮತ್ತು ದತ್ತಾಂಶಕ್ಕೆ ಹೊಡೆತ ಎಂದು ವಾದ

ಒಂದು ಬಾರಿ ಫೇಸ್ ಬುಕ್ ಡಿಲೀಟ್ ಮಾಡಿದ್ದಲ್ಲಿ ಅದರಲ್ಲಿ ಶೇಖರಣೆ ಆಗಿರುವ ಸಂಪರ್ಕ ಮತ್ತು ಸ್ನೇಹಿತರ ದತ್ತಾಂಶಗಳೆಲ್ಲ ಸಂಪೂರ್ಣವಾಗಿ ಅಳಸಿ ಹೋಗುತ್ತದೆ. ಇದನ್ನು ಮತ್ತೆಂದೂ ಸರಿಪಡಿಸುವುದಕ್ಕೆ ಸಾಧ್ಯ ಆಗುವುದಿಲ್ಲ ಎಂದು ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ವಾದ ಮಂಡಿಸಿದ್ದರು.

ನಿಯಮಗಳ ಕಡ್ಡಾಯ ಪಾಲನೆಗೆ ದೆಹಲಿ ಹೈಕೋರ್ಟ್ ಸೂಚನೆ

ನಿಯಮಗಳ ಕಡ್ಡಾಯ ಪಾಲನೆಗೆ ದೆಹಲಿ ಹೈಕೋರ್ಟ್ ಸೂಚನೆ

ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ಅವರ ವಾದವನ್ನು ಹೈಕೋರ್ಟ್ ನಿರಾಕರಿಸಿದೆ. ಫೇಸ್ ಬುಕ್ ಖಾತೆಯನ್ನು ಯಾವುದೇ ಸಂದರ್ಭದಲ್ಲಿ ಬೇಕಾದರೂ ನೀವು ಕ್ರಿಯೇಟ್ ಮಾಡಿಕೊಳ್ಳಬಹುದು. ಆದರೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದಲ್ಲಿ ನೀವು ಫೇಸ್ ಬುಕ್ ಡಿಲೀಟ್ ಮಾಡಲೇಬೇಕು. ಒಂದು ವೇಳೆ ನಿಮಗೆ ಫೇಸ್ ಬುಕ್ ಅಷ್ಟೊಂದು ಅಗತ್ಯ ಎಂದು ಎನಿಸಿದ್ದಲ್ಲಿ ಸೇನೆಗೆ ರಾಜೀನಾಮೆ ನೀಡಬಹುದು ಎಂದು ಕೋರ್ಟ್ ತೀಕ್ಷ್ಣವಾಗಿ ಚಾಟಿ ಬೀಸಿದೆ.

ಜೂನ್.06ರಿಂದ ಹೊಸ ನಿಯಮ ಜಾರಿಗೊಳಿಸಿದ ಸೇನೆ

ಜೂನ್.06ರಿಂದ ಹೊಸ ನಿಯಮ ಜಾರಿಗೊಳಿಸಿದ ಸೇನೆ

ಕಳೆದ ಜೂನ್.06ರಿಂದ ಭಾರತೀಯ ಸೇನೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ ಫೇಸ್ ಬುಕ್, ಇನ್ ಸ್ಟ್ರಾಗ್ರಾಮ್ ಖಾತೆಗಳನ್ನು ಡಿಲೀಟ್ ಮಾಡಬೇಕು. ಜೊತೆಗೆ 87 ಆ್ಯಪ್ ಗಳನ್ನು ಬಳಕೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿತ್ತು. ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಲಾಗಿತ್ತು.

English summary
Quit Army Or Delete Facebook Account, Choice Yours: Delhi High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X