India
 • search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯೂಸ್ ಶ್ರೇಯಾಂಕ ಪಟ್ಟಿ: ಬೆಂಗಳೂರಿಗೆ 114ನೇ ಉತ್ತಮ ನಗರ

|
Google Oneindia Kannada News

ನವದೆಹಲಿ ಜೂ. 29: ಲಂಡನ್ ಮೂಲದ ಕ್ವಾರೆಕೆಲಿ ಸೈಮಂಡ್ಸ್ (QS) ಸಂಸ್ಥೆ ದೇಶದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಹೊಂದಿದ ಟಾಪ್ 140 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು 114ನೇ ಸ್ಥಾನ ಪಡೆದಿದೆ.

ಕ್ಯೂಎಸ್ ಬುಧವಾರ ಪಟ್ಟಿ ಬಿಡುಗಡೆ ಮಾಡಿದೆ. ಶ್ರೇಯಾಂಕದ ಪ್ರಕಾರ ಪಟ್ಟಿಯಲ್ಲಿ ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ನವದೆಹಲಿ ಸ್ಥಾನ ಪಡೆದಿವೆ. ಅತ್ಯುತ್ತಮ ವಿದ್ಯಾರ್ಥಿಗಳನ್ನು ಹೊಂದಿದ ನಗರ ಪೈಕಿ ಮುಂಬೈ ದೇಶದಲ್ಲೇ ಅಗ್ರಸ್ಥಾನನದಲ್ಲಿದೆ. ಜಗತ್ತಿನ ಶ್ರೇಯಾಂಕದಲ್ಲಿ ಮುಂಬೈ 103ನೇ ಸ್ಥಾನ ಪಡೆದು ಉತ್ತಮ ನಗರವಾಗಿ ಹೊರ ಹೊಮ್ಮಿದೆ.

ಉಳಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಶ್ರೇಯಾಂಕ ಪ್ರತಿನಿಧಿಸುವಲ್ಲಿ ಬೆಂಗಳೂರು 114ನೇ ಸ್ಥಾನದಲ್ಲಿದೆ. ನಂತರದ ಸಾಲಿನಲ್ಲಿ ಚೆನ್ನೈ (125) ಮತ್ತು ನವದೆಹಲಿ (129) ನಗರಗಳಿವೆ.

ಅಖಿಲ ಭಾರತ ಉನ್ನತ ಶಿಕ್ಷಣ ಸರ್ವೇ (AISHE) 2018 ಮತ್ತು 19ರ ಪ್ರಕಾರ, ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 47,427 ಮಾತ್ರವೇ ಆಗಿತ್ತು. ಅದೇ ಭಾರತದಲ್ಲಿ 2023ರ ಅಂತ್ಯದ ಹೊತ್ತಿಗೆ 2 ಲಕ್ಷ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸೆಳೆಯಲಾಯಿತು.

ಅಂದರೆ ಒಟ್ಟು ನಾಲ್ಕು ಪಟ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ದೇಶ ವಿಶ್ವವಿದ್ಯಾಲಯಗಳಲ್ಲಿ ದಾಖಲಾದಂತಾಯಿತು. ಈ ಸಮೀಕ್ಷೆ ಕೋವಿಡ್ ಪಿಡುಗಿನ ಮುನ್ನವೇ ನಡೆದಿದ್ದರೆ ವರದಿ ಇನ್ನಷ್ಟು ಪರಿಣಾಮಕಾರಿ ಮಾಹಿತಿ ನೀಡುತ್ತಿತ್ತು ಎಂದು ಅಂದಾಜಿಸಲಾಗಿದೆ.

ಸಿಯೋಲ್ ಅತ್ಯುತ್ತಮ ಶೈಕ್ಷಣಿಕ ನಗರ

ಸಿಯೋಲ್ ಅತ್ಯುತ್ತಮ ಶೈಕ್ಷಣಿಕ ನಗರ

ಆಶ್ಚರ್ಯವೆಂಬಂತೆ ಜಗತ್ತಿನಲ್ಲೇ ಏಷ್ಯಾ ಖಂಡ ಅತ್ಯುತ್ತಮ ವಿದ್ಯಾರ್ಥಿ ಅನುಭವಗಳಿಗೆ ನೆಲೆಯಾಗಿದೆ. ದಕ್ಷಿಣ ಕೋರಿಯಾದ ಸಿಯೋಲ್ ಪ್ರದೇಶದಲ್ಲಿ ಕಲಿಕಾ ವಾತಾವರಣ ಇದಕ್ಕೆ ಪೂಕವಾಗಿದೆ. ಸಿಲೋಲ್ ಒಂದು ಅಸಾಧಾರಣ ಶೈಕ್ಷಣಿಕ ಸ್ಥಳ. ದಕ್ಷಿಣ ಕೊರಿಯಾ ರಾಜಧಾನಿಯಿಂದ ಪ್ರತ್ಯೇಕವಾಗಿ ಬೇರ್ಪಟ್ಟಿಲ್ಲ. ಸಿಯೋಲ್ ರೀತಿಯಲ್ಲೇ ವಿಶ್ವದ ಅಗ್ರ ಹತ್ತು ನಗರಗಳ ಪೈಕಿ ಐದು ನಗರಗಳು ಏಷ್ಯಾದಲ್ಲಿ ಇವೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ವಿದ್ಯಾರ್ಥಿಗಳಿಗೆ ನೆರವಾಗುವ ಕ್ಯೂಎಸ್ ನ ಶ್ರೇಯಾಂಕ ಪಟ್ಟಿ

ವಿದ್ಯಾರ್ಥಿಗಳಿಗೆ ನೆರವಾಗುವ ಕ್ಯೂಎಸ್ ನ ಶ್ರೇಯಾಂಕ ಪಟ್ಟಿ

ಏಷ್ಯಾ ಉನ್ನತ ಶಿಕ್ಷಣದ ಶ್ರೇಷ್ಠತೆಯ ಭದ್ರಕೋಟೆಯಾಗಿದೆ. ಏಷ್ಯಾ ಖಂಡದಲ್ಲಿರುವ ಸಾಕಷ್ಟು ಮೆಟ್ರೋಪಾಲಿಟನ್ ಹಬ್‌ಗಳಲ್ಲಿ ಉನ್ನತ ಶಿಕ್ಷಣಕ್ಕೆ, ಅತ್ಯುತ್ತಮ ವೃತ್ತಿ ಅವಕಾಶಗಳು ಇವೆ. ವಿದ್ಯಾರ್ಥಿಗಳಿಗೆ ವಾಸಕ್ಕೆ ಯೋಗ್ಯವಾದ ಸ್ಥಳ ಈ ಪ್ರದೇಶ ಹೊಂದಿದೆ ಎಂದು ಕ್ಯೂಎಸ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಬೆನ್ ಸೌಟರ್ ತಿಳಿಸಿದ್ದಾರೆ.

ಕ್ಯೂಎಸ್ ಸಂಸ್ಥೆಯ ಈ ವರದಿಯು ಅತ್ಯುತ್ತಮ ಶ್ರೇಯಾಂಕದ ನಗರದಲ್ಲಿರುವ ವಿದ್ಯಾರ್ಥಿಗಳಿಗೆ ಭವಿಷ್ಯ ಕಲಿಕೆ ಸಾಕಷ್ಟು ಮಾಹಿತಿ ನೀಡುತ್ತದೆ. ವರದಿಯಿಂದ ಯಾವ ನಗರಗಳಲ್ಲಿ ಯಾವ ರೀತಿ ಶೈಕ್ಷಣಿಕ ಸೌಲಭ್ಯಗಳು ಇವೆ. ವಿದ್ಯಾಭ್ಯಾಸಕ್ಕೆ ಯಾವ ನಗರ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ಬಗ್ಗೆ ಮಾಹಿತಿ ಸಿಕ್ಕಂತಾಗುತ್ತದೆ. ವರದಿಯಲ್ಲಿ ವಿಶ್ವವಿದ್ಯಾಲಯಗಳ ಗುಣಮಟ್ಟ, ಕಲಿತು ತೇರ್ಗಡೆಯಾದ ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯ ಸಹ ಸಂಗ್ರಹವಾಗಿವೆ ಎಂದು ತಿಳಿದು ಬಂದಿದೆ.

ಏಷ್ಯಾದಲ್ಲೇ ಸಿಯೋಲ್ ಅಗ್ರಸ್ಥಾನ

ಏಷ್ಯಾದಲ್ಲೇ ಸಿಯೋಲ್ ಅಗ್ರಸ್ಥಾನ

ಸಮೀಕ್ಷೆಯ ಅಧ್ಯಯನವನ್ನು 4 ವರ್ಷಕ್ಕೆ ವಿಸ್ತರಿಸಿದ ಶ್ರೇಯಾಂಕದಲ್ಲಿ ಲಂಡನ್ ಸಹ ಟಾಪ್ ಸ್ಥಾನದಲ್ಲಿ ನಿಲ್ಲಲಿದೆ. ಇನ್ನು ಕ್ಯೂಎಸ್ ಶ್ರೇಯಾಂಕ ಪಟ್ಟಿ ಕೇವಲ ಏಷ್ಯಾ ಖಂಡದ ವ್ಯಾಪ್ತಿಗೆ ನೋಡಿದರೆ ಸಿಯೋಲ್ ಮೊದಲ ಸ್ಥಾನ ಅಲಂಕರಿಸಲಿದೆ. ಹಾಂಗ್ ಕಾಂಗ್, ಸಿಂಗಾಪುರ್, ಓಸಾಕಾ ನಗರಗಳು ಅತ್ಯುತ್ತಮ ಶ್ರೇಯಾಂಕದ ವಿದ್ಯಾರ್ಥಿಗಳನ್ನು ಹೊಂದಿದ ನಗರಗಳ ಸಾಲಿನಲ್ಲಿ ನಿಲ್ಲುತ್ತವೆ ಎಂದು ತಿಳಿದು ಬಂದಿದೆ.

98ಸಾವಿರ ವಿದ್ಯಾರ್ಥಿ ಪ್ರತಿಕ್ರಿಯೆ

98ಸಾವಿರ ವಿದ್ಯಾರ್ಥಿ ಪ್ರತಿಕ್ರಿಯೆ

ಕ್ಯೂಎಸ್ ಸಮೀಕ್ಷೆಯಲ್ಲಿ ಒಟ್ಟು 98 ಸಾವಿರ ವಿದ್ಯಾರ್ಥಿಗಳನ್ನು ಈ ಸಂಬಂಧ ಪ್ರತಿಕ್ರಿಯೆ ಪಡೆಯಲಾಗಿದೆ. ಸಮೀಕ್ಷೆ ವೇಳೆ ಹಿರಿಯ ವಿದ್ಯಾರ್ಥಿಗಳು ತಾವು ಶಿಕ್ಷಣ ಪೂರೈಸಿದ ಶೈಕ್ಷಣಿಕ ಸಂಸ್ಥೆಗಳೊಂದಿಗಿನ ಭಾವನಾತ್ಮಕ ವಿಷಯಗಳನ್ನು ಪ್ರತಿಕ್ರಿಯೆ ರೂಪದಲ್ಲಿ ತೆರೆದಿಟ್ಟಿದ್ದಾರೆ. ಅವು ಹೊಸದಾಗಿ ಆಯಾ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಹಕಾರಿಯಾಗಲಿವೆ.

   ಮುಂಬೈನಲ್ಲಿ ಕಳ್ಳನ ಬರ್ತಡೇ ಸೆಲೆಬ್ರೇಶನ್ ಮಾಡಿದ್ಯಾಕೆ? ಸೆಲೆಬ್ರೇಶನ್ ಹಿಂದಿದೆ ಮನಕರಗೋ ಕಥೆ | Oneindia Kannada
   English summary
   Quacquarelli Symonds (QS) ranking. Mumbai, Bengaluru, Chennai and New Delhi top cities for international students
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X