ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಕಾರ್ಯಾಚರಣೆ: ಜೈಶ್‌ನ ಪ್ರಮುಖ ಕಮಾಂಡರ್‌ಗಳ ಹತ್ಯೆ

|
Google Oneindia Kannada News

ನವದೆಹಲಿ, ಏಪ್ರಿಲ್ 22: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಪ್ರಮುಖ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 66 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ 27 ಮಂದಿ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗೆ ಸೇರಿದವರಾಗಿದ್ದಾರೆ. ಅದರಲ್ಲಿ 19 ಮಂದಿಯನ್ನು ಫೆ. 14ರ ಪುಲ್ವಾಮಾ ದಾಳಿಯ ಬಳಿಕ ಸಾಯಿಸಲಾಗಿದೆ.

ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ

ಪುಲ್ವಾಮಾ ದಾಳಿ ನಡೆದು 45 ದಿನಗಳ ಒಳಗೆ ದಾಳಿಯಲ್ಲಿ ಭಾಗವಹಿಸಿದ್ದ ಜೈಶ್ ಎ ಮೊಹಮ್ಮದ್‌ನ ಇಡೀ ತಂಡವನ್ನು ತಾಂತ್ರಿಕ ಮತ್ತು ಮಾನವ ಬೇಹುಗಾರಿಕಾ ಆಧಾರಿತ ಕಾರ್ಯಾಚರಣೆಯ ಸಂಯೋಜನೆಯ ಮೂಲಕ ನಿಯಂತ್ರಿಸಲಾಗಿದೆ. ಇದರಲ್ಲಿ ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರರ ಬಂಧನ ಮತ್ತು ಗಡಿಪಾರು ಕೂಡ ಸೇರಿದೆ ಎಂದು ಮೂಲಗಳು ವಿವರಿಸಿವೆ.

Pulwama terror attack Indian army eliminated top JeM Commanaders

ಪುಲ್ವಾಮಾ ದಾಳಿಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ನಾಲ್ವರು ಜೈಶ್ ಉಗ್ರರನ್ನು ವಿಭಿನ್ನ ಕಾರ್ಯಾಚರಣೆಗಳಲ್ಲಿ ಹೊಡೆದುರುಳಿಸಲಾಗಿದೆ. ಇನ್ನು ನಾಲ್ವರನ್ನು ಬಂಧಿಸಲಾಗಿದೆ.

'ಪುಲ್ವಾಮಾ ದಾಳಿಯಲ್ಲಿ ಜೈಷೆ ವಿರುದ್ಧ ಇನ್ನಷ್ಟು ಸಾಕ್ಷ್ಯ ಇದ್ದರೆ ನೀಡಿ' 'ಪುಲ್ವಾಮಾ ದಾಳಿಯಲ್ಲಿ ಜೈಷೆ ವಿರುದ್ಧ ಇನ್ನಷ್ಟು ಸಾಕ್ಷ್ಯ ಇದ್ದರೆ ನೀಡಿ'

ಪ್ರಮುಖ ಕಮಾಂಡರ್‌ಗಳಾಗಿದ್ದ ಮುಹಮ್ಮದ್ ಉಮರ್ ಮತ್ತು ಉಸ್ಮಾನ್ ಇಬ್ರಾಹಿಂ ಅಲಿಯಾಸ್ ಹೈದರ್‌ನನ್ನು ಹತ್ಯೆಮಾಡಲಾಗಿದೆ. ಕಮ್ರಾನ್ ಹಾಗೂ ಸಜ್ಜದ್ ಭಟ್ ಎಂಬಿಬ್ಬರು ಉಗ್ರರು ಕೂಡ ಹತ್ಯೆಯಾಗಿದ್ದಾರೆ.

English summary
Indian Army eliminated top Jaish e Mohammed commanders in post Pulwama terror attack operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X