ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಪಿತೂರಿ ನಡೆದಿದ್ದು ಮಾರ್ಚ್ ನಲ್ಲಿ! RDX ಸಾಗಿಸಿದ್ದು ಸಿಲಿಂಡರ್ ನಲ್ಲಿ!

|
Google Oneindia Kannada News

Recommended Video

Pulwama:ಪುಲ್ವಾಮಾ ದಾಳಿ ಪಿತೂರಿ ನಡೆದಿದ್ದು ಮಾರ್ಚ್ ನಲ್ಲಿ! RDX ಸಾಗಿಸಿದ್ದು ಸಿಲೀಂಡರ್ ನಲ್ಲಿ |Oneindia Kannada

ನವದೆಹಲಿ, ಫೆಬ್ರವರಿ 20: 40 ಕ್ಕೂ ಹೆಚ್ಚು ಯೋಧರ ಬಲಿದಾನಕ್ಕೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಯ ಪಿತೂರಿ 2018 ರ ಮಾರ್ಚ್ ನಲ್ಲೇ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಸುಮಾರು 80 ಕೆಜಿಗೂ ಅಧಿಕ ಆರ್ ಡಿಎಕ್ಸ್ ಅನ್ನು ಬಳಸಲಾಗಿದ್ದು, ಇದರಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇನ್ನಿತರ ರಾಸಾಯನಿಕಗಳಿದ್ದವು. ಕಳೆದ ಮಾರ್ಚ್ ನಲ್ಲಿ ಸುಮಾರು 13 ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದರು. ಅವರು ಪೂಂಚ್, ಶೋಪಿಯಾನ್ ಮೂಲಕ ಆರ್ ಡಿಎಕ್ಸ್ ಗಳನ್ನು ಸಾಗಿಸಿದ್ದರು. ನಂತರ ಮಿಡೋರಾ ಟ್ರಾಲ್ ಪ್ರದೇಶದಿಂದ ಪುಲ್ವಾಮಾಕ್ಕೆ ಆರ್ ಡಿಎಕ್ಸ್ ಗಳನ್ನು ಸಿಲಿಂಡರ್ ಮತ್ತು ಕಲ್ಲಿದ್ದಲು ಚೀಲಗಳ ಮೂಲಕ ಸಾಗಿಸಲಾಗಿತ್ತು.

Pulwama terror attack: Conspiracy hatched in march 2018, RDX smuggled by cyllinders

13 ಉಗ್ರರಲ್ಲಿ ಮೊನ್ನೆ ಭಾರತೀಯ ಸೇನೆಯು ಬಲಿಹಾಕಿದ ಕಮ್ರಾನ್ ಮತ್ತು ರಶೀದ್ ಘಾಜಿ ಸಹ ಇದ್ದರು. ಇವರೇ ಇಡೀ ಘಟನೆಯ ಸಂಚುಕೋರರು ಎನ್ನಲಾಗಿತ್ತು.

ಸಿಆರ್ ಪಿಎಫ್ ಶಿಬಿರಗಳ ಮೇಲೆ ದಾಳಿ ಮಾಡುವುದರಿಂದ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ನಿರೀಕ್ಷಿಸಿದ್ದ ಈ ಉಗ್ರರು ಸಿಆರ್ ಪಿಎಫ್ ವಾಹನಗಳ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದರು.

ಹಿಮಮಳೆಯ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಕೆಲ ದಿನ ಮುಚ್ಚಲಾಗಿತ್ತು. ಪೆಬ್ರವರಿ 14 ರಂದು ಮತ್ತೆ ಹೆದ್ದಾರಿ ತೆರೆದ ನಂತರ ಸಿಆರ್ ಪಿಎಫ್ ಯೋಧರ ವಾಹನಗಳು ಈ ಮಾರ್ಗವಾಗಿ ಸಾಗಲಿವೆ ಎಂಬುದು ಉಗ್ರರಿಗೆ ತಿಳಿದಿತ್ತು. ಆದ್ದರಿಂದ ಆ ದಿನವನ್ನೇ ಆಯ್ದುಕೊಂಡಿದ್ದರು.

ಆರ್ ಡಿಎಕ್ಸ್ ತುಂಬಿದ್ದ ಕಾರನ್ನು ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸುವ ಯೋಜನೆ ಸಫಲವಾಗಿತ್ತು. 44 ಯೋಧರು ಹುತಾತ್ಮರಾದರು. ಅದಾಗಿ ನೂರು ಗಂಟೆಗೂ ಮೊದಲೇ ಭಾರತೀಯ ಸೇನೆ ಸಂಚುಕೋರರನ್ನು ಹೊಡೆದುರುಳಿಸಿದೆ.

English summary
The deadly Pulwama attack, that claimed lives of 40 CRPF personnel, was being formulated by Jaish-e-Mohamammad terrorists from March 2018. As per sources, the process of collecting RDX began from July 2018 and the explosives were smuggled using cylinders and coal bags to Tral village of Pulwama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X