ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಯ ಲೇವಡಿ: ಎನ್‌ಡಿಟಿವಿಯ ನಿಧಿ ಸೇಥಿ ಅಮಾನತು

|
Google Oneindia Kannada News

Recommended Video

Pulwama : ಯೋಧರ ದಾಳಿಯ ವಿಷಯಕ್ಕೆ ವಿಕೃತಿ ಮೆರೆದ ಮಾಧ್ಯಮದ ಉಪಸಂಪಾದಕಿ ಅಮಾನತು | Oneindia Kannada

ನವದೆಹಲಿ, ಫೆಬ್ರವರಿ 16: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಘಟನೆಯನ್ನು ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಲು ಬಳಸಿಕೊಂಡ ಎನ್‌ಡಿಟಿವಿ ವಾಹಿನಿಯ ಉಪ ಸುದ್ದಿ ಸಂಪಾದಕಿ ನಿಧಿ ಸೇಥಿ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.

ನಿಧಿ ಸೇಥಿ ಅವರು ಪುಲ್ವಾಮಾ ಭಯೋತ್ಪಾದನಾ ಕೃತ್ಯವನ್ನು ವ್ಯಂಗ್ಯವಾಡುವ ಅಸೂಕ್ಷ್ಮತೆಯ ಪೋಸ್ಟ್‌ಅನ್ನು ಮಾಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ 56 ಇಂದಿನ ಎದೆಯ ಕುರಿತು ಲೇವಡಿ ಮಾಡಲು ಈ ರೀತಿ ಪೋಸ್ಟ್ ಹಾಕುವ ಮೂಲಕ ಅವರು ವಿಕೃತಿ ಮೆರೆದಿದ್ದರು. ಇದು ನೆಟ್ಟಿಗರನ್ನು ಕೆರಳಿಸಿತ್ತು. ಎನ್‌ಡಿಟಿವಿ ಕೂಡ ಇದರಿಂದ ಮುಜುಗರಕ್ಕೆ ಒಳಗಾಗಿತ್ತು.

ಪುಲ್ವಾಮಾ ದಾಳಿ ನಡೆಯಬೇಕಾಗಿದ್ದೇ ಎಂದ ಸಮಾಜವಾದಿ ಪಕ್ಷ ನಾಯಕ!ಪುಲ್ವಾಮಾ ದಾಳಿ ನಡೆಯಬೇಕಾಗಿದ್ದೇ ಎಂದ ಸಮಾಜವಾದಿ ಪಕ್ಷ ನಾಯಕ!

ಘಟನೆ ಸಂಭವಿಸಿದ ಸಂದರ್ಭದಿಂದಲೂ ದೇಶದೊಳಗಿನ ಅನೇಕರು ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಹಾಗೂ ಸರ್ಕಾರವನ್ನು ಟೀಕಿಸಲು ಉಗ್ರರ ಹೇಯ ಕೃತ್ಯವನ್ನು ಸಮರ್ಥಿಸುವ ರೀತಿಯಲ್ಲಿ ಟ್ವೀಟ್‌ ಹಾಗೂ ಫೇಸ್‌ಬುಕ್ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಅವುಗಳನ್ನು ನೋಡಿದ ನೆಟ್ಟಿಗರು ಸ್ಕ್ರೀನ್ ಶಾಟ್‌ ತೆಗೆದುಕೊಂಡು ಅದನ್ನು ಅವರು ಕೆಲಸ ಮಾಡುವ ಕಂಪೆನಿಗಳ ಗಮನಕ್ಕೆ ತರುತ್ತಿದ್ದಾರೆ.

ಹೌ ಈಸ್‌ ಜೈಶ್ ಎಂದ ನಿಧಿ

'ಕಲ್ಪನೆಯ 56 ಇಂಚಿಗಿಂತಲೂ ಈ ಭಯಾನಕ 44 ದೊಡ್ಡದು ಎನ್ನುವುದು ಸಾಬೀತಾಯಿತು #ಹೌ ಈಸ್‌ ಜೈಶ್' ಎಂದು ನಿಧಿ ಸೇಥಿ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್ ಮಾಡಿದ್ದರು.

'ಹೌ ಈಸ್ ದಿ ಜೈಶ್' ಎಂದು ವಿಕೃತಿ ಮೆರೆಯುತ್ತಿದ್ದಾರೆ ಪಾಕ್ ಪರ ವಾದಿಗಳು 'ಹೌ ಈಸ್ ದಿ ಜೈಶ್' ಎಂದು ವಿಕೃತಿ ಮೆರೆಯುತ್ತಿದ್ದಾರೆ ಪಾಕ್ ಪರ ವಾದಿಗಳು

ಎರಡು ವಾರ ಅಮಾನತು

ಈ ಬಗ್ಗೆ ಟ್ವೀಟ್ ಮಾಡಿರುವ ವಾಹಿನಿ, 'ನಮ್ಮ ವೆಬ್‌ಸೈಟ್‌ನ ಉಪ ಸುದ್ದಿ ಸಂಪಾದಕಿ ತಮ್ಮ ವೈಯಕ್ತಿಕ ಫೇಸ್‌ಬುಕ್ ಖಾತೆಯಲ್ಲಿ ಪುಲ್ವಾಮಾದ ಭಯೋತ್ಪಾದನಾ ದಾಳಿಯ ದುರಂತದ ಬಗ್ಗೆ ಬರೆದಿರುವುದನ್ನು ಎನ್‌ಡಿಟಿವಿ ಬಲವಾಗಿ ಖಂಡಿಸುತ್ತದೆ. ಅವರನ್ನು ತಕ್ಷಣದಿಂದಲೇ ಎರಡು ವಾರ ಕಾಲ ಅಮಾನತು ಮಾಡುತ್ತಿದ್ದೇವೆ. ಕಂಪೆನಿಯ ಶಿಸ್ತು ಸಮಿತಿಯು ಮುಂದಿನ ಕ್ರಮ ಕೈಗೊಳ್ಳಲಿದೆ' ಎಂದು ತಿಳಿಸಿದೆ.

ಯೋಧರ ಸಾವಿಗೆ ಸಂಭ್ರಮಿಸಿದ ವಿದ್ಯಾರ್ಥಿ ವಿರುದ್ಧ ಎಫ್‌ಐಆರ್ ಯೋಧರ ಸಾವಿಗೆ ಸಂಭ್ರಮಿಸಿದ ವಿದ್ಯಾರ್ಥಿ ವಿರುದ್ಧ ಎಫ್‌ಐಆರ್

ಇದೇ ಸರ್ಜಿಕಲ್ ಸ್ಟ್ರೈಕ್ ಎಂದ ಕಾಶ್ಮೀರಿ

ಇನ್ನೊಂದು ಪ್ರಕರಣದಲ್ಲಿ, ಪುಲ್ವಾಮಾ ದಾಳಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ರಿಯಾಜ್ ಅಹ್ಮದ್ ವಾನಿಗೆ ಮೆಕ್ಲೋಡೆಸ್ ಫಾರ್ಮಾಸಿಟಿಕಲ್ಸ್ ಕಂಪೆನಿ ಶೋಕಾಸ್ ನೋಟಿಸ್ ನೀಡಿದೆ. ಒಂದು ವಾರದ ಒಳಗೆ ತಮ್ಮ ನಿಂದನಾರ್ಹ ಹೇಳಿಕೆಗೆ ವಿವರಣೆ ನೀಡದೆ ಇದ್ದರೆ ಶಾಶ್ವತವಾಗಿ ಉದ್ಯೋಗದಿಂದ ಕಿತ್ತುಹಾಕುವುದಾಗಿ ಎಚ್ಚರಿಕೆ ನೀಡಿದೆ.

ಕಾಶ್ಮೀರ ಮೂಲದ ರಿಯಾಜ್ ಅಹ್ಮದ್ ವಾನಿ 'ಇದನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯುತ್ತಾರೆ' ಎಂಬುದಾಗಿ ಟ್ವೀಟ್ ಮಾಡಿ ಉಗ್ರರ ದಾಳಿಯನ್ನು ಸಂಭ್ರಮಿಸಿದ್ದ.

ರೈಲ್ವೆ ಉದ್ಯೋಗಿ ಬಂಧನ

ರೈಲ್ವೆ ಉದ್ಯೋಗಿ ಬಂಧನ

ಉಗ್ರರ ದಾಳಿಗೆ ಬಲಿಯಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂಬ ಘೋಷಣೆ ಕೂಗಿದ್ದ ಆರೋಪದಲ್ಲಿ ರೈಲ್ವೆಯ ಕಿರಿಯ ಟಿಕೆಟ್ ಪರಿಶೀಲಕ ಉಪೇಂದ್ರ ಕುಮಾರ್ ಬಹದ್ದೂರ್ ಸಿಂಗ್ (39) ಎಂಬಾತನನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಲೋನವಾಲಾ ಜಿಲ್ಲೆಯ ಶಿವಾಜಿ ಚೌಕದಲ್ಲಿ ಸ್ಥಳೀಯ ನಿವಾಸಿಗಳು ಹುತಾತ್ಮ ಸೈನಿಕರಿಗೆ ಶ್ರದ್ಧಾಮಜಲಿ ಸಲ್ಲಿಸಲು ನೆರೆದಿದ್ದರು. ಆಗ ಅಲ್ಲಿಗೆ ಬಂದ ಉಪೇಂದ್ರ ಕುಮಾರ್, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಸ್ಥಳೀಯರು ಕೋಪದಿಂದ ಆತನಿಗೆ ಥಳಿಸಲು ಮುಂದಾದರು. ಕೂಡಲೇ ಅಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿದರು.

ವಿದ್ಯಾರ್ಥಿ ವಿರುದ್ಧ ಎಫ್‌ಐಆರ್

ವಿದ್ಯಾರ್ಥಿ ವಿರುದ್ಧ ಎಫ್‌ಐಆರ್

ಟ್ವಿಟ್ಟರ್ ಖಾತೆಯಲ್ಲಿ 'ಹೌ ಈಸ್ ದಿ ಜೈಶ್', 'ಗ್ರೇಟ್ ಸರ್' ಎಂದು ಟ್ವೀಟ್ ಮಾಡಿ ಉಗ್ರರ ದಾಳಿ ಬಗ್ಗೆ ಸಂಭ್ರಮಿಸಿದ್ದ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬಸಿಮ್ ಹಿಲಾಲ್ ಎಂಬಾತನ ಮೇಲೆ ಸ್ಥಳೀಯ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದರು.

English summary
NDTV has suspended its Deputy New Editor Nidhi Sethi for her insensitive comment in a Facebook post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X