ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ LIVE :ಯುದ್ಧದಂಥ ಸನ್ನಿವೇಶ, ಗಡಿಯಲ್ಲಿ ಪಾಕ್ ಸೈನಿಕರು

|
Google Oneindia Kannada News

ನವದೆಹಲಿ, ಫೆಬ್ರವರಿ 16: "ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೆ ಅದಕ್ಕಿಂತ ಹೆಚ್ಚು ಬೆಲೆ ತೆರುತ್ತೀರಿ" ಎಂದು ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಸದ್ಯಕ್ಕೆ ಐವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆಯಾದರೂ, ಈ ಕೃತ್ಯ ಭಾರತದ ಇತಿಹಾಸದಲ್ಲೇ ಅತ್ಯಂತ ಹೇಯ ಎನ್ನಿಸಿದೆ.

19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ

ಇಡೀ ದೇಶವೂ ಭಾರತಕ್ಕೆ ಬೆನ್ನೆಲುಬಾಗುವ ಭರವಸೆ ನೀಡಿದೆ. ಇಂದು ಬೆಳಿಗ್ಗೆ ಸಂಪುಟ ಸಮಿತಿ ಸಭೆ ನಡೆಸಿದ ನರೇಂದ್ರ ಮೋದಿ ಭಾರತದ ಮುಂದಿನ ನಡೆ ಏನು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾಯಕರು ತಮ್ಮೆಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಯೋಧರ ಬಲಿದಾನಕ್ಕೆ ಮರುಗಿದ್ದಾರೆ.

Pulwama attack LIVE: Deadliest attack in Indias history

ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಸಿಆರ್ ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಟ್ವೀಟ್ ಸಹ ಮಾಡಿದೆ. ಪುಲ್ವಾಮಾ ಘಟನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
3:51 PM, 18 Feb

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬೇಕಿದ್ದ ಬ್ಯಾಂಕಿಂಗ್ ಪರೀಕ್ಷೆ ಮುಂದೂಡಲು ಪರೀಕ್ಷಾರ್ಥಿಗಳಿಂದ ಆಗ್ರಹ
2:18 PM, 18 Feb

ದಕ್ಷಿಣ ಜಮ್ಮುವಿನಲ್ಲಿ ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಕರ್ಫ್ಯೂವನ್ನು ತೆರವುಗೊಳಿಸಲಾಗುತ್ತದೆ. ಮತ್ತೆ ಐದರ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ- ರಮೇಶ್ ಕುಮಾರ್, ಜಮ್ಮು ಜಿಲ್ಲಾಧಿಕಾರಿ
2:14 PM, 18 Feb

""1999 ರಲ್ಲಿ ಕಂದಹಾರ್ ವಿಮಾನ ಅಪಹರಣ ಪ್ರಕರಣ ಸಂಚುಕೋರರನ್ನು ಬಿಡುಗಡೆ ಮಾಡಿದ್ದು ಯಾರು ಎಂಬುದನ್ನು ನಾನು ತಿಳಿದುಕೊಳ್ಳಬೇಕು, ಅದಕ್ಕೆ ಯಾರು ಜವಾಬ್ದಾರರು? ನಮ್ಮ ಹೋರಾಟ ಅವರ ವಿರುದ್ಧ. ಒಬ್ಬ ಯೋಧ ಯಾಕೆ ಸಾಯಬೇಕು? ಅದಕ್ಕೆ ಒಂದು ಶಾಶ್ವತ ಪರಿಹಾರ ಯಾಕಿಲ್ಲ?- ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಮುಖಂಡ
1:55 PM, 18 Feb

ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೇನೆ ತನ್ನ ಸೈನಿಕರನ್ನು ಆಯೋಜಿಸಿದ್ದು, ಗಡಿಯಲ್ಲಿ ಭಾರೀ ಚಟುವಟಿಕೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
1:48 PM, 18 Feb

"ಇಡಿ ದೇಶವೂ ಹುತಾತ್ಮ ಯೋಧರ ಕುಟುಂಬದೊಂದಿಗಿದೆ. ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಸೈನಿಕರ ಬಲಿದಾನಕ್ಕೆ ಭಾರತೀಯ ಸೇನೆ ಸೂಕ್ತ ಉತ್ತರ ನೀಡುತ್ತದೆ"- ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜೈಪುರದಲ್ಲಿ
12:52 PM, 18 Feb

ಜಮ್ಮುವಿನಲ್ಲಿ ನಾಲ್ಕನೇ ದಿನವೂ ಮುಂದುವರಿದ ಕರ್ಫ್ಯೂ
12:29 PM, 18 Feb

ನಾವು ನಮ್ಮ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದ್ದೇವೆ. ಅವರು ಇಂದು ಬೆಳಿಗ್ಗೆ ದೆಹಲಿಯಿಂದ ಹೊರಟಿದ್ದಾರೆ- ಡಾ.ಮೊಹಮ್ಮದ್ ಫೈಸಲ್, ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ
Advertisement
12:25 PM, 18 Feb

ಪುಲ್ವಾಮಾ ದಾಳಿ: ಪಾಕಿಸ್ತಾನಕ್ಕೆ ವಾಪಸ್ಸಾದ ರಾಯಭಾರಿ.
12:14 PM, 18 Feb

ಇಂದು ಹತ್ಯೆಯಾದ ಇಬ್ಬರು ಉಗ್ರರಲ್ಲಿ ಓರ್ವ ಬಾಂಬ್ ತಯಾರಕ ಎನ್ನಲಾಗಿದೆ
12:12 PM, 18 Feb

ಪುಲ್ವಾಮಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಎನ್ ಕೌಂಟರ್ ದಾಳಿಯಿಂದಾಗಿ ಇಲ್ಲಿನ ಜನರಿಗೆ ಕೆಲಕಾಲ ಈ ಪ್ರದೇಶದಿಂದ ದೂರ ಉಳಿಯುವಂತೆ ಹೇಳಲಾಗಿದೆ. 55 ರಾಷ್ಟ್ರೀಯ ರೈಫೆಲ್ ನ ನಾಲ್ವರು ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಈಗಾಗಲೇ ಹೊಡೆದುರುಳಿಸಲಾಗಿದೆ.
11:57 AM, 18 Feb

ಸಿಆರ್ ಪಿಎಫ್ ಯೋಧರ ಬಲಿದಾನದ ನಿಮಿತ್ತ ಅಸ್ಸಾಮಿನ ಗುವಾಹಟಿಯಲ್ಲಿ ಬಂದ್ ಗೆ ಕರೆನೀಡಲಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
11:50 AM, 18 Feb

"ನಮ್ಮ ಸೈನಿಕರು ಏಕೆ ಸಾಯುತ್ತಾರೆ? ನಮ್ಮ ಮನೆಯ ವಾಚ್ ಮನ್ ಸಾಯುವುದೇಕೆ? ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ರಾಜಕಾರಣಿಗಳು ಸರಿಯಾಗಿ ವರ್ತಿಸಿದ್ದರೆ ಇದಾಗುತ್ತಿತ್ತೆ? ಸೈನಿಕರು ಸಾಯುವ ಪ್ರಮೇಯವೇ ಬರುತ್ತಿರಲಿಲ್ಲ. ಗಡಿನಿಯಂತ್ರಣ ರೇಖೆ ನಿಯಂತ್ರಣದಲ್ಲಿರಬೇಕು"- ಕಮಲ್ ಹಾಸನ್, ನಟ, ಮಕ್ಕಳ ನೀಧಿ ಮಯ್ಯಮ್ ನಾಯಕ
Advertisement
11:45 AM, 18 Feb

ಪುಲ್ವಾಮಾ ದಾಳಿಯ ಸಂಚುಕೋರ್ ಅಬ್ದುಲ್ ರಷೀದ್ ಘಾಜಿಯನ್ನು ಸೇನೆಯ ಯೋಧರು ಬಲಿಪಡೆದಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ
11:44 AM, 18 Feb

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ನಡೆದ ಎನ್ ಕೌಂಟರ್ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರನ್ನೂ ಹತ್ಯೆಗೈಯ್ಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
11:43 AM, 18 Feb

ಪುಲ್ವಾಮಾದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾದರು.
11:42 AM, 18 Feb

ಪುಲ್ವಾಮಾ ದಾಳಿಗೆ ಸಂಬಂಧಿಸಿದ ಭಾನುವಾರದ ಅಪ್ಡೇಟ್ಸ್ ನೋಡಿ...
6:05 PM, 16 Feb

ದಾರಿಯುದ್ದಕ್ಕೂ ಯೋಧನ ಪಾರ್ಥಿವ ಶರೀರಕ್ಕೆ ತಲೆಬಾಗಿ ನಮನ ಸಲ್ಲಿಸುತ್ತಿರುವ ಜನತೆ
5:57 PM, 16 Feb

ವೀರಯೋಧನ ಪಾರ್ಥಿವ ಶರೀರ ಕಂಡು ಕಣ್ಣೀರಾದ ಪತ್ನಿ ಕಲಾವತಿ
5:30 PM, 16 Feb

ಸ್ವಾರ್ಥಕ್ಕೆಲ್ಲ, ದೇಶಸೇವೆಗಾಗಿ ಮಗನ ಬದುಕನ್ನು ಮೀಸಲಿಟ್ಟ ನಿಮಗೆ ನಾನು ನೆರವು ನೀಡುತ್ತೇವೆ. ಈ ಘಟನೆಯನ್ನು ಪಕ್ಷಭೇದ ಮರೆತು ವಿರೋಧಿಸಬೇಕು -ಪ್ರಕಾಶ್ ರೈ, ನಟ
5:03 PM, 16 Feb

ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ
5:02 PM, 16 Feb

ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ
4:52 PM, 16 Feb

ಮಂಡ್ಯದ ಮದ್ದೂರು ಗಡಿ ಭಾಗದ ನಿಢಗಟ್ಟ
4:52 PM, 16 Feb

ಮದ್ದೂರು ಗಡಿ ತಲುಪಿದ ಯೋಧನ ಪಾರ್ಥಿವ ಶರೀರ
4:45 PM, 16 Feb

ಯೋಧ ಗುರು ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳುತ್ತಿರುವ ನಟ ಪ್ರಕಾಶ್ ರೈ
4:31 PM, 16 Feb

ಯೋಧ ಗುರು ಅವರ ಪಾರ್ಥಿವ ಶರೀರ ಹೊತ್ತ ವಾಹನ ಚಲಿಸುತ್ತಿರುವ ರಸ್ತೆಯ ಇಕ್ಕೆಲಗಳಲ್ಲೂ ನಿಂತು ಗೌರವ ಸೂಚಿಸುತ್ತಿರುವ ಜನ
4:12 PM, 16 Feb

ಪೂಜೆಯ ನಂತರ ಮೃತರ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ
4:11 PM, 16 Feb

ಮೃತ ಯೋಧನ ತಮ್ಮಂದಿರು ಸಂಬಂಧಿಕರು ಚಿತೆಯ ಸುತ್ತ ಪೂಜೆ ಸಲ್ಲಿಸುವರು.
4:11 PM, 16 Feb

ತಲೆಯನ್ನು ದಕ್ಷಿಣಕ್ಕೆ ಇಟ್ಟು, ಮತ್ತೆ ಪಾರ್ಥೀವ ಶರೀರದ ಮೇಲೆ ಸೌದೆ ಜೋಡಿಸಲಾಗುವುದು
4:10 PM, 16 Feb

ನಂತರ ಚಿತೆಯ ಮೇಲೆ ಬಾಳೆ ಎಲೆ ಹಾಸಿ, ಅದರ ಮೇಲೆ ಪಾರ್ಥೀವ ಶರೀರ ಮಲಗಿಸಲಾಗುವುದು.
4:10 PM, 16 Feb

ಉತ್ತರಾಭಿಮುಖವಾಗಿ ಪ್ರದಕ್ಷಿಣೆ ಮಾಡಲಾಗುವುದು
READ MORE

English summary
After deadliest attack on CRPF convoy by a suicide bomber more than 40 soldiers martyred. Here is LIVE update in Kannada about developments after the incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X