ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ನಡೆದಾಗ ಮೋದಿ ಶೂಟಿಂಗ್ : ಮತ್ತೆ ಕಾಲೆಳೆದ ರಾಹುಲ್

|
Google Oneindia Kannada News

Recommended Video

ರಾಯ್ ಬರೇಲಿಯಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ? | Oneindia Kannada

ನವದೆಹಲಿ, ಫೆಬ್ರವರಿ 22 : "ಪುಲ್ವಾಮಾದಲ್ಲಿ 40 ಜವಾನರು ಹುತಾತ್ಮರಾಗಿ ಮೂರು ಗಂಟೆಯ ನಂತರವೂ 'ಪ್ರೈಮ್ ಟೈಮ್ ಮಿನಿಸ್ಟರ್' ಫಿಲ್ಮ್ ಶೂಟ್ ಮಾಡುತ್ತಿದ್ದರು. ದೇಶದ ಹೃದಯದಲ್ಲಿ ಮತ್ತು ಹುತಾತ್ಮರ ಮನೆಯಲ್ಲಿ ನೋವು ಮಡುಗಟ್ಟಿದ್ದರೂ ಅವರು ನಗುನಗುತ್ತಲೇ ಶೂಟಿಂಗ್ ನಲ್ಲಿ ಮುಳುಗ್ದಿದರು."

ಹೀಗೆಂದು ಟ್ವೀಟ್ ಮಾಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ತಿಳಿದಿದ್ದರೂ, ನರೇಂದ್ರ ಮೋದಿಯವರು ಜಿಮ್ ಕಾರ್ಬೆಟ್ ಪಾರ್ಕ್ ನಲ್ಲಿ ಡಾಕ್ಯುಮೆಂಟರಿಗಾಗಿ ತಮ್ಮ ಶೂಂಟಿಂಗ್ ಮುಂದುವರಿಸಿದ್ದರು ಎಂಬುದು ಅವರ ಆರೋಪ.

Pulwama attack and shooting : Rahul again attacks Modi

ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ

ಇದಕ್ಕೂ ಮೊದಲು ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಕೂಡ, ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನು ಪ್ರಶ್ನಿಸಿದ್ದರು. ಅವರಿಗೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದರೂ ಶೂಟಿಂಗ್ ಮುಂದುವರಿಸಿದರು ಮತ್ತು ಪಿಡಬ್ಲ್ಯೂಡಿ ಗೆಸ್ಟ್ ಹೌಸ್ ನಲ್ಲಿ ಸಮೋಸಾ ಚಹಾ ಸೇವಿಸುತ್ತಿದ್ದರು ಎಂದು ಆರೋಪಿಸಿದ್ದರು.

ಇದಕ್ಕೆಲ್ಲ ಬಿಜೆಪಿ ನಾಯಕರು ಸೂಕ್ತ ಉತ್ತರ ನೀಡಿದ್ದರೂ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಇದೇ ವಿಷಯವನ್ನು ಹಿಡಿದುಕೊಂಡು ಟೀಕಾಪ್ರಹಾರವನ್ನು ಮುಂದುವರಿಸಿದ್ದಾರೆ. ಪ್ರಧಾನಿ ಅವರು, ಬೆಳಿಗ್ಗೆ 11 ಗಂಟೆಗೆ ಉತ್ತರಾಖಂಡ್ ನಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕಿಗೆ ಹೋಗಿದ್ದರು. ಅಲ್ಲಿ ಹುಲಿ ಸಂರಕ್ಷಣೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಕ್ರಮ ಮೊದಲೇ ನಿಗದಿ ಆಗಿದ್ದರಿಂದ ಅಲ್ಲಿಗೆ ಹೋಗಿದ್ದರು.

ಗೌರಿ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ವಿರುದ್ಧ ಆರೋಪ: ರಾಹುಲ್ ಗಾಂಧಿಗೆ ಸಮನ್ಸ್ ಗೌರಿ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ವಿರುದ್ಧ ಆರೋಪ: ರಾಹುಲ್ ಗಾಂಧಿಗೆ ಸಮನ್ಸ್

ಪುಲ್ವಾಮಾ ದಾಳಿ ನಡೆದ ಸಮಯದಲ್ಲಿಯೇ ಮೋದಿಯವರು ರುದ್ರಪುರದಲ್ಲಿ 3 ಗಂಟೆಯ ಸುಮಾರಿಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ವಾತಾವರಣ ಹಿತಕರವಾಗಿರಲಿಲ್ಲವಾದ್ದರಿಂದ ಅದನ್ನು ರದ್ದುಗೊಳಿಸಿ, 1 ಗಂಟೆ ಮಾಡಬೇಕಾದ ಭಾಷಣವನ್ನು 5 ನಿಮಿಷಕ್ಕೆ ಇಳಿಸಿ, ಮೊಬೈಲ್ ಮುಖಾಂತರವೇ ಅವರು ತಮ್ಮ ಮಾತುಗಳನ್ನಾಡಿದ್ದರು.

'ಮೋದಿಯ ನವಭಾರತಕ್ಕೆ ಸ್ವಾಗತ': ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ವ್ಯಂಗ್ಯ'ಮೋದಿಯ ನವಭಾರತಕ್ಕೆ ಸ್ವಾಗತ': ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ವ್ಯಂಗ್ಯ

ಪುಲ್ವಾಮಾ ದಾಳಿ ಆಗಿರುವುದು ತಿಳಿಯುತ್ತಿದ್ದಂತೆ, ರಾಂಪುರವನ್ನು ತಲುಪಿದ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಮುಂತಾದವರೊಡನೆ ಮಾತನಾಡಿದರಲ್ಲದೆ, ಅವರು ಏನನ್ನೂ ತಿನ್ನಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ರಾಮಪುರದಿಂದ 7 ಗಂಟೆಗೆ ದೆಹಲಿಗೆ ಹೊರಟಿದ್ದಾರೆ ಮೋದಿ. ಮೋದಿಯವರು ಡಿಸ್ಕವರಿ ಚಾನಲ್ ಗಾಗಿ ಶೂಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿಯನ್ನು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಅಲ್ಲಗಳೆದಿದ್ದಾರೆ.

English summary
Pulwama terror attack and shooting in Jim Corbett National Park : Rahul Gandhi has again attacked PM Narendra Modi on twitter. Teasing Modi as Prime Time Minister, he sarcastically told Modi continued to shoot inspite of Pulwama tragedy. What do you say about this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X