ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪಬ್‌ಜಿ ಮೊಬೈಲ್ ಗೇಮ್ ಬ್ಯಾನ್ ಮಾಡಲು ಸರ್ಕಾರ ಚಿಂತನೆ

|
Google Oneindia Kannada News

ನವದೆಹಲಿ, ಜುಲೈ 27: ಭಾರತದಲ್ಲೇ ಶೀಘ್ರದಲ್ಲಿಯೇ ಅತ್ಯಂತ ಖ್ಯಾತ ಆನ್‌ಲೈನ್ ಮೊಬೈಲ್ ಗೇಮ್ ಪಬ್‌ಜಿಯನ್ನು ನಿಷೇಧಿಸಬಹುದು ಎಂದು ಕೇಳಿಬಂದಿದೆ. ಚೀನಾದ 59 ಬ್ಯಾನ್ ಬಳಿಕ ಸರ್ಕಾರವು ಸೋಮವಾರ ಮತ್ತೆ 47 ಚೀನಿ ಆ್ಯಪ್‌ಗಳನ್ನು ನಿಷೇಧಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಪಬ್‌ಜಿ ಕೂಡ ಆ ಪಟ್ಟಿಗೆ ಸೇರಬಹುದು ಎನ್ನಲಾಗಿದೆ.

Recommended Video

PUBG to get banned soon | Oneindia Kannada

ಜನಪ್ರಿಯವಾದ ಟಿಕ್‌ಟಾಕ್, ಯುಸಿ ಬ್ರೌಸರ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದ ಒಂದು ತಿಂಗಳ ನಂತರ 275 ಆ್ಯಪ್‌ಗಳ ಮೇಲೆ ನಿಷೇಧ ಹೇರುವ ವರದಿಗಳು ಆನ್‌ಲೈನ್‌ನಲ್ಲಿ ಪ್ರಾರಂಭವಾಗಿವೆ.

ನಿಷೇಧಿಸಬೇಕಾ ಅಥವಾ ಬೇಡವೇ ಎಂಬ ಪರಿಶೀಲನೆಯಲ್ಲಿದೆ ಪಬ್‌ಜಿ

ನಿಷೇಧಿಸಬೇಕಾ ಅಥವಾ ಬೇಡವೇ ಎಂಬ ಪರಿಶೀಲನೆಯಲ್ಲಿದೆ ಪಬ್‌ಜಿ

ಈ ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿದ್ದ 47 ಚೀನೀ ಅಪ್ಲಿಕೇಶನ್‌ಗಳನ್ನು ಸರ್ಕಾರ ಸೋಮವಾರ ನಿಷೇಧಿಸಿದೆ. ಇವುಗಳಲ್ಲಿ ಕೆಲವು ಟಿಕ್‌ಟಾಕ್ ಲೈಟ್, ಹೆಲೋ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈಟ್ ಮತ್ತು ವಿಎಫ್‌ವೈ ಲೈಟ್ ಸೇರಿವೆ, ಇವೆಲ್ಲವೂ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನಲ್ಲಿ ಲಭ್ಯವಿಲ್ಲ ಎಂದು ವರದಿಯಾಗಿದೆ. ಪಬ್‌ಜಿ ಗೇಮ್ ನಿಷೇಧಿಸುವ ಪಟ್ಟಿಯ ಒಂದು ಭಾಗವಲ್ಲವಾದರೂ, ಇದು ಸ್ಕ್ಯಾನರ್ ಅಡಿಯಲ್ಲಿದೆ ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಮತ್ತೆ 47 ಚೀನಾ ಆ್ಯಪ್ ಗಳ ನಿಷೇಧಭಾರತದಲ್ಲಿ ಮತ್ತೆ 47 ಚೀನಾ ಆ್ಯಪ್ ಗಳ ನಿಷೇಧ

ಭಾರತದಲ್ಲಿ 175 ಮಿಲಿಯನ್ ಡೌನ್‌ಲೋಡ್

ಭಾರತದಲ್ಲಿ 175 ಮಿಲಿಯನ್ ಡೌನ್‌ಲೋಡ್

ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್ ಮೊಬೈಲ್ ಗೇಮ್‌ಗಳಲ್ಲಿ ಪಬ್‌ಜಿ ಒಂದು. ಭಾರತದಲ್ಲಿ ಮಾತ್ರ, ಅಪ್ಲಿಕೇಶನ್ 175 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

ಪಬ್‌ಜಿ ಗೇಮ್‌ ಮೇಲೆ ಚೀನಾ ನಿಯಂತ್ರಣ

ಪಬ್‌ಜಿ ಗೇಮ್‌ ಮೇಲೆ ಚೀನಾ ನಿಯಂತ್ರಣ

ಪಬ್‌ಜಿ ಅನ್ನು ದಕ್ಷಿಣ ಕೊರಿಯಾದ ವಿಡಿಯೋ ಗೇಮ್ ಕಂಪನಿಯು ಬ್ಲೂಹೋಲ್ ಎಂಬ ಹೆಸರಿನಿಂದ ಅಭಿವೃದ್ಧಿಪಡಿಸಿದೆ. ಆದಾಗ್ಯೂ, ಚೀನಾದ ಬಹುರಾಷ್ಟ್ರೀಯ ಸಂಘಸಂಸ್ಥೆ ಟೆನ್ಸೆಂಟ್ ಜನಪ್ರಿಯ ಗೇಮಿಂಗ್‌ನಲ್ಲಿ ಸಾಕಷ್ಟು ಪಾಲನ್ನು ಹೊಂದಿದೆ.

ತಾತ್ಕಾಲಿಕವಾಗಿ PUBG ಮೇಲೆ ನಿಷೇಧ ಹೇರಿದ ಪಾಕಿಸ್ತಾನತಾತ್ಕಾಲಿಕವಾಗಿ PUBG ಮೇಲೆ ನಿಷೇಧ ಹೇರಿದ ಪಾಕಿಸ್ತಾನ

ದತ್ತಾಂಶ ಸುರಕ್ಷತೆಯ ಬಗ್ಗೆ ಸರ್ಕಾರ ಕೈಗೊಂಡಿರುವ ಡಿಜಿಟಲ್ ಸ್ಟ್ರೈಕ್‌ ನಲ್ಲಿ ಇದೀಗ ಗೇಮಿಂಗ್ ಫಾರ್ಮ್ಯಾಟ್ ಮೇಲೂ ನಿಷೇಧವನ್ನು ಸರ್ಕಾರ ಪರಿಗಣಿಸುತ್ತಿದೆ. ಚೀನಾ ಸರ್ಕಾರದೊಂದಿಗೆ ಡೇಟಾ ಹಂಚಿಕೆ ಅಭ್ಯಾಸಗಳ ಕಾರಣದಿಂದಾಗಿ ಹಲವಾರು ಅಪ್ಲಿಕೇಶನ್‌ಗಳು ಇತ್ತೀಚೆಗೆ ರಾಡಾರ್‌ನಲ್ಲಿವೆ.

ಪಬ್‌ಜಿ ನಿಷೇಧಕ್ಕೆ ಹಿಂದಿನಿಂದಲೂ ಭಾರೀ ಒತ್ತಾಯ

ಪಬ್‌ಜಿ ನಿಷೇಧಕ್ಕೆ ಹಿಂದಿನಿಂದಲೂ ಭಾರೀ ಒತ್ತಾಯ

ಪಬ್‌ಜಿ ಈ ಹಿಂದಿನಿಂದಲೂ ಹಲವಾರು ಬಾರಿ ಭಾರೀ ಟೀಕೆಗೆ ಗುರಿಯಾಗಿದೆ. ಪಬ್‌ಜಿ ಗೇಮ್‌ನಿಂದ ತಮ್ಮ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ದೇಶಾದ್ಯಂತ ಪೋಷಕರು ಮತ್ತು ಪಾಲಕರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ, ರಾಷ್ಟ್ರದಾದ್ಯಂತದ ಕೆಲವು ರಾಜ್ಯ ಸರ್ಕಾರಗಳು ಗೇಮಿಂಗ್ ಅಪ್ಲಿಕೇಶನ್‌ ಆಟಗಾರರ ಮೇಲೆ, ವಿಶೇಷವಾಗಿ ಯುವಕರ ಮೇಲೆ ಮಾನಸಿಕ ಪರಿಣಾಮ ಬೀರುವ ಕಾರಣಕ್ಕಾಗಿ ತಾತ್ಕಾಲಿಕ ನಿಷೇಧವನ್ನು ಹೇರಿದ್ದವು.

ಆಗ, ಆಟದ ಪರಿಸರ ಅನುಭವವನ್ನು ಹೆಚ್ಚಿಸುವ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಪೋಷಕರು, ಶಿಕ್ಷಣತಜ್ಞರು ಮತ್ತು ಸರ್ಕಾರಿ ಸಂಸ್ಥೆಗಳಿಂದ ಪ್ರತಿಕ್ರಿಯೆ ತೆಗೆದುಕೊಳ್ಳುವುದಾಗಿ ಪಬ್‌ಜಿ ಭರವಸೆ ನೀಡಿತ್ತು.

ಪಾಕಿಸ್ತಾನದಲ್ಲೂ ಪಬ್‌ಜಿ ನಿಷೇಧವಾಗಿತ್ತು

ಪಾಕಿಸ್ತಾನದಲ್ಲೂ ಪಬ್‌ಜಿ ನಿಷೇಧವಾಗಿತ್ತು

ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ಆಟಗಾರನ ಆರೋಗ್ಯಕ್ಕೆ ಹಾನಿಕಾರಕ ಆಟದ ವ್ಯಸನಕಾರಿ ಸ್ವಭಾವದ ಆಧಾರದ ಮೇಲೆ ಪಬ್‌ಜಿ ಅನ್ನು ನಿಷೇಧಿಸಿದೆ. ನಂತರ, ಜುಲೈ 26 ರಂದು ಪಾಕಿಸ್ತಾನ ನ್ಯಾಯಾಲಯವು ನಿಷೇಧವನ್ನು ತೆಗೆದುಹಾಕಿತು.

English summary
The government may soon ban PlayerUnknown's Battlegrounds (PUBG) in India. Monday govt banned 47 more chinese apps that were clones of the earlier banned apps
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X