ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ವೈಷಮ್ಯ: ನುಪೂರ್‌ ಜೊತೆ ಪತ್ರಕರ್ತೆ ಮೇಲೂ ಕೇಸು

|
Google Oneindia Kannada News

ನವದೆಹಲಿ, ಜೂ. 9: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಮೇಲೆ ಅಮಾನತಾಗಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನುಪೂರ್‌ ಶರ್ಮಾ ಹಾಗೂ ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

ದ್ವೇಷದ ಸಂದೇಶಗಳನ್ನು ಹರಡುವ, ವಿವಿಧ ಗುಂಪುಗಳನ್ನು ಪ್ರಚೋದಿಸುವ ಮತ್ತು ಸಾಮಾಜಿಕ ಶಾಂತಿಗೆ ಧಕ್ಕೆ ಉಂಟು ಮಾಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಕೆಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

 ನೂಪೂರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ ನೂಪೂರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ

ಇಂಟಿಲಿಜೆನ್ಸ್‌ ಪ್ಯೂಷನ್‌ ಹಾಗೂ ಸ್ಟ್ರಟಜಿಕ್‌ ಆಪರೇಶನ್‌ IFSO ವಿಶೇಷ ಘಟಕದಲ್ಲಿ ದೆಹಲಿ ಬಿಜೆಪಿಯ ಮಾಧ್ಯಮ ಘಟಕದ ಉಚ್ಛಾಟಿತ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ಪೀಸ್ ಪಾರ್ಟಿಯ ಮುಖ್ಯ ವಕ್ತಾರ ಶಾದಾಬ್ ಚೌಹಾಣ್, ಪತ್ರಕರ್ತೆ ಸಬಾ ನಖ್ವಿ, ಹಿಂದೂ ಮಹಾಸಭಾದ ಪದಾಧಿಕಾರಿ ಪೂಜಾ ಶಕುನ್ ಪಾಂಡೆ, ರಾಜಸ್ಥಾನದ ಮೌಲಾನಾ ಮುಫ್ತಿ ನದೀಮ್, ಅಬ್ದುರ್ ರೆಹಮಾನ್, ಅನಿಲ್ ಕುಮಾರ್ ಮೀನಾ ಮತ್ತು ಗುಲ್ಜಾರ್ ಅನ್ಸಾರಿ ಇವರುಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸದ್ಯ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಇದೇ ರೀತಿಯ ಸೆಕ್ಷನ್‌ಗಳ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಮತ್ತು ತಪ್ಪು ತಪ್ಪಾದ ಮಾಹಿತಿಯನ್ನು ಹರಿಯ ಬಿಡುವವರ ಹಾಗೂ ಸಂಬಂಧಿತ ಘಟಕಗಳ ವಿರುದ್ಧಇಂಟಿಲಿಜೆನ್ಸ್‌ ಪ್ಯೂಷನ್‌ ಹಾಗೂ ಸ್ಟ್ರಟಜಿಕ್‌ ಆಪರೇಶನ್‌ ತನಿಖೆ ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Religious Feud: Case Over Journalist With Nupur

ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿಗಾಗಿ ಪತ್ರಕರ್ತೆ ಸಬಾ ನಖ್ವಿ ಅವರಿಂದ ಅಧಿಕೃತ ಹೇಳಿಕೆ ಇನ್ನೂ ಸಿಕ್ಕಿಲ್ಲ. ಆದರೆ ಸಬಾ ನಖ್ವಿ ತಮ್ಮ ಕೊನೆಯ ಟ್ವೀಟ್ (ಜೂನ್ 7 ರಂದು)ನಲ್ಲಿ ಸ್ವಲ್ಪ ಸಾಮಾಜಿಕ ಮಾಧ್ಯಮದಿಂದ ದೂರವಿರುತ್ತನೆ ಎಂದು ಬರೆದುಕೊಂಡಿದ್ದಾರೆ.

ಪ್ರವಾದಿ ಮೊಹಮ್ಮದ್ ವಿವಾದ: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡಿತಾ ಬಿಜೆಪಿ?ಪ್ರವಾದಿ ಮೊಹಮ್ಮದ್ ವಿವಾದ: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡಿತಾ ಬಿಜೆಪಿ?

ಇತ್ತೀಚೆಗೆ ನುಪೂರ್‌ ಶರ್ಮಾ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ಹೇಳಿಕೆ ದಾಖಲಿಸಲು ಜೂನ್ 22ರಂದು ತಮ್ಮ ಮುಂದೆ ಹಾಜರಾಗುವಂತೆ ಮಹಾರಾಷ್ಟ್ರ ಪೊಲೀಸರು ನೂಪುರ್ ಶರ್ಮಾ ಅವರಿಗೆ ತಿಳಿಸಿದ್ದರು.

Religious Feud: Case Over Journalist With Nupur

ನುಪೂರ್‌ ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 295 A (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) 153 A (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದರು.

English summary
The case has been filed against BJP national spokesperson Nupur Sharma and journalist Saba Naqvi, who have been suspended over allegations of religious sentiment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X