ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಬಹಳ ನಿಧಾನವಾಗಿದೆ, ಚುರುಕುಗೊಳಿಸಿ: ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ಮೇ 24: ಭಯಭೀತರಾದ, ನಿರುದ್ಯೋಗಿ ಮತ್ತು ಹಸಿದಿರುವ ವಲಸೆ ಕಾರ್ಮಿಕರು ತಮ್ಮ ನಿವಾಸಕ್ಕೆ ಹಿಂದಿರುಗಲು ಬಯಸಬಹುದು ಎಂದು ಅಭಿಪ್ರಾಯಿಸಿರುವ ಸೋಮವಾರ ಸುಪ್ರೀಂ ಕೋರ್ಟ್, ಸರ್ಕಾರವು ವಿಧಿಸಿರುವ ರಾಷ್ಟ್ರೀಯ ಮತ್ತು ಮಿನಿ ಲಾಕ್‌ಡೌನ್‌ಗಳ ನಡುವೆ ಸೂಕ್ಷ್ಮ ವ್ಯತ್ಯಾಸ ಮಾತ್ರವಿದೆ ಎಂದು ತಿಳಿಸಿದೆ. ಹಾಗೆಯೇ ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆಯು ಬಹಳ ನಿಧಾನವಾಗಿದೆ. ಇದನ್ನು ತ್ವರಿತಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.

"2020ರಲ್ಲಿ ರಾಷ್ಟ್ರೀಯ ಲಾಕ್‌ಡೌನ್ ಆಗಿರಲಿ ಅಥವಾ 2021ರಲ್ಲಿ ಮಿನಿ ಲಾಕ್‌ಡೌನ್‌ಗಳಾಗಲಿ, ಈ ಸಂದರ್ಭದಲ್ಲಿ ಮಾನಸಿಕವಾಗಿ ವಲಸೆ ಕಾರ್ಮಿಕರ ವರ್ತನೆ ಒಂದೇ ಆಗಿರುತ್ತದೆ. ಅವರು ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಮನೆಗೆ ವಾಪಾಸ್‌ ತೆರಳಲು ಬಯಸುತ್ತಾರೆ ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಕೇಂದ್ರವನ್ನುದ್ದೇಶಿಸಿ ಹೇಳಿದ್ದಾರೆ.

ಆಕ್ಸಿಜನ್ ಕೊಡಿ ಅಂತಾ ಕೋರ್ಟ್ ಹೇಳಬೇಕಾಯ್ತಲ್ಲಾ; ಇದು ಪ್ರಜಾಪ್ರಭುತ್ವ ರಾಷ್ಟ್ರವೇ?ಆಕ್ಸಿಜನ್ ಕೊಡಿ ಅಂತಾ ಕೋರ್ಟ್ ಹೇಳಬೇಕಾಯ್ತಲ್ಲಾ; ಇದು ಪ್ರಜಾಪ್ರಭುತ್ವ ರಾಷ್ಟ್ರವೇ?

ದೊಡ್ಡ ನಗರಗಳಲ್ಲಿ ವಲಸೆ ಕಾರ್ಮಿಕ ಕುಟುಂಬಗಳಿಗೆ ಪಡಿತರವನ್ನು ಒದಗಿಸಲು, ತಮ್ಮ ಹಳ್ಳಿಗಳಿಗೆ ತೆರಳುವ ಕಾರ್ಮಿಕರಿಗೆ ಆಹಾರ ಹಾಗೂ ಸಾರ್ವಜನಿಕ ಸಾರಿಗೆಯನ್ನು ಒದಗಿಸಲು, ಕಾರ್ಮಿಕರು ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿದ್ದಾರೆ ಎಂಬ ಭಾವನೆ ಮೂಡಿಸಲು ಸರ್ಕಾರವನ್ನು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸುಯೋ ಮೋಟು ಪ್ರಕರಣವೊಂದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಷಾರನ್ನು ಒಳಗೊಂಡ ನ್ಯಾಯಪೀಠವು ನಡೆಸಿದೆ.

ಈ ಮೂರು ರಾಜ್ಯಗಳಿಗೆ ವಲಸೆ ಕಾರ್ಮಿಕರು ವಾಪಸ್ ಆಗಿದ್ದು ಹೆಚ್ಚು!ಈ ಮೂರು ರಾಜ್ಯಗಳಿಗೆ ವಲಸೆ ಕಾರ್ಮಿಕರು ವಾಪಸ್ ಆಗಿದ್ದು ಹೆಚ್ಚು!

ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ, 2021ರಲ್ಲಿ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಭಿನ್ನವಾಗಿದೆ ಎಂದು ಹೇಳಿದ್ದು ಈ ಸಂದರ್ಭ ನ್ಯಾಯಮೂರ್ತಿ ಷಾ, ಲಾಕ್‌ಡೌನ್ ಆಗಿರಲಿ ಮಿನಿ ಲಾಕ್‌ಡೌನ್‌ಗಳಾಗಲಿ ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮಾನಸಿಕ ಸ್ಥಿತಿ ಒಂದೇ ಆಗಿರುತ್ತದೆ ಎಂದು ಹೇಳಿದ್ದಾರೆ.

 ಆಹಾರ ಪೂರೈಕೆ ರಾಜ್ಯಗಳ ಕರ್ತವ್ಯ

ಆಹಾರ ಪೂರೈಕೆ ರಾಜ್ಯಗಳ ಕರ್ತವ್ಯ

ಸರ್ಕಾರವು ಈ ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸಿದೆ. ಸರ್ಕಾರವು ನಿಯಂತ್ರಣ ಕೊಠಡಿಗಳನ್ನು ತೆರೆದಿದೆ. ಆದರೆ ಈ ಸಂದರ್ಭದಲ್ಲಿ ಮನೆಗೆ ವಾಪಾಸ್‌ ತೆರಳದೆ ಬಾಕಿಯಾದ ಕಾರ್ಮಿಕರಿಗೆ ಆಹಾರ ಪೂರೈಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಹೇಳಿದೆ. ಹಾಗೆಯೇ 2021 ರಲ್ಲಿ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಭಿನ್ನವಾಗಿದೆ ಎಂದು ಕೂಡಾ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

 ಪರಿಸ್ಥಿತಿ ಭಾರೀ ಕಠೋರವಾಗಿದೆ

ಪರಿಸ್ಥಿತಿ ಭಾರೀ ಕಠೋರವಾಗಿದೆ

ಈ ಬಾರಿಯ ಪರಿಸ್ಥಿತಿ ಕಳೆದ ಬಾರಿಯಂತೆ ಕಠೋರವಾಗಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಭೂಷಣ್, "ವಾಸ್ತವವಾಗಿ, ಇದು ಈ ಭಾರೀ ಕಠೋರವಾಗಿದೆ. ಎರಡನೇ ಅಲೆಯು ಸಾರ್ವಜನಿಕ ಆರೋಗ್ಯವು ತೀವ್ರವಾಗಿ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ, ಹೆಚ್ಚಿನ ಜನರು ಮತ್ತೆ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಆರೋಪಿಸಿದ್ದಾರೆ. ಜನರು ಆಹಾರ ಕೊರತೆ ಮತ್ತು ಆರೋಗ್ಯದ ಸಮಸ್ಯೆಯಿಂದ ಸಾಯುತ್ತಿದ್ದಾರೆ. ಹೌದು, ಕಳೆದ ವರ್ಷಕ್ಕಿಂತ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾರ್ಗ ಪರಿಗಣಿಸಿ ಎಂದ ಸುಪ್ರೀಂಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾರ್ಗ ಪರಿಗಣಿಸಿ ಎಂದ ಸುಪ್ರೀಂ

 ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಿ

ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಿ

ಹಾಗೆಯೇ ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆಯು ಬಹಳ ನಿಧಾನವಾಗಿದೆ. ಇದನ್ನು ತ್ವರಿತಗೊಳಿಸಬೇಕು. ಈ ಮೂಲಕ ಸಾಂಕ್ರಾಮಿಕ ರೋಗದ ಮಧ್ಯೆ ವಿವಿಧ ಯೋಜನೆಗಳ ಪ್ರಯೋಜನವನ್ನು ಕಾರ್ಮಿಕರಿಗೆ ವಿಸ್ತರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಸಂಘಟಿತ ಕಾರ್ಮಿಕರ ನೋಂದಣಿಗೆ ಕೇಂದ್ರ ಮತ್ತು ರಾಜ್ಯಗಳು ಕೈಗೊಂಡ ಪ್ರಯತ್ನಗಳು ತೃಪ್ತಿದಾಯಕವಲ್ಲ. ಯೋಜನೆಗಳ ಪ್ರಯೋಜನವು ವಲಸೆ ಕಾರ್ಮಿಕರು ಸೇರಿದಂತೆ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದೆ.

 24 ಕೋಟಿ ಜನರು ಬಡತನ ರೇಖೆ ಅಡಿ

24 ಕೋಟಿ ಜನರು ಬಡತನ ರೇಖೆ ಅಡಿ

ಕೊರೊನಾ ಎರಡನೇ ಅಲೆಯು ಆರೋಗ್ಯ ವಲಯದ ಮೇಲೆ ಕಳೆದ ಬಾರಿಗಿಂತ ಅಧಿಕ ಪರಿಣಾಮವನ್ನು ಉಂಟು ಮಾಡಿದೆ. 24 ಕೋಟಿ ಜನರು ಬಡತನ ರೇಖೆ ಅಡಿಯಲ್ಲಿದ್ದಾರೆ. ಹಲವಾರು ಮಂದಿ ಉದ್ಯೋಗ ಕಳೆದುಕೊಂಡು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ದೆಹಲಿ, ಉತ್ತರ ಪ್ರದೇಶದಂತಹ ರಾಜ್ಯಗಳು ವಲಸಿಗರಿಗೆ ಸರ್ಕಾರಿ ಶಾಲೆಗಳಲ್ಲಿ ಆಹಾರವನ್ನು ಒದಗಿಸಬೇಕು ಎಂದು ಭೂಷಣ್ ನಿರ್ದೇಶಿಸಿದ್ದಾರೆ. ರಿಕ್ಷಾ ಚಾಲಕರು, ಮಾರಾಟಗಾರರು ಮತ್ತು ಇತರ ಅಸಂಘಟಿತ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಭೂಷಣ್‌ ಹೇಳಿದ್ದಾರೆ.

ಈ ಬಿಕ್ಕಟ್ಟನ್ನು ನೋಡಿಕೊಂಡು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ; ಸುಪ್ರೀಂಈ ಬಿಕ್ಕಟ್ಟನ್ನು ನೋಡಿಕೊಂಡು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ; ಸುಪ್ರೀಂ

 ನಗದು ವರ್ಗಾವಣೆ ಯಾಂತ್ರಿಕ ವ್ಯವಸ್ಥೆ ರೂಪಿಸಿ

ನಗದು ವರ್ಗಾವಣೆ ಯಾಂತ್ರಿಕ ವ್ಯವಸ್ಥೆ ರೂಪಿಸಿ

ತೀವ್ರ ಸಂಕಷ್ಟದಲ್ಲಿರುವ ಕಾರ್ಮಿಕರು ಜೀವನ ಸಾಗಿಸಲು ನಗದು ವರ್ಗಾವಣೆ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ವಕೀಲರು ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ. "ಅಂತಿಮವಾಗಿ, ಹಣವು ಮತ್ತೆ ಆರ್ಥಿಕತೆಗೆ ಸಂಬಂಧಿಸಿದ್ದಾಗುತ್ತದೆ. ಕಾರ್ಮಿಕರು ಆಹಾರ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಈ ಹಣವನ್ನು ಬಳಸಬಹುದಾಗಿದೆ. ಪ್ರಸ್ತುತ ನಮ್ಮ ಬೆಳವಣಿಗೆಯ ದರ ಶೇ. 20 ರಷ್ಟಿದೆ ಎಂದು ಭೂಷಣ್ ತಿಳಿಸಿದ್ದಾರೆ. ಇನ್ನು ಇಂತಹ ಆರ್ಥಿಕ ಸಹಾಯ ರಾಜ್ಯದ ಪ್ರತ್ಯೇಕ ನೀತಿಗಳನ್ನು ಆಧರಿಸಿರುತ್ತದೆ. ನ್ಯಾಯಾಲಯ ಈ ಈ ವಿಷಯವನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ.

English summary
Process of registration of migrant workers is very slow says Supreme Court to Govts and Directs Central, State govts to expedite the process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X