• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ್ಯಾ.ಮುರಳೀದರ್ ವರ್ಗಾವಣೆ ನಾಚಿಕೆಗೇಡಿನ ಸಂಗತಿ: ಪ್ರಿಯಾಂಕಾ ಗಾಂಧಿ

|

ನವದೆಹಲಿ, ಫೆಬ್ರವರಿ 27: ನ್ಯಾಯಮೂರ್ತಿ ಮುರಳೀಧರ್ ಅವರ ವರ್ಗಾವಣೆ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

   Prime minister Narendra Modi appeal for peace and harmony | MODI | DELHI

   ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ನ್ಯಾಯಮೂರ್ತಿ ಮುರಳೀದರ್ ಅವರ ರಾತ್ರೋರಾತ್ರಿ ವರ್ಗಾವಣೆ ಅಘಾತಕಾರಿಯಷ್ಟೇ ಅಲ್ಲದೆ, ದುಃಖಕರ ಹಾಗೂ ನಾಚಿಕೆಗೇಡಿನ ವಿಚಾರ ಎಂದು ಹೇಳಿದ್ದಾರೆ.

   ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ

   ಲಕ್ಷಾಂತರ ಭಾರತೀಯರು ನ್ಯಾಯಾಂಗದಲ್ಲಿ ಅಘಾದ ನಂಬಿಕೆಯನ್ನಿಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಗು ತೂರಿಸುವುದು ಹಾಗೂ ಜನರ ನಂಬಿಕೆಯನ್ನು ಮುರಿಯುವ ಸರ್ಕಾರ ಯತ್ನಗಳು ಶೋಚನೀಯ ಎಂದು ತಿಳಿಸಿದ್ದಾರೆ.

   ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮರುಳೀಧರ್ ವರ್ಗಾವಣೆ ನಾಚಿಕೆಗೇಡುತನ ಹಾಗೂ ಬೇಸರದ ಸಂಗತಿ ಎಂದು ಕಾಂಗ್ರೆಸ್ ಹೇಳಿದೆ. ಕಳೆದ ಫೆಬ್ರವರಿ.12ರಂದೇ ಸುಪ್ರೀಂಕೋರ್ಟ್ ಕೊಲ್ಜಿಯಂ ಸಭೆ ನಡೆಸಲಾಗಿತ್ತು. ಅಂದೇ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು.

   ನ್ಯಾ.ಮುರಳೀಧರ್ ವರ್ಗಾವಣೆ ಶಿಫಾರಸ್ಸಿಗೆ ವ್ಯಾಪಕ ವಿರೋಧ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ವರ್ಗಾವಣೆ ಶಿಫಾರಸ್ಸನ್ನು ಕಳೆದ ವಾರವೇ ದೆಹಲಿಯ ಹೈಕೋರ್ಟ್ ಬಾರ್ ಅಸೋಸಿಯೇಷನ್ ವ್ಯಾಪಕವಾಗಿ ವಿರೋಧಿಸಿತ್ತು.

   ಈ ರೀತಿಯ ವರ್ಗಾವಣೆ ಕಾನೂನು ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದ ಜನರಿಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ ಎಂದು ಬಾರ್ ಅಸೋಸಿಯೇಷನ್ ಹೇಳಿತ್ತು.

   ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಪತ್ರದ ಸ್ಕ್ರೀನ್ ಶಾಟ್‌ ತೆಗೆದು ಅದನ್ನು ತಮ್ಮ ಟ್ವೀಟ್ ಜೊತೆ ಅಟ್ಯಾಚ್ ಮಾಡಿದ್ದಾರೆ.

   English summary
   Priyanka Said, The midnight transfer of Justice Muralidhar isn't shocking given the current dispensation, but it is certainly sad & shameful.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X