ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಬಂಗಲೆ ಖಾಲಿ ಮಾಡಲು ಸಮಯ ಕೇಳಿದ್ರಾ ಪ್ರಿಯಾಂಕಾ?

|
Google Oneindia Kannada News

ಲಕ್ನೌ, ಜುಲೈ 14: ಪ್ರಿಯಾಂಕಾ ಗಾಂಧಿ ವಾಸವಾಗಿರುವ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ಈ ನೋಟಿಸ್ ಅನ್ವಯ ಆಗಸ್ಟ್ 1ರೊಳಗೆ ಕಾಂಗ್ರೆಸ್ ನಾಯಕಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಿದೆ.

ಆದರೆ, ದೆಹಲಿಯ ಲೋಧಿ ಎಸ್ಟೇಟ್‌ನ ಬಂಗಲೆ ಖಾಲಿ ಮಾಡಲು ಇನ್ನು ಸ್ವಲ್ಪ ದಿನ ಕಾಲಾವಕಾಶ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ವಾದ್ರಾ ಮನವಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆ

ಈ ಸುದ್ದಿಯನ್ನು ಪ್ರಿಯಾಂಕಾ ಗಾಂಧಿ ಮಂಗಳವಾರ ನಿರಾಕರಿಸಿದ್ದಾರೆ. 'ನಾನು ಯಾರಿಗೂ ಸಮಯ ಕೊಡಿ ಎಂದು ಮನವಿ ಮಾಡಿಲ್ಲ' ಎಂದು ವದಂತಿಗಳಗೆ ತೆರೆ ಎಳೆದಿದ್ದಾರೆ. ಮುಂದೆ ಓದಿ...

ಮೋದಿಗೆ ಮನವಿ ಮಾಡಿದ್ರಾ ಪ್ರಿಯಾಂಕಾ?

ಮೋದಿಗೆ ಮನವಿ ಮಾಡಿದ್ರಾ ಪ್ರಿಯಾಂಕಾ?

ಎಸ್‌ಪಿಜಿ ಭದ್ರತೆ ನಿಯಮದಡಿ ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಆಗಸ್ಟ್ 1ರೊಳಗೆ ಖಾಲಿ ಮಾಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಆದರೆ, ಈ ಅವಧಿಯನ್ನು ಮತ್ತಷ್ಟು ದಿನ ವಿಸ್ತರಣೆ ಮಾಡಬೇಕೆಂದು ಪ್ರಧಾನಿ ಮೋದಿಗೆ ಪ್ರಿಯಾಂಕಾ ಮನವಿ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ, ಈ ಸುದ್ದಿ ಸುಳ್ಳು ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ.

ಇದು ನಕಲಿ ಸುದ್ದಿ

ಇದು ನಕಲಿ ಸುದ್ದಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ ''ಇದು ನಕಲಿ ಸುದ್ದಿ. ನಾನು ಸರ್ಕಾರಕ್ಕೆ ಅಂತಹ ಯಾವುದೇ ಮನವಿ ಮಾಡಿಲ್ಲ. ಜುಲೈ 1 ರಂದು ನನಗೆ ಹಸ್ತಾಂತರಿಸಿದ ಪತ್ರದ ಪ್ರಕಾರ, ಆಗಸ್ಟ್ 1 ರೊಳಗೆ ನಾನು #35 ಲೂದಿ ಎಸ್ಟೇಟ್ನಲ್ಲಿರುವ ಸರ್ಕಾರಿ ವಸತಿಯನ್ನು ಖಾಲಿ ಮಾಡುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಬರ್ಟ್ ವಾದ್ರಾ ಸಹ ಅದೇ ಹೇಳಿದ್ದಾರೆ

ರಾಬರ್ಟ್ ವಾದ್ರಾ ಸಹ ಅದೇ ಹೇಳಿದ್ದಾರೆ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ''ಇದು ಸುಳ್ಳು ಸುದ್ದಿ, ನಾವು ಅವಧಿ ವಿಸ್ತರಣೆಗೆ ಮನವಿ ಮಾಡಿಲ್ಲ. 30 ದಿನದೊಳಗೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಅದರಂತೆ ಒಂದು ವಾರಕ್ಕೆ ಮುಂಚೆಯೇ ನಾವು ಮನೆ ಬಿಟ್ಟು ಹೊರಡುತ್ತೇವೆ'' ಎಂದು ಹೇಳಿದ್ದಾರೆ

1997ರಲ್ಲಿ ಲೂದಿ ಎಸ್ಟೇಟ್ ಬಂಗಲೆ ನೀಡಲಾಗಿತ್ತು

1997ರಲ್ಲಿ ಲೂದಿ ಎಸ್ಟೇಟ್ ಬಂಗಲೆ ನೀಡಲಾಗಿತ್ತು

ಪ್ರಿಯಾಂಕಾ ಗಾಂಧಿಗೆ ಒದಗಿಸಲಾಗಿದ್ದ ಎಸ್‌ಪಿಜಿ ಭದ್ರತೆ ಹಾಗು ಝೆಡ್ + ಸೆಕ್ಯುರಿಟಿ ಹಿಂದಕ್ಕೆ ಪಡೆಯಲಾಗಿದೆ. ಹಾಗಾಗಿ, ಸರ್ಕಾರಿ ವಸತಿ ಸೌಲಭ್ಯ ಇರುವುದಿಲ್ಲ. ಪ್ರಿಯಾಂಕಾ ಗಾಂಧಿಯವರಿಗೆ ಫೆಬ್ರವರಿ 21, 1997 ರಂದು ಎಸ್‌ಪಿಜಿ ಭದ್ರತಾ ನೆಲೆಯಲ್ಲಿ ಲೋಧಿ ಎಸ್ಟೇಟ್ ಬಂಗಲೆ ನೀಡಲಾಗಿತ್ತು. ಎಸ್‌ಪಿಜಿ ಭದ್ರತೆ ಎನ್ನುವುದು ಮಾಜಿ ಪ್ರಧಾನಿ ಮತ್ತು ಕುಟುಂಬಸ್ಥರಿಗೆ ನಿರ್ದಿಷ್ಟ ಅವಧಿಯವರೆಗೂ ನೀಡಲಾಗುವುದು ಭದ್ರತಾ ನಿಯಮ.

English summary
Priyanka Gandhi says she has made no request seeking extension of stay at 35, Lodhi Estate. She will be vacating the house by the deadline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X