ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಧಿಗೂ 2 ದಿನ ಮುನ್ನವೇ ಸರ್ಕಾರಿ ಬಂಗಲೆ ಖಾಲಿ ಮಾಡಿದ ಪ್ರಿಯಾಂಕಾ

|
Google Oneindia Kannada News

ದೆಹಲಿ, ಜುಲೈ 30: ಕೇಂದ್ರ ಸರ್ಕಾರದ ಸೂಚನೆಯಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಸರ್ಕಾರಿ ಬಂಗಲೆ ಅಧಿಕೃತವಾಗಿ ತೆರವುಗೊಳಿಸಿದ್ದಾರೆ. ದೆಹಲಿಯ ಲೋದಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಆಗಸ್ಟ್ 1ರೊಳಗೆ ಕಾಂಗ್ರೆಸ್ ನಾಯಕಿ ಖಾಲಿ ಮಾಡಬೇಕಿತ್ತು.

ಗಡುವು ಮುಗಿಯುವುದಕ್ಕೆ 2 ದಿನ ಮುಂಚಿತವಾಗಿಯೇ ಪ್ರಿಯಾಂಕಾ ಬಂಗಲೆ ಖಾಲಿ ಮಾಡಿದ್ದಾರೆ. ದೆಹಲಿಯ ಗುರುಗ್ರಾಮ್‌ನಲ್ಲಿ ಸಿದ್ಧಗೊಳಿಸರುವ ಮನೆಗೆ ಪ್ರಿಯಾಂಕಾ ಸ್ಥಳಾಂತರವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆ

ಆಗಸ್ಟ್ 1ರೊಳಗೆ ಲೋದಿ ಎಸ್ಟೇಟ್‌ ಬಂಗಲೆಯನ್ನು ಖಾಲಿ ಮಾಡುವಂತೆ, ಒಂದು ವೇಳೆ ಗಡುವಿನ ಬಳಿಕಯೂ ಅಲ್ಲೇ ವಾಸವಾಗಿದ್ದರೆ ಅದಕ್ಕೆ ದಂಡದ ರೂಪದಲ್ಲಿ ಶುಲ್ಕ ಕಟ್ಟಬೇಕು ಎಂದು ಜುಲೈ 1 ರಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು.

Priyanka Gandhi Vacates Her Central Government Allotted Accommodation Before 2 Days

ಇದಕ್ಕೂ ಮುಂಚೆ ದೆಹಲಿಯಿಂದ ಮನೆ ತೆರವುಗೊಳಿಸಲಿರುವ ಪ್ರಿಯಾಂಕಾ ಗಾಂಧಿ, ಲಕ್ನೌಗೆ ಹೋಗಲಿದ್ದಾರೆ ಎನ್ನಲಾಗಿತ್ತು. ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆ ಪ್ರಿಯಾಂಕಾ ಲಕ್ನೌನಲ್ಲಿ ನೆಲೆಸಲಿದ್ದಾರೆ ಎಂಬ ಸುದ್ದಿಯೂ ಇತ್ತು. ಆದರೆ, ದೆಹಲಿಯ ಗುರುಗ್ರಾಮ್ ಗೆ ಶಿಫ್ಟ್ ಆಗಿ ಕುತೂಹಲ ಮೂಡಿಸಿದ್ದಾರೆ.

ಅಂದ್ಹಾಗೆ, ಇಷ್ಟು ದಿನ ಪ್ರಿಯಾಂಕಾ ಗಾಂಧಿ ವಾಸವಾಗಿದ್ದ ಲೋಧಿ ಎಸ್ಟೇಟ್‌ ಬಂಗಲೆಯನ್ನು ಬಿಜೆಪಿ ಸಂಸದ ಮತ್ತು ಪಕ್ಷದ ವಕ್ತಾರ ಅನಿಲ್ ಬಲೂನಿಗೆ ನೀಡಲಾಗಿದೆ.

English summary
Congress leader Priyanka Gandhi Vadra vacates her central government allotted accommodation at Delhi's Lodhi Estate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X