ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ: ಪ್ರಿಯಾಂಕಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಉತ್ತರ ಪ್ರದೇಶದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ರೈತರು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಗಿಂತ ಕಡಿಮೆ ದರದಲ್ಲಿ ಭತ್ತ ಮಾರಾಟ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಬುಧವಾರ ಆರೋಪಿಸಿದ್ದಾರೆ.

ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ

ಮೊಹಮ್ಮದಿ ಖಿರಿ ಮಂಡಿಯಲ್ಲಿ ಭತ್ತ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ರೈತನ ವಿಡಿಯೋವೊಂದನ್ನು ಟ್ವಿಟರ್‌ ನಲ್ಲಿ ಷೇರ್ ಮಾಡಿರುವ ಪ್ರಿಯಾಂಕಾ, ಉತ್ತರ ಪ್ರದೇಶ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ದೂರಿದ್ದಾರೆ.

Priyanka Gandhi Says Farmers Not Getting MSP In UP

ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾದ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿದೆ. ಆದರೆ ರೈತರ ನೋವನ್ನು ಆಲಿಸುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಬಹುತೇಕ ಎಲ್ಲ ಸ್ಥಳಗಳಲ್ಲಿ, ರೈತರು ತಮ್ಮ ಭತ್ತದ ಬೆಳೆಗಳನ್ನು ಕ್ವಿಂಟಲ್‌ಗೆ 1,000 ರಿಂದ 1,100 ರೂ.ಗೆ ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ, ಆದರೆ ಭತ್ತಕ್ಕೆ ಕ್ವಿಂಟಲ್ 1,868 ರೂ.ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಇದು ಎಂಎಸ್ ಪಿಗಿಂತ 800 ರೂ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ.

English summary
Congress leader Priyanka Gandhi Vadra on Wednesday attacked the BJP-led government at the Centre over the new farm laws and alleged that farmers in Uttar Pradesh were forced to sell paddy at a rate lower than the minimum support price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X