ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಾಡಕ್ಕೆ ಇಂದಿರಾ ಮುಂದಿನ ಮೊಮ್ಮಗಳು ಪ್ರಿಯಾಂಕಾ, ಟ್ವಿಟ್ಟರ್ ನಲ್ಲಿ ಅಣಕ!

|
Google Oneindia Kannada News

ನವದೆಹಲಿ, ಜನವರಿ 23: ಪ್ರಿಯಾಂಕಾ ಗಾಂಧಿ ಅವರನ್ನು ಎಐಸಿಸಿ(ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿದೆ.

2014 ರ ಲೋಕಸಭಾ ಚುನಾವಣೆಯ ಸಮಯದಲ್ಲೂ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ನಂತರ ಪತಿ ರಾಬರ್ಟ್ ವಾಧ್ರಾ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದಿಂದಾಗ ರಾಜಕೀಯದಿಂದ ದೂರವೇ ಉಳಿದಿದ್ದರು. ಆದರೆ ಪರೋಕ್ಷವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡು, ಸೂಕ್ತ ಸಲಹೆ, ಸೂಚನೆ ನೀಡುತ್ತಿದ್ದರು.

ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ

ಇಂದಿರಾ ಗಾಂಧಿ ಅವರು ಮುದ್ದಿನ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿ ಅವರೇ ನನ್ನ ಉತ್ತರಾಧಿಕಾರಿ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಒಮ್ಮೆ ಹೇಳಿಕೊಂಡಿದ್ದರು. ಇದೀಗ ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಮೂಲಕ ಪ್ರಿಯಾಂಕಾ ವಾಧ್ರಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಳಲುಗಿದ್ದ ಕಾಂಗ್ರೆಸ್ ಹಡಗನ್ನು ಮೇಲೆತ್ತಿ, ಮುನ್ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕು.

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದ, ಅವರ ರಾಜಕೀಯ ಪ್ರವೇಶವನ್ನು ಕೆಲವರು ಸ್ವಾಗತಿಸಿದ್ದರೆ, ಮತ್ತಷ್ಟು ಜನ ಅಣಕಿಸಿದ್ದಾರೆ.

ಕಲಸುಮೇಲೋಗರವಾಯ್ತು ಚುನಾವಣೆ!

ಪ್ರಿಯಾಂಕಾ ಗಾಂಧಿ ಅವರಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಎಸ್ಪಿ ಮತ್ತು ಬಿಎಸ್ಪಿಯ ಮುಸ್ಲಿಂ ಮತ್ತು ದಲಿತರ ಮತಗಳನ್ನು ಒಡೆದಿದೆ. ಮಾಯಾವತಿ ಮತ್ತು ಅಖಿಲೇಶ್ ಅವರನ್ನು ದೂರ ಮಾಡುತ್ತಿದೆ. ಅಷ್ಟೇ ಅಲ್ಲ, ವಿಪಕ್ಷಗಳ ಚುನಾವಣೋತ್ತರ ಮೈತ್ರಿಯ ಸಂಭವವನ್ನೂ ಗೊಂದಲಕ್ಕೀಡು ಮಾಡುತ್ತಿದೆ. ಒಟ್ಟಿನಲ್ಲಿ 2019 ರ ಲೋಕಸಭಾ ಚುನಾವಣೆ ಕಲಸುಮೇಲೋಗರವಾಗಲಿದೆ ಎಂದು ಮಿನ್ಹಾಜ್ ಮರ್ಚೆಂಟ್ ಎಂಬುವವರು ಟ್ವೀಟ್ ಮಾಡಿದ್ದಾರೆ.

Array

ಪಕ್ಷ ಉಳಿಸಲು ಒಬ್ಬರು ಬೇಕಿತ್ತು!

ಪ್ರಿಯಾಂಕಾ ಗಾಂಧಿ ಸಮರ್ಥರೋ, ಅಲ್ಲವೋ ಎಂಬುದು ಗೊತ್ತಿಲ್ಲ. ಏಕೆಂದರೆ ಅವರು ರಾಜಕೀಯದಲ್ಲಿ ಸೊನ್ನೆಯಿಂದ ಆರಂಭಿಸಬೇಕಿದೆ. ಆದರೆ ರಾಹುಲ್ ಗಾಂಧಿ ಅವರಂತೂ ಖಡಿತವಾಗಿಯೂ ಅಸಮರ್ಥರು ಎಂಬುದು ಸತ್ಯ. ಪಕ್ಷವನ್ನು ಉಳಿಸಲು ಸಮರ್ಥರೊಬ್ಬರು ಬೇಕಿತ್ತು!

ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!

ನಮಗೆ ಪಕ್ಷವೇ ಕುಟುಂಬ, ಅವರಿಗೆ ಕುಟುಂಬವೇ ಪಕ್ಷ!

ನಾವು ಬಿಜೆಪಿಯವರಿಗೆ ಪಕ್ಷವೇ ಕುಟುಂಬ. ಆದರೆ ಕಾಂಗ್ರೆಸ್ಸಿನವರಿಗೆ ಒಂದು ದೊಡ್ಡ ಕುಟುಂಬವೇ ಪಕ್ಷ! ಆದ್ದರಿಂದ ಈ ಸುದ್ದಿಯಲ್ಲಿ ಏನು ಹುರುಳಿದೆ? ಕೇವಲ ಹೆಸರು ಬದಲಾಗಿದೆ. ನೆಹರು-ಗಾಂಧಿ-ವಾದ್ರಾ ಪರಿವಾರ್! ಎಂದು ಬಿಜೆಪಿ ನಾಯಕಿ ಮಾಳವಿಕ ಅವಿನಾಶ್ ಟ್ವೀಟ್ ಮಾಡದಿದ್ದಾರೆ.

Array

ಭಾರತದ ಭಾವೀ ಪ್ರಧಾನಿ!

ಭಾರತದ ಭವಿಷ್ಯದ ಪ್ರಧಾನಿ ಪ್ರಿಯಾಂಕಾ ಗಾಂಧಿ ಎಂದು ಫಾರ್ಮರ್ಸ್ ಭಾಯ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?

ಕುಟುಂಬ ರಾಜಕಾರಣ

ಕಾಂಗ್ರೆಸ್ಸಿನ ಮುಖ್ಯ ಗುರಿಯೇ ಕುಟುಂಬ ರಾಜಕಾರಣವನ್ನು ಉತ್ತೇಜಿಸುವುದು. ಅವರು ಕುಟುಂಬವನ್ನು ಪಕ್ಷ ಎಂದುಕೊಂಡರೆ, ಬಿಜೆಪಿ ಪಕ್ಷವನ್ನು ಕುಟುಂಬ ಎಂದುಕೊಂಡಿದೆ. ರಾಹುಲ್ ಗಾಂಧಿ ಅವರ ವೈಫಲ್ಯನ್ನು ಕಾಂಗ್ರೆಸ್ ಈ ಮೂಲಕ ಒಪ್ಪಿಕೊಂದಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

English summary
Priyanka Gandhi Vadra, daughter of UPA president Sonia Gandhi and sister of AICC president Rahul Gandhi appointed as AICC general secretary of eastern Uttar Pradesh. Twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X