ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'3ವರ್ಷದ ಹಿಂದೆ ಪ್ರಿಯಾಂಕಾ ರಾಜಕೀಯಕ್ಕೆ ಬಂದಿದ್ದರೆ ಕತೆ ಬೇರೆ ಇತ್ತು'

|
Google Oneindia Kannada News

ನವದೆಹಲಿ, ಜನವರಿ 24: ಮೂರು ವರ್ಷದ ಹಿಂದೆ, ಅಂದರೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೇ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದರೆ ಕತೆ ಬೇರೆಯೇ ಇರುತ್ತಿತ್ತು ಎಂದು ಜೆಡಿಯು(ಜನತಾ ದಳ-ಯುನೈಟೆಡ್) ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಅಖಾಡಕ್ಕೆ ಇಂದಿರಾ ಮುಂದಿನ ಮೊಮ್ಮಗಳು ಪ್ರಿಯಾಂಕಾ, ಟ್ವಿಟ್ಟರ್ ನಲ್ಲಿ ಅಣಕ!ಅಖಾಡಕ್ಕೆ ಇಂದಿರಾ ಮುಂದಿನ ಮೊಮ್ಮಗಳು ಪ್ರಿಯಾಂಕಾ, ಟ್ವಿಟ್ಟರ್ ನಲ್ಲಿ ಅಣಕ!

ಕಾಂಗ್ರೆಸ್ ನ ಮಾಜಿ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್, ಪ್ರಿಯಾಂಕಾ ಗಾಂಧಿ ಮೂರು ವರ್ಷದ ಮೊದಲೇ ರಾಜಕೀಯಕ್ಕೆ ಬರುತ್ತಾರೆ ಎಂದುಕೊಂಡಿದ್ದೆ. ಅವರು ಬಂದಿದ್ದರೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇತ್ತು ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?

"2016 ರವರೆಗೂ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುತ್ತಾರೆ ಎಂಬ ವದಂತಿ ಜೋರಾಗಿತ್ತು. ಉತ್ತರ ಪ್ರದೇಶದಲ್ಲಿ ನಾವು ನಡೆಸಿದ ಹಲವು ಸಮೀಕ್ಷೆಗಳೂ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುವುದು ಕಾಂಗ್ರೆಸ್ ಗೇ ಒಳ್ಳೆಯದು ಎಂದಿತ್ತು. ಆದರೆ ಕಾಂಗ್ರೆಸ್ ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ತರುವ ಯೋಚನೆ ಮಾಡಲಿಲ್ಲ" ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ

Priyanka Gandhi could have made a big impact on UP assembly polls: Prashant Kishor

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ಎಐಸಿಸಿ(ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿದೆ.

English summary
Priyanka Gandhi Vadra could have made a major difference in the 2017 Uttar Pradesh elections if she had decided to take the plunge into politics over three years ago, Janata Dal-United vice-president Prashant Kishor said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X